newsfirstkannada.com

ಮಣಿಪುರ ಮತ್ತೆ ಉದ್ವಿಗ್ನ.. ಈ ಬಾರಿ ರಾಜಕಾರಣಿಗಳ ಮನೆಗಳನ್ನು ಟಾರ್ಗೆಟ್​ ಮಾಡಿದ ದುಷ್ಕರ್ಮಿಗಳು

Share :

16-06-2023

    ಕೇಂದ್ರ, ರಾಜ್ಯ ಸಚಿವರ ನಿವಾಸಗಳ ಮೇಲೆ ದಾಳಿ

    ಗುಂಪಲ್ಲಿ ಬಂದು ಪೆಟ್ರೋಲ್​ ಬಾಂಬ್ ಎಸೆದರು

    ಇಂಫಾಲ್​ನಲ್ಲಿ ನಿಯಂತ್ರಣಕ್ಕೆ ಬಾರದ ಹಿಂಸಾಚಾರ

ಇಂಫಾಲ್: ಮಣಿಪುರದಲ್ಲಿ ಹಿಂಸಾಚಾರ ಮತ್ತಷ್ಟು ಹೆಚ್ಚಾಗಿದ್ದು ಈ ಬಾರಿ ರಾಜಕಾರಣಿ ಮನೆಗಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ. ಮೈತೈ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತಿರುವ ಹಿನ್ನೆಲೆಯಲ್ಲಿ ಈ ಹಿಂಸಾಚಾರ ಕಳೆದ ಕೆಲವು ದಿನಗಳಿಂದ ನಡೆಯುತ್ತಲಿದೆ.

ಮಣಿಪುರದ ರಾಜಧಾನಿ ಇಂಫಾಲ್​ನಲ್ಲಿರುವ ಕೇಂದ್ರದ ರಾಜ್ಯ ಸಚಿವ ಆರ್​.ಕೆ ರಂಜನ್​ ಸಿಂಗ್​ ಹಾಗೂ ರಾಜ್ಯದ ಸಚಿವೆ ನೆಮ್ಚಾ ಕಿಪ್ಗೆನ್ ಅವರ ನಿವಾಸಗಳ ಮೇಲೆ ರಾತ್ರಿ ವೇಳೆ ದಾಳಿ ಮಾಡಿದ್ದಾರೆ. ಸಚಿವ ರಂಜನ್​ ಸಿಂಗ್ ಮನೆಗೆ 14 ಭದ್ರತಾ ಸಿಬ್ಬಂದಿ, ಮತ್ತು 8 ಹೆಚ್ಚುವರಿ ಗಾರ್ಡ್‌ಗಳು ಕರ್ತವ್ಯದಲ್ಲಿದ್ದರು. ಅಲ್ಲದೇ ಇಂಫಾಲ್​ನಲ್ಲಿ ಕರ್ಫ್ಯೂ ಜಾರಿ ಇದ್ದರು ಆರೋಪಿಗಳು ಸಚಿವರ ಮನೆಯನ್ನು ಸುತ್ತುವರಿದು ಪೆಟ್ರೋಲ್ ಬಾಂಬ್​ಗಳನ್ನು ಎಸೆದಿದ್ದಾರೆ. ಅವರು ಗುಂಪು ಗುಂಪಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ನಾವು ಏನು ಮಾಡಲು ಆಗಿಲ್ಲ. ಸುಮಾರು 1000ಕ್ಕೂ ಹೆಚ್ಚು ಜನರು ಇದ್ದರು ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ದಾಳಿ ವೇಳೆ ಸಚಿವರು ಮನೆಯಲ್ಲಿ ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿಯಾಗಿಲ್ಲ ಎನ್ನಲಾಗಿದೆ. ಮನೆಯಲ್ಲಿದ್ದ ಕೆಲವು ವಸ್ತುಗಳು ಬೆಂಕಿಯಿಂದ ಸುಟ್ಟು ಕರಕಲಾಗಿವೆ. ಈ ದಾಳಿಯಿಂದ ಪರಿಸ್ಥಿತಿ ಇನ್ನಷ್ಟು ಬಿಗಾಡಯಿಸಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದು ಅಲ್ಲದೇ 2 ದಿನಗಳ ಹಿಂದೆ ಕೇಂದ್ರ ಗೃಹಮಂತ್ರಿ ಅಮಿತ್​ ಶಾ ಅವರು ಮಣಿಪುರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಬಳಿಕ ಇನ್ನಷ್ಟು ಪೊಲೀಸ್ ಸಿಬ್ಬಂದಿ, ಭಾರತೀಯ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ. ಆದರೂ ಮೈತೈ ಸಮುದಾಯದ ವಿರುದ್ಧದ ಹೋರಾಟ ನಿಲ್ಲುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇಂಫಾಲ್​ ಗಡಿ ಪ್ರದೇಶದಲ್ಲಿ ಜೂನ್​ 13 ರಂದು ದುಷ್ಕರ್ಮಿಗಳ ಫೈರಿಂಗ್​ನಿಂದ 9 ಮಂದಿ ಸಾವನ್ನಪ್ಪಿದ್ದರು. 10 ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದರ ಬೆನ್ನಲ್ಲೆ ಈಗ ಸಚಿವರ ಮನೆಗಳ ಮೇಲೆ ದಾಳಿ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಣಿಪುರ ಮತ್ತೆ ಉದ್ವಿಗ್ನ.. ಈ ಬಾರಿ ರಾಜಕಾರಣಿಗಳ ಮನೆಗಳನ್ನು ಟಾರ್ಗೆಟ್​ ಮಾಡಿದ ದುಷ್ಕರ್ಮಿಗಳು

https://newsfirstlive.com/wp-content/uploads/2023/06/MANIPUR_VIOLENCE.jpg

Load More