newsfirstkannada.com

ಭಾರತಕ್ಕೆ ಬರಲು ಸಜ್ಜಾದ ಅಮೆರಿಕ ಅಧ್ಯಕ್ಷ ಜೋ ಬೈಡನ್ ದಂಪತಿಗೆ ಬಿಗ್ ಶಾಕ್; ಏನಾಯ್ತು?

Share :

05-09-2023

    ಕಳೆದ ಒಂದು ವಾರದಿಂದ ಯುಸ್​ನಲ್ಲಿ ಕೊರೊನಾ ಕೇಸ್ ಹೆಚ್ಚಳ

    ಈ ಕೊರೊನಾ ಹೊಸ ತಳಿ ಹೆಸರೇನು?, ಇದರ ವೇಗ ಹೇಗಿದೆ..?

    ಜೋ ಬೈಡನ್​ ಪತ್ನಿ ಜಿಲ್​ಗೆ ಕೊರೊನಾ ಟೆಸ್ಟ್​ನಲ್ಲಿ ಪಾಸಿಟಿವ್​..!

ನವದೆಹಲಿ: ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ಇದೇ ಸೆ.7 ರಂದು ಭಾರತಕ್ಕೆ ಆಗಮಿಸುತ್ತಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್​ ದಂಪತಿಗೆ ಕೊರೊನಾ ಕಂಟಕವಾಗಿ ಪರಿಣಮಿಸಿದೆ. ಇಬ್ಬರಿಗೂ ಕೊರೊನಾ ಪರೀಕ್ಷೆ ಮಾಡಲಾಗಿದ್ದು ಅಧ್ಯಕ್ಷ ಜೋ ಬೈಡನ್​ ಅವರಿಗೆ ಕೊರೊನಾ ನೆಗೆಟಿವ್ ಆದ್ರೆ, ಪತ್ನಿ ಜಿಲ್​ ಬೈಡನ್ ಅವರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವೈಟ್​ಹೌಸ್​ನ ಪ್ರೆಸ್​ ಸೆಕ್ರೆಟರಿ ಕರೀನ್ ಜೀನ್-ಪಿಯರ್ ಅವರು, ಯುಎಸ್​ ಅಧ್ಯಕ್ಷ ಜೋ ಬೈಡನ್ ಅವರು ಕೊರೊನಾ ಬಗ್ಗೆ ನಿತ್ಯ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದರು. ಹೀಗಾಗಿ ಅವರಿಗೆ ನೆಗಟಿವ್ ಇದೆ. ಆದ್ರೆ ಅಮೆರಿಕದ ಪ್ರಥಮ ಮಹಿಳೆ ಜಿಲ್​ ಬೈಡನ್​ಗೆ ಸದ್ಯ ಕೊರೊನಾ ಪಾಸಿಟಿವ್ ಇದೆ. ಇದು ಇನ್ನು ಪ್ರಾಥಮಿಕ ಹಂತದಲ್ಲಿದೆ. ಈ ಬಗ್ಗೆ ಯಾವುದೇ ಗಾಬರಿ ಪಡುವುದು ಬೇಕಾಗಿಲ್ಲ. ಜಿಲ್​ ಬೈಡನ್ ಅವರು ಡೆಲವೇರ್‌ನ ರೆಹೋಬೋತ್ ಬೀಚ್‌ನಲ್ಲಿನ ತಮ್ಮ ನಿವಾಸದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಧಾನಿ ಮೋದಿ

ಇದನ್ನು ಓದಿ: ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷರು ಬರುತ್ತಿಲ್ಲವೇಕೆ..? ಈ ಬಗ್ಗೆ ಜೋ ಬೈಡನ್ ಹೇಳಿದ್ದೇನು..?

ಕಳೆದ ಒಂದು ವಾರದಿಂದ ಅಮೆರಿಕದಲ್ಲಿ ಕೊರೊನಾ ಕೇಸ್​ಗಳು ಹೆಚ್ಚುತ್ತಿವೆ. ಹೀಗಾಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಅಧಿಕಗೊಂಡಿದೆ. ಸದ್ಯ ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಕೊರೊನಾ ತಳಿ ಪಿರೋಲಾ ಅಥವಾ BA.2.86 ಎಂದು ಕರೆಯಲಾಗುತ್ತಿದೆ. ಇದು ಅಪಾಯಕಾರಿಯಾಗಿದ್ದು ವೇಗವಾಗಿ ಹರಡುತ್ತಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತಕ್ಕೆ ಬರಲು ಸಜ್ಜಾದ ಅಮೆರಿಕ ಅಧ್ಯಕ್ಷ ಜೋ ಬೈಡನ್ ದಂಪತಿಗೆ ಬಿಗ್ ಶಾಕ್; ಏನಾಯ್ತು?

https://newsfirstlive.com/wp-content/uploads/2023/09/JOE_BIDEN_JILLBIDEN.jpg

Load More