newsfirstkannada.com

ನಾನು ಬದುಕಿದ್ದೇನೆ, ನನ್ನನ್ನು ಯಾರು ಕೊಂದಿಲ್ಲ.. ಸುಪ್ರೀಂಕೋರ್ಟ್​ ಮೊರೆ ಹೋದ ಬಾಲಕ!

Share :

11-11-2023

    ಸುಪ್ರೀಂಕೋರ್ಟ್​​ ಇಯರಿಂಗ್​ ವೇಳೆ ವಿಚಿತ್ರ ಘಟನೆ

    ನಾನು ಬದುಕಿದ್ದೀನಿ ಎಂದು ಬಾಲಕ ಕೋರ್ಟ್​ ಮೊರೆ..!

    ನನ್ನನ್ನು ಯಾರು ಕೊಂದಿಲ್ಲ ಎಂದು ಹೇಳಿಕೆ ಕೊಟ್ಟ ಬಾಲಕ

ದೆಹಲಿ: ನಾನು ಬದುಕಿದ್ದೀನಿ ಎಂದು 11 ವರ್ಷದ ಬಾಲಕನೋರ್ವ ಸುಪ್ರೀಂಕೋರ್ಟ್​ ಮುಂದೆ ತನ್ನ ಹೇಳಿಕೆ ದಾಖಲಿಸಿದ ವಿಚಿತ್ರ ಘಟನೆ ನಡೆದಿದೆ. ನನ್ನನ್ನು ಕೊಲೆ ಮಾಡಲಾಗಿದೆ ಎಂದು ನನ್ನ ತೊಂದೆ ಸುಳ್ಳು ಹೇಳಿ ಕೇಸ್​​ ಮಾಡಿದ್ದಾರೆ. ನಾನು ಇನ್ನೂ ಬದುಕಿದ್ದೇನೆ, ನನ್ನನ್ನು ಯಾರು ಕೊಂದಿಲ್ಲ ಎಂದು ಬಾಲಕ ಸುಪ್ರೀಂಕೋರ್ಟ್​​ ಬೆಂಚ್​​ ಮುಂದೆ ಹೇಳಿಕೊಂಡಿದ್ದಾನೆ.

ಹೌದು, ಹೀಗೆ ಸುಪ್ರೀಂಕೋರ್ಟ್​ ಮುಂದೆ ಹೇಳಿಕೆ ನೀಡಿದ್ದು ಬೇರೆ ಯಾರು ಅಲ್ಲ, ಬದಲಿಗೆ 11 ವರ್ಷದ ಉತ್ತರ ಪ್ರದೇಶ ಮೂಲದ ಅಭಯ್​ ಸಿಂಗ್​​ ಎಂಬ ಬಾಲಕ. ತನ್ನ ತಂದೆ ಮತ್ತು ಅಜ್ಜನಿಗೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ. ಅಭಯ್​ ಸಿಂಗ್​ ತನ್ನ ಅಜ್ಜಿ, ಅಜ್ಜನೊಂದಿಗೆ ವಾಸಿಸುತ್ತಿದ್ದ. ಇದನ್ನು ಸಹಿಸದ ತಂದೆ ಪೊಲೀಸರಿಗೆ ಮಗನ ಕೊಲೆಯಾಗಿದೆ ಎಂದು ದೂರು ನೀಡಿದ್ದ. ಇದು ಕೇಸ್​ ಆಗಿ ಕೊನೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಂತಕ್ಕೆ ಹೋಗಿತ್ತು.

ಬಾಲಕ ಹೇಳಿದ್ದೇನು..?

ತಾತನಿಂದಲೇ ಮೊಮ್ಮಗನ ಕೊಲೆ ಆಗಿದೆ ಎಂಬುದು ಕೇಸ್​ ಆಗಿತ್ತು. ಇದರ ವಿರುದ್ಧ ಕೊಲೆಯಾಗಿದ್ದಾನೆ ಎನ್ನಲಾದ ಮೊಮ್ಮಗ ಲಕ್ನೋ ಕೋರ್ಟಿಗೆ ಹೋಗಿ ತಾನು ಬದುಕಿರುವುದಾಗಿ ಹೇಳಿದ್ದ. ಅದು ಲಕ್ನೋ ಕೋರ್ಟ್​ನಿಂದ ಸುಪ್ರೀಂಕೋರ್ಟ್​ಗೆ ಕೇಸ್​ ಬಂದಿತ್ತು. ಇದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್​ ಮುಂದೆ ಬಾಲಕ ತನ್ನನ್ನು ಯಾರು ಕೊಲೆ ಮಾಡಿಲ್ಲ. ತನ್ನ ತಂದೆ ಮಾಡಿರೋ ಸುಳ್ಳು ಆರೋಪ ಇದು. ಹೀಗಾಗಿ ತನ್ನ ಅಜ್ಜನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ತಾನು ಅಜ್ಜ, ಅಜ್ಜಿಯೊಂದಿಗೆ ವಾಸಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ಬದುಕಿದ್ದೇನೆ, ನನ್ನನ್ನು ಯಾರು ಕೊಂದಿಲ್ಲ.. ಸುಪ್ರೀಂಕೋರ್ಟ್​ ಮೊರೆ ಹೋದ ಬಾಲಕ!

https://newsfirstlive.com/wp-content/uploads/2023/11/Supreme-Court.jpg

Load More