newsfirstkannada.com

ಮೋದಿಯನ್ನು ಹೊಗಳಿದ್ದೇ ತಡ ಹೆಂಡತಿ ಮೇಲೆ ಮನಸೋ ಇಚ್ಛೆ ಹಲ್ಲೆ; ಡಿವೋರ್ಸ್​​ ಕೂಡ ಕೊಟ್ಟ ಪಾಪಿ ಗಂಡ!

Share :

Published August 24, 2024 at 6:15pm

    ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್​ ಹೊಗಳಿದ್ದೇ ತಪ್ಪಾಯ್ತು

    ಕುಪಿತಗೊಂಡ ಗಂಡ ಕುದಿಯೋ ಬೇಳೆಯನ್ನೇ ಪತ್ನಿಗೆ ಮೇಲೆ ಎರಚಿಬಿಟ್ಟ

    ಗಂಡನ ಮನೆಯವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ

ಲಖನೌ: ಉತ್ತರಪ್ರದೇಶದ ಬಹ್ರೈಚ್​ ಪ್ರದೇಶದ 19 ವರ್ಷದ ಮಹಿಳೆಯೊಬ್ಬಳ, ತನ್ನ ಪತಿಯ ಮನೆಯಲ್ಲಿರುವ ಎಲ್ಲರ ವಿರುದ್ಧವೂ ಪೊಲೀಸ್ ಮೆಟ್ಟಿಲು ಏರಿದ್ದಾಳೆ. ಆಕೆಯ ವಿರುದ್ಧ ಕ್ಷುಲ್ಲಕ ಕಾರಣಕ್ಕೆ ನಡೆದ ಅನ್ಯಾಯದ ವಿರುದ್ಧ ಸಿಡಿದೆದ್ದಾಳೆ. ಮರೀಯಮ್ ಷರೀಫ್ ಅನ್ನೋ 19 ವರ್ಷದ ಯುವತಿ ಇತ್ತೀಚೆಗೆ ಅಯೋಧ್ಯ ನಿವಾಸಿ ಅರ್ಷದ್ ಅನ್ನೋಳನ್ನ ಮದುವೆಯಾಗಿದ್ದಳು. ಅಯೋಧ್ಯ ಹಾಗೂ ದೇಶದಲ್ಲಿ ಆಗುತ್ತಿರುವ ಅಭಿವೃದ್ಧಿಯನ್ನು ಆತನ ಗಂಡನ ಮುಂದೆ ಹೊಗಳಿದ್ದಾಳೆ. ರಾಜ್ಯದಲ್ಲಿ ಯೋಗಿಜಿ ಹಾಗೂ ದೇಶದಲ್ಲಿ ಮೋದಿ ಅದ್ಭುತ ಕೆಲಸ ಮಾಡುತ್ತಿದ್ದಾರೆ ಒಳ್ಳೆಯ ಅಭಿವೃದ್ಧಿಯಾಗುತ್ತಿದೆ ಎಂದಿದ್ದಾಳೆ ಇದೊಂದೆ ಕಾರಣಕ್ಕೆ ಆಕೆಯ ಪತಿ ಆಕೆಯ ಮೇಲೆ ಕುದಿಯುವ ಬೇಳೆಯನ್ನು ಎರಚಿದ್ದಾನೆ ಎಂದು ಆರೋಪಿಸಿದ್ದಾಳೆ.

ಇದನ್ನೂ ಓದಿ: ತೆಲುಗು ಸ್ಟಾರ್​ ವಿರುದ್ಧ ಅಕ್ರಮ ಬಿಲ್ಡಿಂಗ್​ ಕಟ್ಟಿದ್ದ ಆರೋಪ; ಅಕ್ಕಿನೇನಿ ನಾಗಾರ್ಜುನ ಕನ್ವೆನ್ಷನ್​​ ಹಾಲ್​ ನೆಲಸಮ

ಕೇವಲ ಇಷ್ಟು ಮಾತ್ರವಲ್ಲ ಯೋಗಿ ಹಾಗೂ ಮೋದಿಯನ್ನು ಹೊಗಳಿದ್ದಕ್ಕಾಗಿ ಪತಿ ಅರ್ಷದ್ ತ್ರಿವಳಿ ತಲಾಖ್ ನೀಡಿದ್ದಾನೆ. ಮತ್ತು ಮಹಿಳೆಯ ಅತ್ತೆ ಆಕೆಯನ್ನು ಸಮಾ ಬಡಿದು ಹಾಕಿದ್ದಾಳೆ. ಹೀಗಾಗಿ ಇಡೀ ಕುಟುಂಬದ ವಿರುದ್ಧ ಸಿಡಿದೆದ್ದಿರುವ ಮಹಿಳೆ ಎಲ್ಲರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈಗಾಗಲೇ ಆಕೆ ದೂರನ್ನು ಪರಿಗಣಿಸಿರಿವು ಪೊಲೀಸರು ಎಲ್ಲರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಈ ಪ್ರಕರಣದ ಕುರಿತು ಮಾತನಾಡಿದ ಬೆಹ್ರೈಚ್​​ನ ಎಸ್​​ಪಿ ವೃಂದಾ ಶುಕ್ಲಾ, ಮರೀಯಮ್ ಷರೀಫ್ ಇತ್ತೀಚೆಗೆ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿಜಿಯವರ ಕಾರ್ಯವನ್ನು ಹೊಗಳಿದ್ದಾಳೆ.ಇದರಿಂದ ಕುಪಿತಗೊಂಡ ಆಕೆಯ ಗಂಡ ಹಾಗೂ ಆಕೆಯ ಮನೆಯವರು ಆಕೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ತೊಂದರೆ ಕೊಟ್ಟಿದ್ದಾರೆ.

ಮನೆ ಬಿಟ್ಟು ತವರು ಮನೆಗೆ ಕಳಿಸಿದ್ದಾರೆ. ಇಲ್ಲಿಂದಲೇ ಆಕೆಗೆ ತ್ರಿವಳಿ ತಲಾಖ್ ನೀಡಲಾಗಿದೆ. ಅಷ್ಟು ಮಾತ್ರವಲ್ಲದೇ ಆಕೆಯ ಮೇಲೆ ಕುದಿಯುವ ಬೇಳೆಯನ್ನು ಕೂಡ ಎರಚಲಾಗಿದೆ. ಇತ್ತೀಚೆಗೆ ಅಯೋಧ್ಯೆಗೆ ಪ್ರವಾಸಕ್ಕೆಂದು ಮರೀಯಮ್ ಷರೀಫ್ ಪತಿ ಅರ್ಷದ್ ಪತ್ನಿಯನ್ನು ಕರೆದುಕೊಂಡು ಹೋಗಿದ್ದ. ಈ ವೇಳೆ ಅಯೋಧ್ಯಯಲ್ಲಾದ ಅಭಿವೃದ್ಧಿಯ ಕುರಿತು ಆಕೆ ಸಿಎಂ ಯೋಗಿ ಹಾಗೂ ಪಿಎಂ ಮೋದಿಯವರನ್ನು ಹೊಗಳಿದ್ದಾಳೆ ಇಷ್ಟಕ್ಕೆ ರೊಚ್ಚಿಗೆದ್ದ ಪತಿ ಹಾಗೂ ಅವರ ಅಮ್ಮ ಸಹೋದರ ಮರೀಯಮ್ ಷರೀಫ್ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಎಸ್​ಪಿ ವೃಂದಾ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಬಳಿಕ ಬಿಜೆಪಿಯಲ್ಲಿ ಯಾರು ಪ್ರಧಾನಿ ಸ್ಥಾನದ ಸೂಕ್ತ ಅಭ್ಯರ್ಥಿ? ಉತ್ತರ ಕೊಟ್ಟ ಸಮೀಕ್ಷೆ

ಆಕೆ ನೀಡಿದ ದೂರಿನನ್ವಯ ಜುಲೈ ಅಂತ್ಯದಲ್ಲಿ ಈ ಘಟನೆ ನಡೆದಿದೆ. ಕೂಡಲೇ ಆಕೆಯನ್ನು ಅರ್ಷದ್ ತವರು ಮನೆಗೆ ಕಳುಹಿಸಿದ್ದಾನೆ ಎರಡು ಮನೆಯ ನೆಂಟರು ಸೇರಿ ಮತ್ತೆ ಇಬ್ಬರನ್ನೂ ಜೊತೆ ಮಾಡಿದ್ದಾರೆ. ಆಗಷ್ಟೇ ಐದರಂದು ಮತ್ತೆ ಜಗಳ ಶುರುವಾಗಿದೆ. ಅರ್ಷದ್ ಏಕಾಏಕಿ ನರೇಂದ್ರ ಮೋದಿ ಹಾಗೂ ಯೋಗಿಜಿಯವರನ್ನು ನಿಂದಿಸಲು ಆರಂಭಿಸಿದ್ದಾನೆ. ಅದಕ್ಕೆ ಆಕ್ಷೇಪಿಸಿದ್ದಕ್ಕೆ ತ್ರಿವಳಿ ತಲಾಖ್ ಹೇಳಿದ್ದಾನೆ.ಅಲ್ಲದೇ ಅರ್ಷದ್ ತಾಯಿ ಹಾಗೂ ಸಹೋದರ ಮರೀಯಮ್ ಷರೀಫ್ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಅಷ್ಟು ಸಾಲದೆಂಬಂತೆ ಅರ್ಷದ್ ಆಕೆಯ ಮೇಲೆ ಒಲೆ ಮೇಲೆ ಇಟ್ಟಿದ್ದ ಕುದಿಯು ಬೇಳೆಯನ್ನು ಎರಚಿದ್ದಾನೆ. ಇದೆಲ್ಲವನ್ನೂ ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿಯನ್ನು ಹೊಗಳಿದ್ದೇ ತಡ ಹೆಂಡತಿ ಮೇಲೆ ಮನಸೋ ಇಚ್ಛೆ ಹಲ್ಲೆ; ಡಿವೋರ್ಸ್​​ ಕೂಡ ಕೊಟ್ಟ ಪಾಪಿ ಗಂಡ!

https://newsfirstlive.com/wp-content/uploads/2024/08/HOT-DAL-THROWS-AT-WIFE.jpg

Load More