newsfirstkannada.com

ಮದ್ವೆ ಮನೇಲಿ ಕೊಡಲಿಯಿಂದ ಕಡಿದು ಭೀಕರ ಹತ್ಯೆ.. ನವ ಜೋಡಿ ಸೇರಿ ನಾಲ್ವರ ಕಗ್ಗೊಲೆ.. ಕೊನೆಗೆ ಆರೋಪಿಯೂ ಆತ್ಮಹತ್ಯೆ

Share :

Published June 25, 2023 at 12:43pm

Update June 25, 2023 at 12:54pm

    ಮಲಗಿದ್ದ ವೇಳೆ ಕುಟುಂಬಸ್ಥರ ಮೇಲೆ ಯಮನಂತೆ ಎರಗಿದ ಭೂಪ

    ಸ್ನೇಹಿತನನ್ನೂ ಬಿಡಲಿಲ್ಲ, ಕೊಡಲಿಯಿಂದ ಕಡಿದು ಹತ್ಯೆ ಮಾಡಿದ

    ಹೊಸದಾಗಿ ಮದುವೆಯಾದ ಸಹೋದರ ಹಾಗೂ ಪತ್ನಿಯ ಕೊಲೆ

ಲಕ್ನೋ: ವ್ಯಕ್ತಿವೊಬ್ಬರು ಸಹೋದರನ ಮದುವೆ ನಂತರ ನವವಿವಾಹಿತರು ಸೇರಿದಂತೆ ತನ್ನ ಕುಟುಂಬದ ನಾಲ್ವರನ್ನು ಕೊಡಲಿಯಿಂದ ಕಡಿದು ಹತ್ಯೆ ಮಾಡಿ, ಬಳಿಕ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯು ಉತ್ತರಪ್ರದೇಶದ ಮೈನ್‌ಪುರಿ ಜಿಲ್ಲೆಯ ಗ್ರಾಮ ಒಂದರಲ್ಲಿ ನಡೆದಿದೆ.

ಶಿವವೀರ್ ಯಾದವ್ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ರಾತ್ರಿಯಲ್ಲಿ ಗಾಡ ನಿದ್ದೆಯಲ್ಲಿದ್ದ ಒಟ್ಟು ಐವರನ್ನು ಹತ್ಯೆ ಮಾಡಿದ್ದಾನೆ. ನವವಿವಾಹಿತ ಸಹೋದರ ಮತ್ತು ಪತ್ನಿ ಸೋನು ಯಾದವ್ (21), ಸೋನಿ (20), ಆತನ ಇನ್ನೊಬ್ಬ ಸಹೋದರ ಭೂಲನ್ ಯಾದವ್ (28), ಸೋದರ ಮಾವ ಸೌರಭ್ (23) ಮತ್ತು ಸ್ನೇಹಿತ ದೀಪಕ್ (20) ಎನ್ನುವವರು ಮೃತ ದುರ್ದೈವಿಗಳು. ಸ್ನೇಹಿತ ದೀಪಕ್​ನನ್ನು ಏಕೆ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿಲ್ಲ.

ಆರೋಪಿ ಇವರನ್ನು ಹತ್ಯೆ ಮಾಡಿರುವುದು ಅಲ್ಲದೇ ರಾತ್ರಿಯೆ ತನ್ನ ಹೆಂಡತಿ ಡಾಲಿ (24), ಚಿಕ್ಕಮ್ಮ ಸುಷ್ಮಾ ಯಾದವ್ (35) ಈ ಇಬ್ಬರ ಮೇಲೂ ಮಾರಾಣಾಂತಿಕ ಹಲ್ಲೆ ಮಾಡಿದ್ದಾನೆ. ಬಳಿಕ ಕಂಟ್ರಿ ಮೇಡ್​ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಮೈನ್‌ಪುರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು ತನಿಖೆಯನ್ನು ಕೈಗೊಂಡಿದ್ದಾರೆ. ಸಾವಿಗೆ ನಿಖರ ಕಾರಣ ಏನೆಂಬುದು ಗೊತ್ತಾಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದ್ವೆ ಮನೇಲಿ ಕೊಡಲಿಯಿಂದ ಕಡಿದು ಭೀಕರ ಹತ್ಯೆ.. ನವ ಜೋಡಿ ಸೇರಿ ನಾಲ್ವರ ಕಗ್ಗೊಲೆ.. ಕೊನೆಗೆ ಆರೋಪಿಯೂ ಆತ್ಮಹತ್ಯೆ

https://newsfirstlive.com/wp-content/uploads/2023/06/UP_MAN_DEATH.jpg

Load More