ಜ್ಞಾನವ್ಯಾಪಿ ಮಸೀದಿ ವಿವಾದ ಯಾವಾಗ ಬಗೆಹರಿಯಲಿದೆ?
ಯುಪಿ CM ಯೋಗಿ ಆದಿತ್ಯನಾಥ್ ಹೇಳಿಕೆಗೆ ಭಾರಿ ವಿರೋಧ
ಮಸೀದಿಯಲ್ಲಿ ಜ್ಯೋತಿರ್ಲಿಂಗ, ತ್ರಿಶೂಲ ಏನು ಮಾಡ್ತಿದೆ?
ಲಕ್ನೋ: ವಾರಣಾಸಿ ಜ್ಞಾನವ್ಯಾಪಿ ಮಸೀದಿ ಜಾಗದ ವಿವಾದ ಇನ್ನೂ ಕೋರ್ಟ್ ಅಂಗಳದಲ್ಲಿದೆ. ಮಸೀದಿಯ ಸಂಪೂರ್ಣ ಸಂಕೀರ್ಣವನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಬೇಕಾ? ಬೇಡವಾ ಅನ್ನೋದು ಇನ್ನೂ ಅಂತಿಮವಾಗಿಲ್ಲ. ಪ್ರಸಿದ್ಧ ಮಸೀದಿಯ ಒಳಗೆ ಹಿಂದೂ ದೇವರಿದ್ದು, ಈ ಹಿಂದೆ ಶಿವಲಿಂಗವೂ ದೊರೆತಿದೆ ಎನ್ನಲಾಗಿದೆ. ಆ ಹಿನ್ನೆಲೆ ಮಸೀದಿಯ ಪೂರ್ಣ ಪ್ರದೇಶವನ್ನು ವೈಜ್ಞಾನಿಕವಾಗಿ ಸರ್ವೇ ಮಾಡುವಂತೆ ಕೋರ್ಟ್ಗೆ ಅರ್ಜಿ ಸಲ್ಲಿಕೆ ಆಗಿದೆ. ಸರ್ವೇ ಮಾಡುವಂತೆ ಸೂಚಿಸಿದ್ದ ಆದೇಶಕ್ಕೂ ತಡೆಯಾಜ್ಞೆ ಸಿಕ್ಕಿದೆ.
ಕೋರ್ಟ್‌ನಲ್ಲಿ ಜ್ಞಾನವ್ಯಾಪಿ ಮಸೀದಿ ಜಾಗದ ವಿವಾದ ಇರುವಾಗಲೇ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ANI ಸುದ್ದಿ ಸಂಸ್ಥೆಗೆ ನೀಡಿರೋ ಸಂದರ್ಶನದಲ್ಲಿ ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್ ಅವರು ಜ್ಞಾನವ್ಯಾಪಿ ಮಸೀದಿಯನ್ನು ಅದನ್ನ ಮಸೀದಿ ಎಂದು ಕರೆದರೆ ವಿವಾದ ಹೇಗೆ ಬಗೆಹರಿಯುತ್ತೆ ಎಂದು ಪ್ರಶ್ನಿಸಿದ್ದಾರೆ. ಮಸೀದಿಯಲ್ಲಿ ತ್ರಿಶೂಲ ಏನು ಮಾಡ್ತಿದೆ. ಈ ಭಾಗದಲ್ಲೇ ವಿಶ್ವವಿಖ್ಯಾತ ಜ್ಯೋತಿರ್ಲಿಂಗವಿದೆ. ಈ ಹಿಂದೆಯಾಗಿರೋ ಅತಿ ದೊಡ್ಡ ತಪ್ಪದು. ಅದನ್ನ ಅರ್ಥ ಮಾಡಿಕೊಂಡು ಸರಿಪಡಿಸಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ಜ್ಞಾನವ್ಯಾಪಿ ಮಸೀದಿ ವಿಚಾರಕ್ಕೆ ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Breaking News : ಜ್ಞಾನವಾಪಿ ಮಸೀದಿಯ ASI ಸರ್ವೇಗೆ ತಾತ್ಕಾಲಿಕ ಬ್ರೇಕ್; ನಿಟ್ಟುಸಿರು ಬಿಟ್ಟ ಮಸೀದಿ ಆಡಳಿತ
ಏನಿದು ಜ್ಞಾನವಾಪಿ ಪ್ರಕರಣ..?
ವಾರಣಾಸಿಯ ಜ್ಞಾನವಾಪಿ ಜಾಗವು ವರ್ಷಕ್ಕೆ ಒಮ್ಮೆ ಮಾತ್ರ ಪ್ರಾರ್ಥನೆಗೆ ತೆರೆಯುತ್ತದೆ. ಇಲ್ಲಿ ನಿತ್ಯವೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಹಳೆಯ ದೇವಸ್ಥಾನ ಸಂಕೀರ್ಣದೊಳಗೆ ಕಾಣಿಸುವ ಹಾಗೂ ಕಾಣಿಸದ ದೇವತೆಗಳಿಗೆ ಕೂಡ ಪೂಜೆಗೆ ಅನುಮತಿ ಕೊಡಬೇಕು ಎಂದು ಮಹಿಳೆಯರು ಮನವಿ ಮಾಡಿದ್ದರು. ಆದರೆ ಇದು ದೇವಸ್ಥಾನವಲ್ಲ, ಇದು ಮಸೀದಿ, ಜೊತೆಗೆ ಇಲ್ಲಿ ಯಾವುದೇ ವಿಗ್ರಹಗಳಿಲ್ಲ ಅನ್ನೋದು ಮುಸ್ಲಿಂರ ವಾದವಾಗಿದೆ. ಹೀಗಾಗಿ ಈ ವಿಚಾರ ಕೋರ್ಟ್ ಮೆಟ್ಟಿಲೇರಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ