newsfirstkannada.com

BMW ಕಾರಿನ ಮ್ಯಾಟ್ ಕೆಳಗೆ ಬರೋಬ್ಬರಿ 12 kg ಚಿನ್ನ; ಹೊಳೆಯೋ ಬಂಗಾರ ನೋಡಿ ದಂಗಾದ ಐಟಿ ಅಧಿಕಾರಿಗಳು

Share :

26-06-2023

    ಕಾನ್ಪರದ ಪ್ರಮುಖ ಚಿನ್ನದ ವ್ಯಾಪಾರಿ ಮನೆ, ಕಚೇರಿ ಮೇಲೆ IT ರೇಡ್​

    4 ದಿನದ ರೇಡ್​ ವೇಳೆ ಹಲವು ಮಹತ್ವದ ದಾಖಲೆ, ಆಸ್ತಿ ಪತ್ರ ವಶಕ್ಕೆ

    ಕಾರಿನಲ್ಲಿ ಜೋಡಿಸಿದ್ದ ಬಂಗಾರ ನೋಡಿ ಐಟಿ ಅಧಿಕಾರಿಗಳಿಗೆ ಶಾಕ್​!

ಲಕ್ನೋ: ಕಾನ್ಪುರದ ಉದ್ಯಮಿ ನಿವಾಸ ಹಾಗೂ ಜ್ಯುವೆಲರ್ಸ್​ ಮೇಲೆ ಐಟಿ ದಾಳಿ ನಡೆದಾಗ BMW ಕಾರಿನ ಮ್ಯಾಟ್ ಕೆಳಗೆ ಕೋಟಿ ಕೋಟಿ ಬೆಲೆ ಬಾಳುವ ಚಿನ್ನ ಸಿಕ್ಕಿದೆ. ಕಾರಿನ ಮ್ಯಾಟ್‌ ಕೆಳಗೆ 12 ಕೆ.ಜಿ ಬಂಗಾರ ಸಿಕ್ಕಿರುವುದು ಐಟಿ ಅಧಿಕಾರಿಗಳಿಗೆ ಫುಲ್​ ಶಾಕ್​ ಆಗಿದೆ.

ಕಾನ್ಪುರದಲ್ಲಿ ಚಿನ್ನದ ವ್ಯಾಪಾರ ಮಾಡುವ ಉದ್ಯಮಿ ಕೈಲಾಶ್ ನಾಥ್ ಅಗರ್ವಾಲ್​ ನಿವಾಸ ಹಾಗೂ ರಾಧಾ ಮೋಹನ್ ಪುರುಷೋತ್ತಮ್ ದಾಸ್ ಜ್ಯುವೆಲರ್ಸ್ ಮೇಲೆ ಕಳೆದ 4 ದಿನಗಳಿಂದ ಐಟಿ ರೇಡ್​ ನಡೆಸಲಾಗುತ್ತಿದೆ. ಈಗಾಗಲೇ ಸಾಕಷ್ಟು ಹಣ, ಆಸ್ತಿ ಪತ್ರಗಳನ್ನು, ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆಯಲ್ಲಿದ್ದ BMW ಕಾರು ಅಧಿಕಾರಿಗಳ ಕಣ್ಣಿಗೆ ಕಾಣಿಸದಂತೆ ನಿಲ್ಲಿಸಲಾಗಿತ್ತು. ಅದರ ಬಳಿ ಯಾರು ಸುಳಿಯದಂತೆ ವ್ಯವಸ್ಥೆ ಮಾಡಿದ್ದರು. ಆದ್ರೆ ನಂತರ ಕಾರು ಇರುವುದು ಪತ್ತೆ ಮಾಡಿದ ಸಿಬ್ಬಂದಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕಾರಿನ ಮ್ಯಾಟ್​ ಕೆಳಗೆ ಚಿನ್ನದ ಬಿಸ್ಕತ್​ಗಳನ್ನು ಜೋಡಿಸಲಾಗಿತ್ತು. ಇದನ್ನು ನೋಡಿದ ಅಧಿಕಾರಿಗಳು ಒಂದು ಕ್ಷಣ ದಂಗಾಗಿ ಹೋಗಿದ್ದರು ಎನ್ನಲಾಗಿದೆ. ಇದರ ಬೆಲೆ ಎಷ್ಟು ಎಂದು ಇನ್ನು ಐಟಿ ಅಧಿಕಾರಿಗಳು ಹೇಳಿಲ್ಲವಾದ್ರೂ ಸಿಕ್ಕಿದ್ದು ಮಾತ್ರ 12 ಕೆ.ಜಿ ಚಿನ್ನ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಇವರು ಕೋಟ್ಯಂತರ ರೂಪಾಯಿ ಟ್ಯಾಕ್ಸ್​ ಕಟ್ಟದೇ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಕಾನ್ಪುರದಲ್ಲಿನ ರಾಧಾ ಮೋಹನ್ ಪುರುಷೋತ್ತಮ್ ದಾಸ್ ಜ್ಯುವೆಲರ್ಸ್ ಮಾಲೀಕ ಕೈಲಾಶ್ ನಾಥ್ ಅಗರ್ವಾಲ್ ಅವರ ಕುಟುಂಬದ ಸದಸ್ಯರ ಮನೆ, ಕಚೇರಿ, ಜ್ಯುವೆಲರ್ಸ್​ ಮೇಲೂ ದಾಳಿ ನಡೆಸಲಾಗುತ್ತಿದೆ. ಶನಿವಾರದಂದು ಕ್ಯಾಶ್​ ಸೇರಿದಂತೆ ಹಲವು ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೈಲಾಶ್ ನಾಥ್ ಅಗರ್ವಾಲ್ ಅವರ ಸಹೋದರ ಅಮರ್​ನಾಥ್ ಅಗರ್ವಾಲ್ ಅವರ ಜ್ಯುವೆಲರ್ಸ್, ಎಮರಾಲ್ಡ್‌ನ ವ್ಯಾಪಾರಿ ಸಂಜೀವ್ ಜುಂಜುನ್‌ ವಾಲಾ ಮತ್ತು ಇಬ್ಬರು ದೊಡ್ಡ ಬೆಳ್ಳಿ ಉದ್ಯಮಿಗಳಾದ ಸುರೇಂದ್ರ ಜಖೋಡಿಯಾ ಮತ್ತು ಸೌರಭ್ ವಾಜಪೇಯಿ ಅವರ ನಿವಾಸ, ಬಂಗಾಲೆಗಳ ಮೇಲೂ ರೇಡ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BMW ಕಾರಿನ ಮ್ಯಾಟ್ ಕೆಳಗೆ ಬರೋಬ್ಬರಿ 12 kg ಚಿನ್ನ; ಹೊಳೆಯೋ ಬಂಗಾರ ನೋಡಿ ದಂಗಾದ ಐಟಿ ಅಧಿಕಾರಿಗಳು

https://newsfirstlive.com/wp-content/uploads/2023/06/UP_BMW_CAR_NEW.jpg

Load More