ಮತ್ತೆ ಸುದ್ದಿಯಾದ ಬಾಲಿವುಡ್ ನಟಿ ಊರ್ವಶಿ
ದುಬಾರಿ ಮನೆಯನ್ನು ಖರೀದಿಸಿದ ನಟಿ!
ಮನೆ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ!
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿ ಇರುತ್ತಾರೆ. ನಟಿ ಊರ್ವಶಿ ರೌಟೇಲಾ ಮುಂಬೈನಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವರದಿಗಳ ಪ್ರಕಾರ ಊರ್ವಶಿ ರೌಟೇಲಾ ಕಳೆದ ಎಂಟು ತಿಂಗಳಿಂದ ಮುಂಬೈನಲ್ಲಿ ಮನೆಯನ್ನು ಹುಡುಕುತ್ತಿದ್ದರು. ಈಗ ಊರ್ವಶಿ ಜುಹುದಲ್ಲಿರುವ ಯಶ್ ಚೋಪ್ರಾ ಅವರ ಬಂಗಲೆಯ ಬಳಿಯೇ ಮತ್ತೊಂದು ಬಂಗಲೆಗೆ ಶಿಫ್ಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ನಟಿ ಮುಂಬೈನಲ್ಲಿ ಸರಿ ಸುಮಾರು 190 ಕೋಟಿ ರೂಪಾಯಿ ಬೆಲೆ ಬಾಳುವ ಮನೆಗೆ ಶಿಫ್ಟ್ ಆಗಿದ್ದಾರೆ. ನಾಲ್ಕು ಅಂತಸ್ತಿನ ಬಂಗಲೆಯು ಅದ್ಧೂರಿ ಉದ್ಯಾನವನ, ವೈಯಕ್ತಿಕ ಜಿಮ್ ಮತ್ತು ದೊಡ್ಡ ಹಿತ್ತಲನ್ನು ಒಳಗೊಂಡಿದೆ.
ಸದ್ಯ ನಟಿ ಊರ್ವಶಿ ರೌಟೇಲಾ ಶೀಘ್ರದಲ್ಲೇ ರಾಮ್ ಪೋತಿನೇನಿ ಅವರ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ‘ಇನ್ಸ್ಪೆಕ್ಟರ್ ಅವಿನಾಶ್’ ಚಿತ್ರದಲ್ಲಿ ರಣದೀಪ್ ಹೂಡಾ ಜೊತೆ ನಟಿಸುತ್ತಿದ್ದಾರೆ. ಥ್ರಿಲ್ಲರ್ ಸಿನಿಮಾ ‘ಬ್ಲ್ಯಾಕ್ ರೋಸ್’ನಲ್ಲಿ ಊರ್ವಶಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ