ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಆಗಿ ಗಲಾಟೆ
ಮಂಡ್ಯದಲ್ಲಿ ಇಂತಹ ಘಟನೆಗೆ ಅವಕಾಶ ಇರಲಿಲ್ಲ - ಹೆಚ್.ಡಿ ಕುಮಾರಸ್ವಾಮಿ
ನಾನೇ ಖುದ್ದಾಗಿ ನಾಗಮಂಗಲಕ್ಕೆ ಹೋಗ್ತೇನೆ ಎಂದ ಕೇಂದ್ರ ಸಚಿವರು
ಮಂಡ್ಯ: ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಆಗಿರೋ ಘಟನೆ ನಾಗಮಂಗಲದಲ್ಲಿ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಅನ್ಯಕೋಮಿನ ಯುವಕರಿಂದ ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ; ಅನ್ಯಕೋಮಿನ ಯುವಕರಿಂದ ಜಳಪಿಸಿದ ಕತ್ತಿ
ರಸ್ತೆ ಬದಿಯ ಅಂಗಡಿಗಳೂ ಧ್ವಂಸವಾಗಿದ್ದು, ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ನಾಗಮಂಗಲದ ಮಂಡ್ಯ ಸರ್ಕಲ್‌ನಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ನ್ಯೂಸ್ ಫಸ್ಟ್‌ಗೆ ಹೆಚ್‌ಡಿಕೆ ಪ್ರತಿಕ್ರಿಯೆ!
ನಾಗಮಂಗಲದ ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನ್ಯೂಸ್ ಫಸ್ಟ್ ಜೊತೆ ಮಾತನಾಡಿರುವ ಅವರು ಈ ಗಲಾಟೆಯ ಮಾಹಿತಿ ನನಗೆ ರಾತ್ರಿ 9 ಗಂಟೆ ಸುಮಾರಿಗೆ ಗೊತ್ತಾಯಿತು. ಆ ಕೂಡಲೇ ಮಂಡ್ಯ ಎಸ್‌ಪಿಗೆ ಫೋನ್ ಮಾಡಿ ಕೇಳಿದೆ ಎಂದರು.
ಇದನ್ನೂ ಓದಿ: ವರುಣ್ ಆರಾಧ್ಯ & ‘ಅವಳ’ ವಿಡಿಯೋ.. ರೀಲ್ಸ್ ರಾಣಿ ಮಾಡಿದ 3 ಆರೋಪದಲ್ಲಿ ಸೀರಿಯಲ್ ನಟ ಪಕ್ಕಾ ಲಾಕ್?
ಎರಡೂ ಗುಂಪುಗಳಿಂದ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿಯನ್ನ ಹತೋಟಿಗೆ ತೆಗೆದುಕೊಳ್ಳಲು ಪೊಲೀಸರಿಗೆ ಸೂಚಿಸಿದೆ. ಘಟನಾ ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡುತ್ತೇನೆಂದು ಹೇಳಿದ್ದಾರೆ. ಇಂಥ ವಾತಾವರಣಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ.
ಮಂಡ್ಯದಲ್ಲಿ ಇಂತಹ ಘಟನೆಗೆ ಅವಕಾಶ ಇರಲಿಲ್ಲ. ಸ್ಥಳೀಯ ಜನತೆಗೆ ಯಾರೋ ಮಾಡಿದ್ದಕ್ಕೆ ನೀವು ಬಲಿಯಾಗಬೇಡಿ ಎಂದು ನನ್ನ ಕಳಕಳಿಯಿಂದ ಮನವಿ ಮಾಡುತ್ತೇನೆ. ಸೌಹಾರ್ದಯುತವಾಗಿ ಮೆರವಣಿಗೆ ನಡೆಯಬೇಕಾಗಿತ್ತು. ಇಂಥ ದಬ್ಬಾಳಿಕೆಯಿಂದ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು Xನಲ್ಲಿ ಪೋಸ್ಟ್ ಮಾಡಿರುವ ಕುಮಾರಸ್ವಾಮಿ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಗಣಪತಿ ದೇವರ ಮೆರವಣಿಗೆಯಲ್ಲಿ ಶಾಂತಿಯುತವಾಗಿ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ಎಬ್ಬಿಸಿ ಸಾರ್ವಜನಿಕರು-ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದು ಪೆಟ್ರೋಲ್ ಬಾಂಬ್…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 11, 2024
ಈ ಘಟನೆಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ. ನಾಗಮಂಗಲದಲ್ಲಿ ತಲ್ವಾರ್ ಹೊರತಂದು ತೋರಿಸಿದ್ದಾರೆ. ಶಾಂತಿ-ಸೌಹಾರ್ದತೆ ತರಲು ಈ ಸರ್ಕಾರ ಕ್ರಮ ವಹಿಸಬೇಕು. ನಾವು ಏನೇ ಮಾಡಿದ್ರೂ ಸರ್ಕಾರ ನಮ್ಮ ಪರವಾಗಿದೆ. ನಾಳೆ ಸಂಜೆ ನಾನೇ ಖುದ್ದಾಗಿ ನಾಗಮಂಗಲಕ್ಕೆ ಹೋಗ್ತೇನೆ. ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವೆ ಎಂದು ನ್ಯೂಸ್‌ಫಸ್ಟ್‌ಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ