newsfirstkannada.com

Upendra: ಸ್ಯಾಂಡಲ್​ವುಡ್​ನಿಂದ ಬ್ಯಾನ್​ ಮಾಡಿ, ಕೂಡಲೇ ಬಂಧಿಸಿ; ಉಪ್ಪಿ ಪ್ರತಿಕೃತಿ ದಹಿಸಿ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

Share :

14-08-2023

    ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದ ವಿದ್ಯಾರ್ಥಿಗಳು

    ಉಪೇಂದ್ರ ಅವರ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ಪ್ರತಿಭಟನೆ

    ಉಪ್ಪಿ ಕ್ಷಮೆ ಕೇಳಿದರು ತಣಿಯುತ್ತಿಲ್ಲ ಅಸಮಾಧಾನ

ರಿಯಲ್​ ಸ್ಟಾರ್​ ಉಪೇಂದ್ರ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು. ಕೂಡಲೇ ಬಂಧಿಸಬೇಕು ಎಂದು ಘೋಷಣೆ ಕೂಗುವ ಮೂಲಕ ನಟನ ಪ್ರತಿಕೃತಿ ದಹಿಸಿ ಬೆಂಗಳೂರು ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚೆಗೆ ನಟ ಉಪೇಂದ್ರ ಫೇಸ್​ಬುಕ್​ ಮತ್ತು ಇನ್​​ಸ್ಟಾ ಲೈವ್​ನಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿದ್ದರು. ಇದೇ ವಿಚಾರವಾಗಿ ಉಪೇಂದ್ರ ಅವರ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ನಟನ ವಿರುದ್ಧ ಘೋಷಣೆ ಕೂಗಿ ಗಡಿ ಪಾರು ಮಾಡುವಂತೆ ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಸದ್ಯ ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.

ಉಪೇಂದ್ರ ಅವರ ಆಕ್ಷೇಪಾರ್ಹ ಪದ ಬಳಕೆಯ ವಿಚಾರವಾಗಿ ಕ್ಷಮೆ ಕೇಳಿದರು ರಾಜ್ಯದಾದ್ಯಂತ ಪ್ರತಿಭಟನೆ ನಿಲ್ಲುತ್ತಿಲ್ಲ. ಮತ್ತೊಂದೆಡೆ ಅವರ ಮೇಲೆ ಕೇಸ್​ ಕೂಡ ದಾಖಲಾಗಿದೆ. ಹೀಗಿದ್ದರು ಸಾಮಾಜಿಕ ಜಾಲತಾಣ ಸೇರಿದಂತೆ ಹಲವರು ಉಪ್ಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಉಪ್ಪಿ ಮೇಲೆ ಚೆನ್ನಮ್ಮನಕೆರೆ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಕೇಸ್​ಗೆ ಸ್ಟೇ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Upendra: ಸ್ಯಾಂಡಲ್​ವುಡ್​ನಿಂದ ಬ್ಯಾನ್​ ಮಾಡಿ, ಕೂಡಲೇ ಬಂಧಿಸಿ; ಉಪ್ಪಿ ಪ್ರತಿಕೃತಿ ದಹಿಸಿ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

https://newsfirstlive.com/wp-content/uploads/2023/08/Upendra-5.jpg

Load More