newsfirstkannada.com

ಹೆಂಡತಿ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್​​​; ಈ ಬಗ್ಗೆ ರಾಮ್​​ ಚರಣ್​​ ತೇಜ್​​ ಹೇಳಿದ್ದಿಷ್ಟು!

Share :

23-06-2023

    ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಮ್​ಚರಣ್ ಪತ್ನಿ ಉಪಾಸನಾ

    ಕೋನಿದೇಲ ಮತ್ತು ಕಾಮಿನೇನಿ ಕುಟುಂಬಗಳಲ್ಲಿ ಸಂತಸ ವಾತಾವರಣ

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೆಗಾ ಪವರ್​ ಸ್ಟಾರ್ ರಾಮ್ ಚರಣ್ ಪತ್ನಿ

ತೆಲುಗಿನ ನಟ, ಚಿರಂಜೀವಿ ಸುಪುತ್ರ ಮೆಗಾ ಪವರ್​ ಸ್ಟಾರ್ ರಾಮ್ ಚರಣ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ರಾಮ್​ಚರಣ್ ಪತ್ನಿ ಉಪಾಸನಾ ಜೂನ್ 20 ರಂದು ಹೈದರಾಬಾದ್​ನ ಜುಬಿಲಿ ಹಿಲ್ಸ್‌ನಲ್ಲಿರೋ ಅಪೋಲೋ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ಹೀಗಾಗಿ ಮೆಗಾ ಕುಟುಂಬದಲ್ಲಿ ಹೊಸ ಮಗುವಿನ ಆಗಮನದಿಂದ ಸಂತಸ ಮೂಡಿದೆ.

ಇದೀಗ ಉಪಾಸನಾ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರೊಂದಿಗೆ ಅವರ ಪತಿ ರಾಮ್ ಚರಣ್ ಇದ್ದರು. ಈ ಸಂದರ್ಭ ಇಬ್ಬರೂ ಫುಲ್ ಖುಷಿಯಲ್ಲಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ. ಇನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ನಟ ರಾಮ್ ಚರಣ್ ಎಲ್ಲ ಅಪ್ಪಂದಿರಂತೆ ನಾನೂ ತುಂಬಾ ಖುಷಿಯಾಗಿದ್ದೆ. ಆ ಭಾವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಉಪಾಸನಾಗೆ ಚಿಕಿತ್ಸೆ ನೀಡಿದ ಅಪೋಲೋ ವೈದ್ಯರಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ಈಗ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಹೆಂಡತಿ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್​​​; ಈ ಬಗ್ಗೆ ರಾಮ್​​ ಚರಣ್​​ ತೇಜ್​​ ಹೇಳಿದ್ದಿಷ್ಟು!

https://newsfirstlive.com/wp-content/uploads/2023/06/ram-charana-2.jpg

Load More