newsfirstkannada.com

ಎಲ್ಲ ಸಿಎಂ ಜಾತಿ ಗಣತಿ ಎನ್ನುತ್ತಿದ್ರೆ.. ಗೋವು ಸೆನ್ಸಸ್​ಗೆ​ ಮುಂದಾದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ!

Share :

08-11-2023

    ಯುಪಿಯಲ್ಲಿ ಗೋವುಗಳ ಗಣತಿಯನ್ನು 3 ವರ್ಗಗಳಾಗಿ ಮಾಡಲಾಗುತ್ತಾ..?

    ಸಿಎಂ ಯೋಗಿ ಸರ್ಕಾರ ಮಾಡುವ ಹಸುಗಳ ಗಣತಿ ವಿಭಿನ್ನತೆಯಿಂದ ಇದೆ

    ಇಷ್ಟಕ್ಕೂ ಗೋವುಗಳ ಗಣತಿ ಮಾಡಲು ಸಿಎಂ ಮುಂದಾಗಿರುವುದು ಏಕೆ?

ಲಕ್ನೋ: ಸದ್ಯ ದೇಶದೆಲ್ಲೆಡೆಯ ಕೆಲ ರಾಜ್ಯಗಳು ಜಾತಿ ಗಣತಿ ಬಿಡುಗಡೆ ಮಾಡುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಅವರು ಗೋವುಗಳ ಗಣತಿ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಡಾಡಿ ದನಗಳ ಹಾವಳಿ ಹೆಚ್ಚುತ್ತಿರುವುದಕ್ಕೆ ಶೀಘ್ರದಲ್ಲೇ ಸಮಸ್ಯೆ ಬಗೆ ಹರಿಸಲಾಗುತ್ತದೆ ಎನ್ನಲಾಗಿದೆ.

ಕಳೆದ ಕೆಲ ವರ್ಷಗಳಿಂದ ಗೋವುಗಳು ತೀವ್ರ ಸಮಸ್ಯೆಯನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಹಸುಗಳ ನಿಖರವಾದ ಸಂಖ್ಯೆಯನ್ನು ಕಂಡುಕೊಳ್ಳಲು ಹಾಗೂ ಗೋವು ಕಲ್ಯಾಣಕ್ಕಾಗಿ ಸೂಕ್ತವಾದ ಯೋಜನೆಗಳನ್ನು ರೂಪಿಸಲು ಗೋವುಗಳ ಗಣತಿಯನ್ನು ನಡೆಸಲು ಸಿಎಂ ಈ ನಿರ್ಧಾರ ಮಾಡಿದ್ದಾರೆ. ರಾಜ್ಯದಲ್ಲಿ ಈ ಗಣತಿಯನ್ನು 3 ವರ್ಗಗಳಾಗಿ ಮಾಡಲಾಗುತ್ತದೆ. ಅಂದರೆ ಮನೆಗಳಲ್ಲಿ ಸಾಕುತ್ತಿರುವ ಹಸುಗಳು, ಸರ್ಕಾರಕ್ಕೆ ಸಂಬಂಧಿಸಿದ ಗೋಶಾಲೆಗಳಲ್ಲಿ ಸಾಕಿದಂತವುಗಳು ಮತ್ತು ಬೀದಿಯಲ್ಲಿ ಓಡಾಡುವ ಬಿಡಾಡಿ ಗೋವುಗಳ ಸಂಖ್ಯೆಯನ್ನು ಪತ್ತೆ ಹಚ್ಚುವಂತೆ ಪಶುಸಂಗೋಪನಾ ಇಲಾಖೆಗೆ ಸೂಚನೆ ನೀಡಲಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರ 2019ರಲ್ಲಿ ಜಾನುವಾರುಗಳ ಗಣತಿ ಮಾಡಿತ್ತು. ಮತ್ತೆ 2024ರಲ್ಲಿ ಈ ಗಣತಿ ನಡೆಯಲಿದೆ. ಆದ್ರೆ ಉತ್ತರ ಪ್ರದೇಶದ ಸಿಎಂ ಯೋಗಿ ಮಾತ್ರ ಗೋವು ಗಣತಿಯನ್ನು ವಿಭಿನ್ನವಾಗಿ ನಡೆಸಲು ಮುಂದಾಗಿದ್ದಾರೆ. ಗಣಿತಿ ಮುಗಿದ ನಂತರ ಬಿಡಾಡಿ ದನಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆಯನ್ನು ಸರ್ಕಾರ ಜಾರಿ ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲ್ಲ ಸಿಎಂ ಜಾತಿ ಗಣತಿ ಎನ್ನುತ್ತಿದ್ರೆ.. ಗೋವು ಸೆನ್ಸಸ್​ಗೆ​ ಮುಂದಾದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ!

https://newsfirstlive.com/wp-content/uploads/2023/11/CM_YOGI_COWS.jpg

Load More