newsfirstkannada.com

‘ಮೋದಿ ಇರೋವರೆಗೂ ಯಾರೂ ನಮ್ಮನ್ನ ಅಲ್ಲಾಡಿಸೋಕೆ ಆಗಲ್ಲ’- ಬಿ.ಎಸ್‌ ಯಡಿಯೂರಪ್ಪ ಘರ್ಜನೆ

Share :

18-06-2023

    ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಅಂದುಕೊಳ್ಳಬೇಡಿ

    ನಮ್ಮ ಪ್ರಧಾನಿ ವಿಶ್ವವೇ ಮೆಚ್ಚಿದ ನಾಯಕ ಮೋದಿ ಮುಂದೆ ಇವಱರು ಇಲ್ಲ

    ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯುವ ವಿಶ್ವಾಸ ನನಗಿಲ್ಲ ಎಂದ BSY

ಶಿವಮೊಗ್ಗ: ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಅಂದುಕೊಳ್ಳಬೇಡಿ. ಪ್ರಧಾನಿ ನರೇಂದ್ರ ಮೋದಿ ಇರೋ ತನಕ ಯಾರೂ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಮತ್ತೊಮ್ಮೆ ಹೋರಾಟದ ಮೂಲಕ ನಾವು ಎದ್ದು ನಿಲ್ಲಬೇಕಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅಬ್ಬರಿಸಿದ್ದಾರೆ.

ಪ್ರಧಾನಿ ಮೋದಿ ಸರ್ಕಾರದ 9ನೇ ವರ್ಷಾಚರಣೆ ಹಿನ್ನೆಲೆ ಶಿವಮೊಗ್ಗದಲ್ಲಿ ಬಿಜೆಪಿ ಜನಸಭೆ -ಸಾರ್ವಜನಿಕ ಸಭೆ ಆಯೋಜಿಸಿತ್ತು. ಈ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಬೇರೆ ಬೇರೆ ಕಾರಣಕ್ಕೆ ನಮಗೆ ಹಿನ್ನಡೆಯಾಗಿದೆ. ಈ ಚುನಾವಣೆಯಲ್ಲಿ ಈ ರೀತಿಯ ಸೋಲಾಗುತ್ತದೆ ಎಂದು ನಾವ್ಯಾರು ಭಾವಿಸಿರಲಿಲ್ಲ. ರಾಜ್ಯದ ಜನತೆಗೆ ಮುಂದಿನ ಕಾಂಗ್ರೆಸ್‌ನ ಷಡ್ಯಂತ್ರ ಅರಿವಾಗಲಿದೆ. ಕಾಂಗ್ರೆಸ್‌ನವರು ನೀಡಿದ ಭರವಸೆ ಜಾರಿಗೆ ಆಗ್ರಹಿಸಿ ನಾವು ಹೋರಾಟ ನಡೆಸಬೇಕಿದೆ. ತಾನು ನೀಡಿದ ಭರವಸೆ ಈಡೇರಿಸುವ ಶಕ್ತಿ ಕಾಂಗ್ರೆಸ್‌ಗೆ ಇಲ್ಲ. ಹೀಗಾಗಿ ನಾವು ಹೋರಾಟದ ಮೂಲಕ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಬೇಕಿದೆ ಎಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಮುಂದೆ ಇವಱರು ನಿಲ್ಲುವುದಿಲ್ಲ. ನಮ್ಮ ಪ್ರಧಾನಿ ವಿಶ್ವವೇ ಮೆಚ್ಚಿರುವ ವ್ಯಕ್ತಿ. ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಅಂದುಕೊಳ್ಳಬೇಡಿ. ಮೋದಿ ಇರುವ ತನಕ ಯಾರೂ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಮುಂದಿನ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಯೋಗ್ಯರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಬೇಕಿದೆ.

ಇದನ್ನೂ ಓದಿ: ಅಕ್ಕಿ ಕೊಡೋದು ಅನ್ನ ತಿನ್ನಲಿ ಅಂತಾ ದುಡ್ಡು ತಿನ್ನಲಿ ಅಂತಾನ? ಸಿಎಂ ಸಿದ್ದರಾಮಯ್ಯ ಫುಲ್ ಗರಂ ಆಗಿದ್ಯಾಕೆ?

ಪಕ್ಷದ ಸಂಘಟನೆ ಕುರಿತು ಮಾತನಾಡಿದ ಯಡಿಯೂರಪ್ಪ, ನಾವು ಮತ್ತೊಮ್ಮೆ ಪುಟಿದೇಳಬೇಕಿದೆ. ಸಂಘಟನೆ ಕಡೆಗೆ ಗಮನ ಹರಿಸಬೇಕಿದೆ. ಈ ಸರ್ಕಾರ ಬಹಳ ದಿನ ಉಳಿಯುವ ವಿಶ್ವಾಸ ನನಗಿಲ್ಲ. 65 ಶಾಸಕರು ಸದನದ ಒಳಗೆ-ಹೊರಗೆ ಹೋರಾಟ ಮಾಡಬೇಕಿದೆ. ವಿಶ್ವಾಸದೊಂದಿಗೆ ಮುನ್ನಡೆಯಬೇಕಿದೆ. ಮುಂಬರುವ ಚುನಾವಣೆಯಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದೆ ಸಾಗಬೇಕಿದೆ ಎಂದು ಹೇಳಿದರು.

ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್‌ರಲ್ಲಿ ಒಡಕು ಮೂಡಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಕಾರ್ಯಕರ್ತರು ಜನರಿಗೆ ನಮ್ಮ ಸಾಧನೆ ತಿಳಿಸಬೇಕಿದೆ. ನಮ್ಮ ಅವಧಿಯಲ್ಲಿ ನೀಡಿದ ಭಾಗ್ಯಲಕ್ಷ್ಮಿ, ಉಚಿತ ವಿದ್ಯುತ್, ಸೈಕಲ್ ಮತ್ತಿತರ ಕೊಡುಗೆಯನ್ನು ಜನರಿಗೆ ತಿಳಿಸಬೇಕಿದೆ. ಮುಂದಿನ ದಿನಗಳಲ್ಲಿ ವಿಧಾನಸಭೆ ಕ್ಷೇತ್ರವಾರು ನಾನು ಪ್ರವಾಸ ಮಾಡಲು ಸಿದ್ಧ.

ಕಾಂಗ್ರೆಸ್‌ ಭರವಸೆ ತಾತ್ಕಾಲಿಕ. ಅದು ಈಡೇರುವ ವಿಶ್ವಾಸ ನನಗೂ ಇಲ್ಲ, ನಿಮಗೂ ಇಲ್ಲ. ಜನ ನಮ್ಮ ಸರ್ಕಾರ ಕೊಡುಗೆಯನ್ನು ಮರೆತಿಲ್ಲ. ಯಾವುದೇ ಕಾರಣಕ್ಕೂ ನಾವು ಧೃತಿಗೆಡುವ ಅಗತ್ಯವಿಲ್ಲ. ಕಾರ್ಯಕರ್ತರು ಗಟ್ಟಿಯಾಗಿ ನಿಂತರೆ ಸರ್ಕಾರದ ಹುಳುಗಳನ್ನು ಹೊರಗೆ ತೆಗೆದು ಹೋರಾಟ ನಡೆಸಬಹುದು. ಹಾಗಾಗಿ ಕಾರ್ಯಕರ್ತರು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಮೂಲಕ ಪಕ್ಷವನ್ನು ಬಲಪಡಿಸಬೇಕಿದೆ. ಕಾರ್ಯಕರ್ತರು ಕರೆದ ಕಡೆಗೆ ಬರಲು ನಾನು ಸಿದ್ಧ. ಮತ್ತೊಮ್ಮೆ ಹೋರಾಟದ ಮೂಲಕ ನಾವು ಎದ್ದು ನಿಲ್ಲಬೇಕಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಮೋದಿ ಇರೋವರೆಗೂ ಯಾರೂ ನಮ್ಮನ್ನ ಅಲ್ಲಾಡಿಸೋಕೆ ಆಗಲ್ಲ’- ಬಿ.ಎಸ್‌ ಯಡಿಯೂರಪ್ಪ ಘರ್ಜನೆ

https://newsfirstlive.com/wp-content/uploads/2023/06/BS-Yediyurappa-2.jpg

Load More