newsfirstkannada.com

ಮಳೆಗಾಗಿ ವಿಶಿಷ್ಟ ಪ್ರಾರ್ಥನೆ.. ದೇಹದ ಎದೆಯ ಭಾಗವನ್ನು ಕೊಯ್ದು ದೇವರಿಗೆ ರಕ್ತ ಅರ್ಪಿಸಿದ ಭಕ್ತರು!  

Share :

30-10-2023

    ಚಿಕ್ಕಬಳ್ಳಾಪುರಲ್ಲೊಂದು ಭಕ್ತರ ವಿಶಿಷ್ಟ ಆಚರಣೆ

    ಮಳೆಗಾಗಿ ಗ್ರಾಮದೇವತೆ ಚೌಡೇಶ್ವರಿಗೆ ರಕ್ತತರ್ಪಣ ಮಾಡಿದ ಭಕ್ತರು

    ದೇಹದ ಭಾಗ ಕೊಯ್ದು ದೇವಿಗೆ ರಕ್ತವನ್ನು ನೀಡಿದ ತೊಗಟ ವೀರ ಕ್ಷತ್ರೀಯರು

ಚಿಕ್ಕಬಳ್ಳಾಪುರ: ಮಳೆಗಾಗಿ ಪ್ರಾರ್ಥಿಸಿ ಚಾಕುಗಳಲ್ಲಿ ಕೊಯ್ದುಕೊಂಡು ದೇವರಿಗೆ ರಕ್ತ ಅರ್ಪಿಸಿದ ವಿಚಿತ್ರ ಆಚರಣೆಯೊಂದು ಚೇಳೂರು ತಾಲ್ಲೂಕು ಹೊಸಹುಡ್ಯ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದೇವತೆ ಚೌಡೇಶ್ವರಿ ದೇವರ ಉತ್ಸವದಲ್ಲಿ ಜನರು ರಕ್ತ ತರ್ಪಣ ಮಾಡಿದ್ದಾರೆ. ಚಾಕುಗಳಿಂದ ದೇಹದ ಎದೆಯ ಭಾಗಗಳಲ್ಲಿ ಕೊಯ್ದುಕೊಂಡು ವಿಚಿತ್ರ ಆಚರಣೆಯನ್ನು ಸಂಭ್ರಮಿಸಿದ್ದಾರೆ. ಗ್ರಾಮದ ತೊಗಟ ವೀರ ಕ್ಷತ್ರೀಯರಿಂದ ಈ ಕಾರ್ಯ ನಡೆದಿದೆ.

ಚೇಳೂರು ಭಾಗದ ಜನರು ಮಳೆ ಬೆಳೆ ಇಲ್ಲದೆ ಕಂಗಾಲಾಗಿದ್ದರು. ಹೀಗಾಗಿ ಮಳೆಗೆ ಪ್ರಾರ್ಥಿಸಿ ಗ್ರಾಮಸ್ಥರು ವಿಚಿತ್ರ ಆಚರಣೆ ಮಾಡಿದ್ದಾರೆ. ಬರಗಾಲದ ವಾತಾವರಣದಿಂದ ಮುಕ್ತಿ ನೀಡಿ ಮಳೆ ಬರುವಂತೆ ಪ್ರಾರ್ಥಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆಗಾಗಿ ವಿಶಿಷ್ಟ ಪ್ರಾರ್ಥನೆ.. ದೇಹದ ಎದೆಯ ಭಾಗವನ್ನು ಕೊಯ್ದು ದೇವರಿಗೆ ರಕ್ತ ಅರ್ಪಿಸಿದ ಭಕ್ತರು!  

https://newsfirstlive.com/wp-content/uploads/2023/10/Chikkaballapura.jpg

Load More