newsfirstkannada.com

×

ರಾಹುಲ್ ಗಾಂಧಿ ಲಡಾಖ್ ಪ್ರವಾಸ; ಧನ್ಯವಾದ ತಿಳಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು.. ಕಾರಣ ಏನು ಗೊತ್ತಾ..?

Share :

Published August 20, 2023 at 9:12am

    ಬೈಕ್​​ ರೈಡ್​ ಮೂಲಕ ರಾಹುಲ್ ಗಾಂಧಿ ಲಡಾಖ್ ಪ್ರವಾಸ

    ಭಾರೀ ವೈರಲ್ ಆಗ್ತಿದೆ ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್

    ಎರಡು ದಿನಗಳ ಲಡಾಖ್ ಪ್ರವಾಸದಲ್ಲಿ ರಾಹುಲ್ ಗಾಂಧಿ

ಲಡಾಖ್​ ಪ್ರವಾಸದಲ್ಲಿರೋ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಬೈಕ್ ರೈಡ್ ಮಾಡಿ ಗಮನ ಸೆಳೆದಿದ್ದಾರೆ. ಲಡಾಖ್​ನ  ಪ್ಯಾಂಗಾಂಗ್‌ ಲೇಕ್‌ಗೆ ಕೆಟಿಎಂ 390 ಏರಿ ಸವಾರಿ ಮಾಡಿದ್ದರು. ಈ ಫೋಟೋಗಳನ್ನ ಖುದ್ದು ರಾಹುಲ್‌ ಗಾಂಧಿ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೆಲ್ಮೆಟ್‌, ಗ್ಲೌಸ್, ರೈಡಿಂಗ್‌ ಬೂಟ್ಸ್‌ ಹಾಗೆ ಜಾಕೆಟ್‌ ಹಾಕ್ಕೊಂಡು ಕಂಪ್ಲೀಟ್‌ ರೈಡರ್ ರೀತಿ ಸವಾರಿ ಮಾಡಿದ್ದಾರೆ. ಇದೀಗ ರಾಹುಲ್​ ಬೈಕ್ ರೈಡ್​ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಮೋದಿ ಸರ್ಕಾರ ಸರಿಪಡಿಸಿರೋ ರಸ್ತೆ ಅಷ್ಟು ಚೆನ್ನಾಗಿದೆ ಅದಕಾದರೂ ಬೈಕ್ ರೈಡ್ ಹೋಗಬೇಕು ಅಲ್ವಾ ಎಂದು ರಾಹುಲ್ ಗಾಂಧಿಯ ಕಾಲೆಳಿದಿದ್ದಾರೆ.

ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್​ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಫೋಟೋ ಜೊತೆ ಕೊಲಾಜ್ ಆಗಿರುವ ವಿಡಿಯೋ 2012ರಲ್ಲಿ ಪ್ಯಾಂಗಾಂಗ್ ಹೋಗುವ ರಸ್ತೆ ಹೇಗಿತ್ತು ಅನ್ನೋದನ್ನು ಹೇಳುತ್ತಿದೆ. ಬಂಡೆ ಕಲ್ಲುಗಳಿಂದ ತುಂಬಿದ್ದ ರಸ್ತೆಯಲ್ಲಿ ವಾಹನವೊಂದು ಹೋಗಲು ಪರದಾಡುತ್ತಿದೆ. ಇನ್ನು ಫೋಟೋದಲ್ಲಿ ರಾಹುಲ್ ಗಾಂಧಿ ನಿನ್ನೆ ಬೈಕ್ ಮೂಲಕ ಪ್ಯಾಂಗಾಂಗ್ ರಸ್ತೆಯಲ್ಲಿ ಸವಾರಿ ಮಾಡುತ್ತಿರೋದಾಗಿದೆ. ಅಂದು ಹೇಗಿತ್ತು? ಇಂದು ಈ ರಸ್ತೆ ಹೇಗಾಗಿದೆ ಅನ್ನೋದನ್ನು ಹೇಳ್ತಿದೆ.

ಈ ವಿಡಿಯೋವನ್ನು ಶೇರ್ ಮಾಡಿರುವ ಸಚಿವರು, ನರೇಂದ್ರ ಮೋದಿ ಅವರು ನಿರ್ಮಿಸಿರುವ ರಸ್ತೆಯನ್ನು ನೀವು ಪ್ರಮೋಟ್ ಮಾಡುತ್ತಿರೋದಕ್ಕೆ ಧನ್ಯವಾದಗಳು. ಇದಕ್ಕೂ ಮೊದಲು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಹೇಗೆ ಬೆಳೆಯುತ್ತಿದೆ ಎಂದು ಜನರಿಗೆ ತೋರಿಸಿಕೊಟ್ಟಿದ್ದೀರಿ. ಮಾತ್ರವಲ್ಲ, ಶ್ರೀನಗರದ ಲಾಲ್ ಚೌಕ್​ನಲ್ಲಿ ಹೇಗೆ ಶಾಂತಿಯುತವಾಗಿ ಧ್ವಜ ಹಾರಿಸಬಹುದು ಅನ್ನೋದನ್ನೂ ತಿಳಿಸಿದ್ದೀರಿ. ನಿಮಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಹುಲ್ ಗಾಂಧಿ ಲಡಾಖ್ ಪ್ರವಾಸ; ಧನ್ಯವಾದ ತಿಳಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು.. ಕಾರಣ ಏನು ಗೊತ್ತಾ..?

https://newsfirstlive.com/wp-content/uploads/2023/08/RAHUL_GANDHI_BIKE.jpg

Load More