ಕಾಂಗ್ರೆಸ್ ಗ್ಯಾರಂಟಿ ಮೇಲೆ ನಿಲುವಳಿ ಸೂಚನೆ ಮಂಡಿಸಲು ಬಿಜೆಪಿ ಬಿಗಿಪಟ್ಟು
ವಿಧಾನಪರಿಷತ್‌ನಲ್ಲಿ ಮಾತಿನ ಚಕಮಕಿ.. ಸಭಾಪತಿ ಎಂಕೆ ಪ್ರಾಣೇಶ್ ಫುಲ್ ಗರಂ
ಸರ್ಕಾರ ಸರ್ವಾಧಿಕಾರಿ ಧೋರಣೆ ತೋರಿಸುತ್ತೆ ಎಂದ ಕೋಟಾ ಶ್ರೀನಿವಾಸ ಪೂಜಾರಿ
ಇಂದು ವಿಧಾನಪರಿಷತ್ ಕಲಾಪ ಆರಂಭವಾದ ಬೆನ್ನಲ್ಲೇ ಗದ್ದಲ ಶುರುವಾಗಿದೆ. ಸರ್ಕಾರದ ವಿರುದ್ಧ ನಿಲುವಳಿ ಸೂಚನೆ ಕುರಿತಂತೆ ಬಿಜೆಪಿ ಪ್ರಸ್ತಾಪಿಸಿದ ಬೆನ್ನಲ್ಲೇ ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಎರಡು ಪಕ್ಷದ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಘೋಷಣೆ ಕೂಗಿದ್ದಾರೆ.
ಸದನದಲ್ಲಿ ಗದ್ದಲ
ಕಲಾಪ ಆರಂಭವಾದಂತೆ ಬಿಜೆಪಿ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಸದನದಲ್ಲಿ ನಿಲುವಳಿ ಬಗ್ಗೆ ಪ್ರಸ್ತಾಪಕ್ಕೆ ಮುಂದಾದರು. ಈ ವೇಳೆ ಪ್ರಶ್ನೋತ್ತರ ಕಲಾಪ ಮುಗಿದ ಮೇಲೆ ನಿಲುವಳಿ ಮಂಡಿಸಿ ಎಂದು ಕೋಟಾ ಶ್ರೀನಿವಾಸ್ ಪೂಜಾರಿಗೆ ಸಭಾಪತಿ ಎಂ ಕೆ ಪ್ರಾಣೇಶ್ ಸೂಚನೆ ನೀಡಿದ್ದಾರೆ. ಈ ವಿಚಾರವಾಗಿ ಸದನದಲ್ಲಿ ಗದ್ದಲ ಎದ್ದಿದೆ.
ಸಭಾಪತಿ ಎಂಕೆ ಪ್ರಾಣೇಶ್ ಗರಂ
ಕೋಟಾ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್ ಗ್ಯಾರಂಟಿ ಷರತ್ತುಗಳ ವಿಧಿಸಿರುವ ವಿಚಾರವಾಗಿ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಮುಂದಾದರು. ಈ ವೇಳೆ ಸಭಾಪತಿ ಎಂಕೆ ಪ್ರಾಣೇಶ್ ಗರಂ ಆಗಿದ್ದಾರೆ. ನಿಮಗೆ ನಿಯಮಾವಳಿಗಳು ಗೊತ್ತಿದೆ ಅಲ್ವಾ. ನೀವು ಕೊಟ್ಟ ಮೇಲೆ ನಿಲುವಳಿ ಸೂಚನೆಯನ್ನ ಪರಿಶೀಲನೆ ಮಾಡಿ. ಯಾವ ರೀತಿ ಅವಕಾಶ ನೀಡಬೇಕು ಎಂಬುದನ್ನು ತೀರ್ಮಾನ ಮಾಡ್ತೀವಿ ಎಂದು ಎಂ ಕೆ ಪ್ರಾಣೇಶ್ ಹೇಳಿದ್ದಾರೆ. ಆದರೆ ಈ ವೇಲೆ ಕಾಂಗ್ರೆಸ್ ಸದಸ್ಯರಿಂದ ಬಿಜೆಪಿ ವಿರುದ್ಧ ವಿರೋಧ ವ್ಯಕ್ತವಾಗಿದೆ. ಪರಿಷತ್ ಕಲಾಪದಲ್ಲಿ ಗದ್ದಲ, ಮಾತಿನ ಚಕಮಕಿ ನಡೆದಿದೆ.
ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆ ತೋರಿಸುತ್ತೆ
ಇದು ಗಂಭೀರವಾದ ಸರ್ಕಾರ ಭರವಸೆ ನೀಡಿದೆ. ಅದನ್ನು ಸರಿಯಾಗಿ ಈಡೇರಿಸಿಲ್ಲ. ಸಾರ್ವಜನಿಕ ಆಕ್ರೋಶ ಇಲ್ಲಿ ಪ್ರಸ್ತಾಪ ಮಾಡಬೇಕಿದೆ. ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆ ತೋರಿಸುತ್ತೆ. ಕೋಟಾ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದ್ದಾರೆ.
ಪರಿಷತ್ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿಕೆ
ಇನ್ನು ಗ್ಯಾರಂಟಿಯ ಕಂಡಿಷನ್ ಮೇಲೆ ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಸದಸ್ಯರ ಪಟ್ಟು ಹಿಡಿದಿದ್ದಾರೆ. ಆದರೆ ಪ್ರಶ್ನೋತ್ತರಕ್ಕಿಂತ ಮುಂಚೆ ಚರ್ಚೆಗೆ ಅವಕಾಶ ಇಲ್ಲ ಎಂದ ಕಾಂಗ್ರೆಸ್ ಸದಸ್ಯರು ವಿರೋಧಿಸಿದ್ದಾರೆ. ಎದ್ದು ನಿಂತು ಸದನದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಭಾಪತಿಗಳು ಕುಳಿತುಕೊಳ್ಳುವಂತೆ ಮನವಿ ಮಾಡಿದ್ದಾರೆ. ಸದನದ ಗದ್ದಲದ ನಡುವೆ ಸಭಾಪತಿಗಳು ಪರಿಷತ್ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ