ಉಪೇಂದ್ರ ಅವರ ಎರಡು ಮನೆಗೆ ಪೊಲೀಸರಿಂದ ನೋಟಿಸ್
ಸ್ನೇಹಿತರು, ಸಂಬಂಧಿಕರ ಸಂಪರ್ಕದಲ್ಲಿರೋ ಉಪ್ಪಿಗಾಗಿ ಶೋಧ
ರಿಯಲ್ ಸ್ಟಾರ್ ವಿರುದ್ಧ ದಾಖಲಾಗಿರೋ ಸೆಕ್ಷನ್‌ಗಳು ಯಾವುವು?
ಬೆಂಗಳೂರು: ಫೇಸ್‌ಬುಕ್ ಲೈವ್‌ನಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಪದ ಬಳಸಿದ ಆರೋಪದಲ್ಲಿ ನಟ ಉಪೇಂದ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಿಯಲ್ ಸ್ಟಾರ್ ಉಪ್ಪಿ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಉಪೇಂದ್ರ ಅವರ ಮನೆಗೆ ಭೇಟಿ ನೀಡಿರುವ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಅಟ್ರಾಸಿಟಿ ಕೇಸ್ ಗಂಭೀರ ಸ್ವರೂಪ ಪಡೆದುಕೊಳ್ತಿದ್ದಂತೆ ನಟ ಉಪೇಂದ್ರ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
FIR ದಾಖಲಾದ ಬಳಿಕ ನಟ ಉಪೇಂದ್ರ ಅವರು ವಿಚಾರಣೆಗೆ ಹಾಜರಾಗಬೇಕಿತ್ತು. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟಿಸ್ ಕೂಡ ನೀಡಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಅಟ್ರಾಸಿಟಿ ಕೇಸ್ ದಾಖಲಾಗಿರುವ ಹಿನ್ನೆಲೆ ಹೇಳಿಕೆ ನೀಡಬೇಕು ಎನ್ನಲಾಗಿತ್ತು. ಆದರೆ, ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುವ ಉಪೇಂದ್ರ ಅವರು ಬಂಧನದ ಭೀತಿಯಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಉಪೇಂದ್ರ ಅವರ ಮನೆಗೆ ಪೊಲೀಸರು ನೋಟಿಸ್ ನೀಡಲು ಹೋದಾಗ ಅವರ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಕತ್ರಿಗುಪ್ಪೆ ಹಾಗೂ ಸದಾಶಿವನಗರದಲ್ಲಿರುವ ಎರಡೂ ನಿವಾಸಕ್ಕೂ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಸ್ನೇಹಿತರು ಹಾಗೂ ಸಂಬಂಧಿಕರ ಸಂಪರ್ಕದಲ್ಲಿರುವ ಉಪೇಂದ್ರ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ನಟ ಉಪೇಂದ್ರ ಅವರನ್ನು ಪೊಲೀಸರು ಯಾವುದೇ ಕ್ಷಣದಲ್ಲಾದ್ರೂ ಅರೆಸ್ಟ್ ಮಾಡುವ ಸಾಧ್ಯತೆ ಇದೆ. ಯಾಕಂದ್ರೆ ಉಪೇಂದ್ರ ವಿರುದ್ಧ ದಾಖಲಾಗಿರೋ ಪ್ರಕರಣಗಳು ಜಾಮೀನುರಹಿತ ಪ್ರಕರಣಗಳಾಗಿವೆ. ಅಟ್ರಾಸಿಟಿ ಸೆಕ್ಷನ್ 3(1)(r)(s) ಅಡಿಯಲ್ಲಿ FIR ದಾಖಲಿಸಿದ ತನಿಖಾಧಿಕಾರಿ ಯಾವುದೇ ವಾರೆಂಟ್ ಇಲ್ಲದೇ ಬಂಧಿಸಬಹುದಾಗಿದೆ.
ಉಪ್ಪಿ ವಿರುದ್ಧ ದಾಖಲಾಗಿರೋ ಕೇಸ್‌ಗಳೇನು?
ನಟ ಉಪೇಂದ್ರ ವಿರುದ್ಧ ಅಟ್ರಾಸಿಟಿ ಸೆಕ್ಷನ್ 3(1) (r) (s) ಅಡಿ ಕೇಸ್ ದಾಖಲಾಗಿದೆ. ಇದರಲ್ಲಿ ಸೆಕ್ಷನ್ 3(1) ದಲಿತನಲ್ಲದ ವ್ಯಕ್ತಿಯಿಂದ ದಲಿತರಿಗೆ ನಿಂದನೆ ಆರೋಪವಿದೆ. 3(1)(r)- ಉದ್ದೇಶ ಪೂರ್ವಕವಾಗಿ ಸಾರ್ವಜನಿಕವಾಗಿ ನಿಂದನೆ, 3(1)(r)(s) ಸಾರ್ವಜನಿಕರಿಗೆ ತಿಳಿಯುವ ಉದ್ದೇಶದಿಂದ ನಿಂದನೆ ಕೇಸ್ ಹಾಕಲಾಗಿದೆ. ಈ ಪ್ರಕರಣದಲ್ಲಿ 6 ತಿಂಗಳಿನಿಂದ 5 ವರ್ಷದ ತನಕ ಜೈಲು ಶಿಕ್ಷೆ & ದಂಡ ವಿಧಿಸುವ ಸಾಧ್ಯತೆಯಿದೆ.
ಐಪಿಸಿ ಸೆಕ್ಷನ್ 505(1)(c) ಪ್ರಕಾರ ಧರ್ಮ, ಜನಾಂಗದ ಬಗ್ಗೆ ತಪ್ಪಾಗಿ ಹೇಳಿಕೆ ಪಬ್ಲಿಷ್ ಮಾಡುವುದು ಅಪರಾಧವಾಗಿದೆ. ಇದರಲ್ಲಿ 3 ವರ್ಷದ ತನಕ ಜೈಲು ಶಿಕ್ಷೆ ವಿಧಿಸಬಹುದಾಗಿದೆ. IPC 153A- ಜಾತಿ ಧರ್ಮಗಳ ನಡುವೆ ದ್ವೇಷ ಬಿತ್ತುವುದು ಸೇರಿದೆ. ಇದರ ಪ್ರಕಾರ 5 ವರ್ಷದ ಜೈಲು ಶಿಕ್ಷೆ & ದಂಡ ವಿಧಿಸಬಹುದು. IPC 295Aರ ಪ್ರಕಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಧರ್ಮ ನಿಂದನೆ ಅಡಿ 3 ವರ್ಷದ ಜೈಲು ಶಿಕ್ಷೆ & ದಂಡ ವಿಧಿಸಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ