newsfirstkannada.com

ಮಕ್ಕಳನ್ನು ಶಾಲೆಗೆ ಸೇರಿಸೋ ಮುನ್ನ ಎಚ್ಚರ! ಪೋಷಕರು ಓದಲೇಬೇಕಾದ ಸ್ಟೋರಿ ಇದು

Share :

06-11-2023

    ಪೋಷಕರು ಹಾದಿ ತಪ್ಪದಂತೆ ಶಿಕ್ಷಣ ಇಲಾಖೆಯಿಂದ ನಿರ್ಧಾರ!

    ಕೆಲವೇ ದಿನಗಳಲ್ಲಿ ಅನಧಿಕೃತ ಶಾಲೆಗಳ ಪಟ್ಟಿ ರಿಲೀಸ್‌ ಸಾಧ್ಯತೆ

    ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೆ ಒಳಗಾಗಿದ್ದ ಪೋಷಕರಿಗೆ ಗುಡ್​ನ್ಯೂಸ್​​

ಬೆಂಗಳೂರು: ಶಾಲೆಗಳಲ್ಲಿ ನಡೆಯೋ ಕಳ್ಳಾಟಕ್ಕೆ ಬ್ರೇಕ್​ ಹಾಕೋದಕ್ಕೆ ಅಂತ ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ. ಇನ್ನು, ಈ ಅನಧಿಕೃತ ಶಾಲೆಗಳ ಪಟ್ಟಿಯಲ್ಲಿ ಬೆಂಗಳೂರಿನ ಶಾಲೆಗಳ ಪಾಲು ಎಷ್ಟಿದೆ, ನಿಮ್ಮ ಮಕ್ಕಳಿಗೆ ಯಾವ ಸ್ಕೂಲ್‌ ಬೆಸ್ಟ್‌ ಅನ್ನೋದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಇತ್ತೀಚೆಗೆ ಶಾಲೆಗಳಲ್ಲಿ ನಡೆಯುತ್ತಿರೋ ಕಳ್ಳಾಟದಿಂದ ಪೋಷಕರು, ಮಕ್ಕಳು ಕಂಗಾಲಾಗಿದ್ದರು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೆ ಒಳಗಾಗಿದ್ದ ಪೋಷಕರಿಗೆ ಇದೀಗ ಶಿಕ್ಷಣ ಇಲಾಖೆ ಗುಡ್​ನ್ಯೂಸ್​​ ಕೊಟ್ಟಿದೆ. ಕಳೆದ ಭಾರೀ ಅನಧಿಕೃತ ಶಾಲೆಗಳ ಹಾವಳಿಯಿಂದ ಮೋಸ ಹೋಗಿದ್ದ ಪೋಷಕರು, ಮತ್ತೆ ಹಾದಿ ತಪ್ಪಬಾರದು ಅಂತಾ ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಪಟ್ಟಿ ರಿಲೀಸ್​ಗೆ ಸಿದ್ಧತೆ ಮಾಡಿಕೊಂಡಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳೇ ಅನಧಿಕೃತ ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಅನಧಿಕೃತ ಶಾಲೆಗಳ ಪಟ್ಟಿ ಕೆಲವೇ ದಿನಗಳಲ್ಲಿ ರಿಲೀಸ್‌ ಕೂಡ ಆಗಲಿದೆ.

ಪೋಷಕರು ಗಮನಿಸಬೇಕಾದ ಅಂಶಗಳು ಏನು..?

ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಶಾಲಾ ನೋಂದಣಿ ಹಾಗೂ ಅನುಮತಿ ಪಡೆಯದೇ ನಡೆಸುತ್ತಿರುವ ಶಾಲೆಗಳ ಬಗ್ಗೆ ಪೋಷಕರು ಗಮನ ಹರಿಸಬೇಕು ಹಾಗೆ ರಾಜ್ಯ ಪಠ್ಯಕ್ರಮದಲ್ಲಿ ಅನುಮತಿ ಪಡೆದು ಇತರೆ ಪಠ್ಯಕ್ರಮ ಬೋಧಿಸುತ್ತಿದ್ದರಾ ಅಂತ ಗಮನ ಹರಿಸಿ, ಅನಧಿಕೃತ ಮಾಧ್ಯಮ ಹಾಗೂ ವಿಭಾಗ ಹೊಂದಿರುವ ಶಾಲೆಗಳು, ಅನಧಿಕೃತವಾಗಿ ಸ್ಥಳಾಂತರಗೊಂಡ ಹಾಗೂ ಹಸ್ತಾಂತರಗೊಂಡಿರುವ ಶಾಲೆಗಳು, ರಾಜ್ಯಪಠ್ಯಕ್ರಮ ಅನುಮತಿ ಪಡೆದು ಖಾಸಗಿ ಪಠ್ಯ ಬೋಧಿಸುತ್ತಿರುವ ಶಾಲೆಗಳ ಬಗ್ಗೆ ಗಮನ ಹರಿಸಿ ಪೋಷಕರು ಮಕ್ಕಳನ್ನ ಸೇರಿಸಿ. ಶಾಲೆಯ ಸಂಪೂರ್ಣ ಮಾಹಿತಿ ಪಡೆಯಬೇಕು. ಜೊತೆಗೆ ಶಾಲೆಯ ಮಾನ್ಯತೆ ಇದಿಯೋ ಇಲ್ವಾ ಅಂತ ಒಮ್ಮೆ ಪರಿಶೀಲನೆ ಮಾಡಿಕೊಳ್ಳಬೇಕು. ಜೊತೆಗೆ ಶಾಲೆಯ ಮಾಹಿತಿಯನ್ನ ಬಿಇಒ ಕಚೇರಿಯಲ್ಲಿ ಪಡೆದುಕೊಳ್ಳವುದು ಉತ್ತಮ. ಒಟ್ಟಿನಲ್ಲಿ ಶಾಲೆಗಳಲ್ಲಿ ಅಡ್ಮಿಷನ್‌ ಶುರುವಾಗೋ ಹೊತ್ತಲ್ಲೇ ಅನಧಿಕೃತ ಶಾಲೆಗಳ ಪಟ್ಟಿ ರಿಲೀಸ್​ಗೆ ಸಿದ್ದವಾಗಿರುವ ಸುದ್ದಿ ಪೋಷಕರಿಗೆ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳನ್ನು ಶಾಲೆಗೆ ಸೇರಿಸೋ ಮುನ್ನ ಎಚ್ಚರ! ಪೋಷಕರು ಓದಲೇಬೇಕಾದ ಸ್ಟೋರಿ ಇದು

https://newsfirstlive.com/wp-content/uploads/2023/09/school-6.jpg

Load More