newsfirstkannada.com

ಮುಡಾದಲ್ಲಿ ಭಾರೀ ಅಕ್ರಮದ ಆರೋಪ.. ನ್ಯೂಸ್​ಫಸ್ಟ್​ ಜೊತೆ ಬೈರತಿ ಸುರೇಶ್ ಮಾತನಾಡಿದ್ದೇನು?

Share :

Published June 30, 2024 at 6:04pm

Update June 30, 2024 at 6:07pm

  ಅರ್ಜಿ ಹಾಕಿಸಿಕೊಳ್ಳುವುದಕ್ಕೂ ಮೊದಲೇ ಸೈಟ್ ನೀಡಿದ್ದಾರಾ?

  ಯಾವುದೇ ಅಕ್ರಮದ ಬಗ್ಗೆ ನನಗೆ ಇದುವರೆಗು ದೂರು ಬಂದಿಲ್ಲ

  ಮುಡಾದ ಸಾವಿರಾರು ಕೋಟಿ ರೂ. ಹಗರಣ, ಸಚಿವರು ಏನಂದ್ರು?

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ನಗರದ ಮುಡಾದಲ್ಲಿ (ಮೈಸೂರು ಅರ್ಬನ್ ಡೆವೆಲಪ್​ಮೆಂಟ್ ಅಥಾರಿಟಿ) ಅಕ್ರಮ ಆರೋಪ ಕೇಳಿ ಬಂದಿದೆ. ಸದ್ಯ ಈ ಸಂಬಂಧ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಧೋನಿ, ಕೊಹ್ಲಿಯನ್ನೇ ಮೀರಿಸಿದ ರೋಹಿತ್.. T20 ವಿಶ್ವಕಪ್​​ನಲ್ಲಿ ವರ್ಲ್ಡ್​​​ ರೆಕಾರ್ಡ್​ ಮಾಡಿದ ಹಿಟ್​​ಮ್ಯಾನ್

ಮೈಸೂರಿನಲ್ಲಿ ನ್ಯೂಸ್​ಫಸ್ಟ್​ ಜೊತೆಗೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಮುಡಾ ತೀರ್ಮಾನಗಳು ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಸೈಟ್ ಹಂಚಿಕೆ ನನ್ನ ಅಧೀನಕ್ಕೆ ಬರುವುದಿಲ್ಲ. ಮುಡಾದಲ್ಲಿ ನಾನು ಸದಸ್ಯನಲ್ಲ. ಅಲ್ಲಿ ಏನೇ ನಡೆದರೂ ಅದರ ಸದಸ್ಯರು, ಅಧ್ಯಕ್ಷರೇ ನೇರ ಹೊಣೆಯಾಗುತ್ತಾರೆ. ಈ ಸಂಬಂಧ ಅಕ್ರಮದ ಬಗ್ಗೆ ನನಗೆ ದೂರು ಕೂಡ ಬಂದಿಲ್ಲ. ನ್ಯೂಸ್​ಫಸ್ಟ್​ ವರದಿ ನೋಡಿದ ಮೇಲೆಯೇ ನನಗೆ ಇದು ಗೊತ್ತಾಗಿದೆ. ನನಗೆ ದೂರು ಬಂದಿಲ್ಲವಾದರೂ ಈ ಬಗ್ಗೆ ಪರಿಶೀಲನೆ ನಡೆಸುವೆ. ರಾಜಕೀಯಕ್ಕಾಗಿ ಯಾರೋ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

ಮೈಸೂರಿನ ಮೂಡದಲ್ಲಿ ಬೃಹತ್ ಹಗರಣ ಮಾಡಿರುವ ಆರೋಪ ಕೇಳಿ ಬಂದಿದೆ. ಅಧಿಕಾರಿಗಳೇ ಸಾವಿರಾರು ಕೋಟಿ ಹಗರಣ ಮಾಡಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು 60 ವರ್ಷದ ಬಳಿಕ ಭೂಮಿಯನ್ನು ನೀಡಿದ್ದಾರೆ. ಒಟ್ಟು 98,206 ಚದರ ಅಡಿ ಭೂಮಿಯನ್ನು ನಾಗರಾಜು ಡಿ.ಎನ್ ಬಿನ್ ರಾಚಯ್ಯಗೆ ಭೂಮಿ ಪರಭಾರೆ ಮಾಡಲಾಗಿದೆ. ಸುಮಾರು 8.14 ಎಕರೆಯನ್ನು ಮುಡಾ ವಶಕ್ಕೆ ಪಡೆದುಕೊಂಡಿತ್ತು. ಆದರೆ ಸೈಟ್ ಕೊಟ್ಟ 10 ದಿನಗಳ ಬಳಿಕ ಅಧಿಕಾರಿಗಳು ಅರ್ಜಿಯನ್ನು ಹಾಕಿಸಿಕೊಂಡಿದ್ದಾರೆ. ಸದ್ಯ ಮೂಡಾದಲ್ಲಿ ನಡೆದ ಅವ್ಯವಹಾರದ ಕುರಿತು ವಿರೋಧ ವ್ಯಕ್ತವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಡಾದಲ್ಲಿ ಭಾರೀ ಅಕ್ರಮದ ಆರೋಪ.. ನ್ಯೂಸ್​ಫಸ್ಟ್​ ಜೊತೆ ಬೈರತಿ ಸುರೇಶ್ ಮಾತನಾಡಿದ್ದೇನು?

https://newsfirstlive.com/wp-content/uploads/2024/06/byrathi_suresh.jpg

Load More