GE ಏರೋಸ್ಪೇಸ್ ಜೊತೆಗಿನ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್..!
ಮೋದಿ ಅಮೆರಿಕ ಪ್ರವಾಸದಲ್ಲಿ ನಡೆದಿದ್ದ ಮಹತ್ವದ ಒಪ್ಪಂದ
ರಕ್ಷಣಾ ಪಡೆಗೆ ‘ಗೇಮ್ ಚೇಂಜರ್’ ಆಗಿಲಿದೆ ಈ ಒಪ್ಪಂದ..!
ಭಾರತೀಯ ರಕ್ಷಣಾ ಪಡೆ ಮತ್ತಷ್ಟು ಬಲಿಷ್ಠವಾಗುತ್ತಿದೆ. ಇದೀಗ ಫೈಟರ್ ಜೆಟ್ಗಳ ತಯಾರಿಕೆ ಹಾಗೂ ಉಭಯ ದೇಶಗಳ ರಕ್ಷಣಾ ಸಹಕಾರದಲ್ಲಿ ಅಮೆರಿಕ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ಈ ಮೂಲಕ ಭಾರತೀಯ ವಾಯುಪಡೆಗೆ ಆನೆಬಲ ಸಿಕ್ಕಂತಾಗಿದೆ.
ಅಮೆರಿಕದ ನಿರ್ಧಾರ ಏನು..?
ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್‌ಗಳನ್ನು ಉತ್ಪಾದಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನೊಂದಿಗೆ (Hindustan Aeronautics) ಅಮೆರಿಕದ GE ಏರೋಸ್ಪೇಸ್‌ನ (GE Aerospace) ಒಪ್ಪಂದಕ್ಕೆ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ (US Congress ) ಗ್ರೀನ್ ಸಿಗ್ನಲ್ ನೀಡಿದೆ. F414 ಫೈಟರ್ ಜೆಟ್ಗಳ ಎಂಜಿನ್ ಉತ್ಪಾದನೆಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.
ಜೂನ್‌ನಲ್ಲಿ ಬಿಗ್ ಡೀಲ್
ಕಳೆದ ಜೂನ್‌ನಲ್ಲಿ ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡಿದ್ದರು. ಈ ವೇಳೆ ಭಾರತ ಮತ್ತು ಅಮೆರಿಕ ಮಧ್ಯೆ ಮಹತ್ವದ ಒಪ್ಪಂದ ಏರ್ಪಟ್ಟಿತ್ತು. ಒಪ್ಪಂದದ ಪ್ರಕಾರ, ಅಮೆರಿಕ ಕಾಂಗ್ರೆಸ್ ಇಂದು GE ಜೆಟ್ ಎಂಜಿನ್ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ನೀಡಿ ಬೈಡನ್ ಸರ್ಕಾರಕ್ಕೆ ಒಪ್ಪಿಗೆ ಕೊಟ್ಟಿದೆ. ಅಂತೆಯೇ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನೊಂದಿಗೆ ತಂತ್ರಜ್ಞಾನ ವರ್ಗಾವಣೆ, ಜೆಟ್ ಎಂಜಿನ್ ತಯಾರಿಕೆಗೆ ಒಳಗೊಂಡಿರುವ ಒಪ್ಪಂದದ ಅನುಷ್ಠಾನದ ದಾರಿ ಸುಗಮವಾಗಿದೆ.
ಯಾಕೆ ಈ ಡೀಲ್ ಗೇಮ್ ಚೆಂಜರ್?
ಒಪ್ಪಂದದ ಪ್ರಕಾರ, ಹೆಚ್ಎಲ್ನ F414 ಫೈಟರ್ ಜೆಟ್ ಎಂಜಿನ್‌ಗಳ ಉತ್ಪಾದನೆಗೆ ಅಮೆರಿಕ ಶೇಕಡಾ 80 ರಷ್ಟು ತನ್ನ ತಂತ್ರಜ್ಞಾನವನ್ನು (technology) ಭಾರತಕ್ಕೆ ವರ್ಗಾಯಿಸುತ್ತದೆ. ಪರಿಣಾಮ ಲಘು ಯುದ್ಧ ವಿಮಾನ (LCA) MKIIದ ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚಲಿದೆ. ವಾಯುಪಡೆಯ Light Combat Aircraft MKII (ಲಘು ಯುದ್ಧ ವಿಮಾನ ಎಂಕೆ-2) ಯೋಜನೆಯ ಅಡಿಯಲ್ಲಿ ಭಾರತ GE ಏರೋಸ್ಪೇಸ್‌ನ F414 ಎಂಜಿನ್‌ಗಳ ಜಂಟಿ ಉತ್ಪಾದನೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಅಮೆರಿಕ ನಿರ್ಧಾರ ಭಾರತದ ಪಾಲಿಗೆ ದೊಡ್ಡ ಗೇಮ್ ಚೆಂಜರ್ ಆಗಲಿದೆ ಎಂದು ಎಚ್‌ಎಎಲ್ ಮುಖ್ಯಸ್ಥ ಸಿಬಿ ಅನಂತಕೃಷ್ಣನ್ ಬಣ್ಣಿಸಿದ್ದಾರೆ. ಒಪ್ಪಂದವು ಮಿಲಿಟರಿ ಜೆಟ್‌ಗಳಿಗೆ ಸ್ಥಳೀಯ ಎಂಜಿನ್‌ಗಳು ಭವಿಷ್ಯದಲ್ಲಿ ಶಕ್ತಿಯನ್ನು ತುಂಬುತ್ತವೆ. GE ಏರೋಸ್ಪೇಸ್‌ನ ಜೊತೆಗಿನ ಒಪ್ಪಂದದಲ್ಲಿ 99 ಜೆಟ್ ಎಂಜಿನ್‌ಗಳ ಉತ್ಪಾದನೆ ಆಗಲಿವೆ. ಅಮೆರಿಕ ತಂತ್ರಜ್ಞಾನವನ್ನು ನೀಡುವುದರಿಂದ ವೆಚ್ಚ ಕೂಡ ಕಮ್ಮಿ ಆಗಲಿದೆ. F414 ಎಂಜಿನ್‌ಗಳು ವಿಶ್ವಾಸರ್ಹತೆ ಮತ್ತು ಕಾರ್ಯಕ್ಷಮತೆಗೆ ಹೆಸರುವಾಸಿ ಆಗಿವೆ.
GE Aerospace ಕಳೆದ 4 ದಶಕಗಳಿಂದ ಭಾರತದ ನೆಲದಲ್ಲಿದೆ. ಇಂಜಿನ್‌ಗಳು (engines), ಏವಿಯಾನಿಕ್ಸ್ (avionics), ಸರ್ವೀಸ್, ಇಂಜಿನಿಯರಿಂಗ್, ಉತ್ಪಾದನೆ (manufacturing) ಮತ್ತು ಸ್ಥಳೀಯ ಮೂಲಗಳನ್ನು (local sourcing) ಒದಗಿಸುತ್ತ ಬಂದಿದೆ. AMCA Mk2 ಎಂಜಿನ್ ಪ್ರೋಗ್ರಾಂ ಅಡಿಯಲ್ಲಿ ಭಾರತ ಸರ್ಕಾರದೊಂದಿಗೆ ಸಹಯೋಗವನ್ನು ಮುಂದುವರಿಸುವುದಾಗಿ ಈ ಹಿಂದೆ ಹೇಳಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ