ಯುಪಿ ಸರ್ಕಾರದಿಂದ ಸೋಷಿಯಲ್ ಮಿಡಿಯಾ ನಿಯಮಗಳ ಬದಲಾವಣೆ
ದೇಶ ವಿರೋಧಿ ಹೇಳಿಕೆ, ವಿಡಿಯೋ, ಪೋಸ್ಟ್ಗಳಿಗೆ ಕಾದಿದೆ ಜೀವಾವಧಿ ಶಿಕ್ಷೆ
ರಾಷ್ಟ್ರಪರ, ರಾಷ್ಟ್ರೀಯತೆ ಪ್ರೇರೇಪಿಸುವ ಖಾತೆಗಳಿಗೆ ಪ್ರತಿ ತಿಂಗಳು ಬಹುಮಾನ
ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಸಾಮಾಜಿಕ ಜಾಲತಾಣಗಳ ನೀತಿ ನಿಯಮಗಳಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿದೆ. ಉತ್ತರ ಪ್ರದೇಶದ ಡಿಜಿಟಲ್ ಮಿಡಿಯಾ ಪಾಲಿಸಿ ಅನ್ವಯ ದೇಶ ವಿರೋಧಿ ವಿಡಿಯೋ ಹೇಳಿಕೆ ಹಾಗೂ ಪೋಸ್ಟ್ಗಳನ್ನು ಮಾಡಿದವರಿಗೆ ಕಠಿಣ ಅಂದ್ರೆ ಜೀವಾವಧಿ ಶಿಕ್ಷೆ ಹಾಗೂ ರಾಷ್ಟ್ರೀಯತೆಯನ್ನು ಉತ್ತೇಜಿಸುವವರಿಗೆ ದೊಡ್ಡ ಆಫರ್ ಕೊಟ್ಟಿದೆ. ಯುಪಿ ಸರ್ಕಾರ ಮಾಡಿರುವ ಡಿಜಿಟಲ್ ಮಿಡಿಯಾ ಪಾಲಿಸಿ ಹೊಸ ಬದಲಾವಣೆಗಳು ಇಲ್ಲಿವೆ.
ಇದನ್ನೂ ಓದಿ: ಶ್ರೀಮಂತನ ಮಗನೆಂದು ಯುವಕನ ಕಿಡ್ನ್ಯಾಪ್.. ₹20 ಲಕ್ಷಕ್ಕೆ ಡಿಮ್ಯಾಂಡ್; ಆಮೇಲೆ ಏನಾಯ್ತು ಗೊತ್ತಾ?
ಉತ್ತರ ಪ್ರದೇಶದ ಹೊಸ ನಿಯಮದನ್ವಯ, ಸೋಷಿಯಲ್ ಮಿಡಿಯಾಗಳಾದ ಎಕ್ಸ್, ಫೇಸ್ಬುಕ್, ಯೂಟ್ಯೂಬ್, ವಾಟ್ಸಾಪ್ ಈ ತರಹದ ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಅನಿಸುವ ಪೋಸ್ಟ್ಗಳನ್ನಾಗಲಿ, ವಿಡಿಯೋಗಳನ್ನಾಗಲಿ ಹೇಳಿಕೆಗಳನ್ನಾಗಲಿ ನೀಡಿದವರಿಗೆ ದಂಡದ ಜೊತೆ ಜೊತೆಗೆ ಮೂರು ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಲಾಗಿದೆ. ಈ ರೀತಿಯ ಚಟುವಟಿಕೆಗಳನ್ನು ಐಟಿ ಆ್ಯಕ್ಟ್ ಸೆಕ್ಷನ್ 66E ಮತ್ತು 66F ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಮಂಚದ ಮೇಲೆ ಮಲಗಿದ್ರೆ ಮಾತ್ರ ನಟಿಯರಿಗೆ ಚಾನ್ಸ್; ಸಿನಿಮಾ ಇಂಡಸ್ಟ್ರಿ ಕರಾಳ ಸತ್ಯ ಬಿಚ್ಚಿಟ್ಟ ಕೇಸ್ಗೆ ಟ್ವಿಸ್ಟ್
ಸರ್ಕಾರದ ವಕ್ತಾರರು ಹೇಳುವ ಪ್ರಕಾರ ಮಾನಹಾನಿಯಂತಹ ಪ್ರಸಾರಗಳು, ಮಾನನಷ್ಟ ಮೂಕದ್ದಮೆಯಂತ ಕ್ರಿಮಿನಲ್ ಕೇಸ್ಗಳ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಡಿಜಿಟಲ್ ವೇದಿಕೆಗಳನ್ನು ಬೇರೆಯ ರೀತಿ ದುರುಪಯೋಗ ಮಾಡಿಕೊಂಡಲ್ಲಿ ಅವುಗಳ ಮೇಲೆ ಕಣ್ಣಿಡಲು ಡಿಜಿಟಲ್ ಎಜೆನ್ಸಿ ಅನ್ನು ಸ್ಥಾಪಿಸಲಾಗಿದೆ. ಇದು ವಿಡಿಯೋ ಟ್ವಿಟ್ಸ್, ಪೋಸ್ಟ್ಗಳನ್ನು ಹ್ಯಾಂಡಲ್ ಮಾಡಲಿದೆ. ಡಿಜಿಟಲ್ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಕಂಡು ಬಂದಲ್ಲಿ ಅವುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಿದೆ
ರಾಷ್ಟ್ರೀಯತೆಯನ್ನು ಉತ್ತೇಜಿಸುವ ವೇದಿಕೆಗಳಿಗೆ ಭರ್ಜರಿ ಬಹುಮಾನ
ಯುಪಿ ಸರ್ಕಾರ ತಂದಿರು ಹೊಸ ನೀತಿ ನಿಯಮಗಳಲ್ಲಿ ರಾಷ್ಟ್ರೀಯತೆಯನ್ನು ಉತ್ತೇಜಿಸವ ಖಾತೆ ಹೊಂದಿದವರಿಗೆ ಭರ್ಜರಿ ಬಹುಮಾನ ಘೋಷಿಸಿದೆ. ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ಗಳಲ್ಲಿ ರಾಷ್ಟ್ರೀಯತೆಯ ಕುರಿತು ಧನಾತ್ಮಕ ಅಂಶಗಳನ್ನು ಉಲ್ಲೇಖಿಸುವವರಿಗೆ. ವಿಡಿಯೋ ಮಾಡುವವರಿಗೆ ತಿಂಗಳು ತಿಂಗಳು ಹಣ ನೀಡಲು ಸರ್ಕಾರ ನಿರ್ಧರಿಸಿದೆ ಅದು ಸಾವಿರ ಹತ್ತು ಸಾವಿರ ಅಲ್ಲ 5 ಲಕ್ಷ, 4 ಲಕ್ಷ ಹಾಗೂ 3 ಲಕ್ಷ ರೂಪಾಯಿಗಳನ್ನು ನೀಡಲು ನಿರ್ಧರಿಸಲಾಗಿದೆ. ಯೂಟ್ಯೂಬ್ನಲ್ಲಿ ಶಾರ್ಟ್ಸ್ ಹಾಗೂ ಪೋಡೋ ಕಾಸ್ಟ್ಗಳಿಗೆ ತಿಂಗಳಿಗೆ 8 ಲಕ್ಷ 7 ಲಕ್ಷ 6 ಲಕ್ಷ 4 ಲಕ್ಷ ರೂಪಾಯಿಗಳನ್ನು ಆಯಾ ವಿಡಿಯೋ ಹಾಗೂ ಶಾರ್ಟ್ಸ್ಗಳ ಮಾನದಂಡಗಳ ಮೇಲೆ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಾತನಾಡಿರುವ ಉತ್ತರಪ್ರದೇಶದ ಸಚಿವ ಅನಿಲ್ ರಾಜಬಹರ್ ಸಚಿವ ಸಂಪುಟದಲ್ಲಿ ಈಗಾಗಲೇ ಹೊಸ ನಿಯಮಗಳಿಗೆ ಅನುಮೋದನೆ ನೀಡಲಾಗಿದೆ. ದೇಶದ ವಿರುದ್ಧ ಸೋಷಿಯಲ್ ಮಿಡಿಯಾಗಳಲ್ಲಿ ನಡೆಯುವ ಹುನ್ನಾರಗಳಿಗೆ ತಕ್ಕ ಶಾಸ್ತಿ ಮಾಡಲಾಗುವುದು. ಇನ್ನು ನಿರುದ್ಯೋಗಕ್ಕೆ ರಾಮಬಾಣದಂತೆ ಸೋಷಿಯಲ್ ಮಿಡಿಯಾದಲ್ಲಿ ದೇಶದ ಪರವಾಗಿ ರಾಷ್ಟ್ರೀಯತೆ ಪರವಾಗಿ ಪ್ರೇರಣೆ ನೀಡುವ ಖಾತೆಗಳಿಗೆ ಬಹುಮಾನ ನೀಡುವ ಮೂಲಕ ಒಂದು ಒಳ್ಳೆ ಅವಕಾಶವನ್ನು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ