newsfirstkannada.com

ಪೆಟ್ರೋಲ್​ ಬೇಡ​, ಡೀಸೆಲ್​​​​​ ಬೇಡ; ಆಕಾಶದಲ್ಲಿ ಹಾರಲಿದೆ ಈ ಕಾರ್​​; ಇದರ ಬೆಲೆ ಎಷ್ಟು?

Share :

30-06-2023

  ವಿಮಾನಗಳಂತೆ ಹಾರಲು ರೆಡಿಯಾಗಿವೆ ಈ ಕಂಪನಿಯ ಕಾರುಗಳು

  ಹಾರುವ ಕಾರುಗಳು ರಸ್ತೆ ಮೇಲೂ ಓಡಿಸಬಹುದು.. ನೋ ಪ್ರಾಬ್ಲಮ್!

  ಈ ಕಾರಿನಲ್ಲಿ ಎಷ್ಟು ಕಿ. ಮೀಟರ್​ ಆಕಾಶದಲ್ಲಿ ಹಾರಬಹುದು ಗೊತ್ತಾ?

ವಾಷಿಂಗ್ಟನ್​ ಡಿ.ಸಿ: ಕಾರ್​.. ಕಾರ್​.. ಕಾರ್​ ಎಲ್ನೋಡಿ ಕಾರ್ ಎಂದು ಸ್ಯಾಂಡಲ್​​ವುಡ್​ನಲ್ಲಿ ಒಂದು ಸಿನಿಮಾ ಸಾಂಗ್​ ಇದೆ. ಮುಂಬೈ, ಕೋಲ್ಕತ್ತಾ, ದೆಹಲಿ, ಚೆನ್ನೈ ಸೇರಿ ಬೆಂಗಳೂರಿನಂತಹ ನಗರಗಳಲ್ಲಿ ಕಾರುಗಳದ್ದೇ ಕಾರುಬಾರು. ಸದ್ಯ ಮೊದಲಿದ್ದವುಗಳಿಗಿಂತ ಈಗಿರುವ ಕಾರುಗಳು ಸಾಕಷ್ಟು ಬದಲಾವಣೆ ಹೊಂದಿವೆ. ಹೊಸ ಹೊಸ ತಂತ್ರಜ್ಞಾನದಿಂದ ಕಾರುಗಳು ಹೊಸಯುಗದ ಮುನ್ನುಡಿ ಬರೆಯುತ್ತಿವೆ. ಇಷ್ಟು ದಿನ ರಸ್ತೆ ಮೇಲೆ ಓಡಾಡುವ ಕಾರುಗಳನ್ನು ನೋಡಿದ್ದೇವೆ, ಓಡಿಸಿಯು ಇರುತ್ತೇವೆ. ಈಗ ಈ ಎಲ್ಲದಕ್ಕಿಂತ ಮಿಗಿಲಾದ ಕಾರುಗಳು ಮಾರ್ಕೆಟ್​ಗೆ ಬರಲು ರೆಡಿಯಾಗಿವೆ. ಈ ಕಾರುಗಳು ದುಬಾರಿಯಾಗಿದ್ದು ರಸ್ತೆ ಮೇಲೆ ಓಡುವ ಜೊತೆಗೆ ಆಕಾಶದಲ್ಲಿ ಹಕ್ಕಿಗಳಂತೆ ಹಾರಬಲ್ಲವು..

ಕ್ಯಾಲಿಫೋರ್ನಿಯಾ ಮೂಲದ ಅಲೆಫ್ ಏರೋನಾಟಿಕ್ಸ್ ಕಂಪನಿಯು ವಿಶ್ವದ ಮೊಟ್ಟ ಮೊದಲ ಹಾರುವ ಅಲೆಫ್ ಮಾಡೆಲ್- A​ (Alef Model A) ಕಾರಿಗೆ ಅಮೆರಿಕ ಸರ್ಕಾರದಿಂದ ಅನುಮತಿ ಪಡೆದುಕೊಂಡಿದೆ. ಈ ಕಾರುಗಳು ಎಲೆಕ್ಟ್ರಿಕ್ ವರ್ಟಿಕಲ್ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ (eVTOL) ಆಗಲಿವೆ. ಇವುಗಳನ್ನು ಬೇರೆ ಕಾರುಗಳಂತೆ ಸಾರ್ವಜನಿಕ ರಸ್ತೆಗಳಲ್ಲಿ ಓಡಿಸಬಹುದು. ಜೊತೆಗೆ ಮೇಲಕ್ಕೆ ಹಾರಿದಾಗ ಲಂಬಾಕಾರದಲ್ಲಿ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಕೂಡ ಮಾಡಬಹುದಾಗಿದೆ.

ಇದನ್ನು ಓದಿ: ಬೌಲಿಂಗ್​​ನಲ್ಲೂ ಧೋನಿ ಮಾಡ್ತಿದ್ರು ಮ್ಯಾಜಿಕ್.. ರೈನಾ ಬಿಚ್ಚಿಟ್ರು MSDಗೆ ಇರೋ ಮತ್ತೊಂದು ಟ್ಯಾಲೆಂಟ್​​​..!

2022 ಅಕ್ಟೋಬರ್​ನಲ್ಲಿ ಅಲೆಫ್​ ಮಾಡೆಲ್- A ಕಾರುನ್ನು ಕಂಪನಿಯು ಮೊದಲ ಬಾರಿಗೆ ಅನಾವರಣ ಮಾಡಿತ್ತು. ಈ ಕಾರನ್ನು ಒಮ್ಮೆ ಫುಲ್​ ಚಾರ್ಜ್​ ಮಾಡಿದರೆ ಇಬ್ಬರು ಪ್ರಯಾಣಿಕರು ಕುಳಿತುಕೊಂಡು 200 ಮೈಲುಗಳ (322 ಕಿ.ಮೀ) ವರೆಗೆ ಓಡಿಸಬಹುದು. ಅಲ್ಲದೇ ಅದೇ ಚಾರ್ಜ್​ನಲ್ಲಿ 110 ಮೈಲುಗಳು (177 ಕಿ.ಮೀ)ವರೆಗೆ ಆಗಸದಲ್ಲಿ ಹಾರುವ‌ ಮೂಲಕ ಪ್ರಯಾಣ ಮಾಡಬಹುದು.

ಸದ್ಯ ಕಾರನ್ನು ಮಾರ್ಕೆಟ್​ಗೆ ಬಿಟ್ಟಿಲ್ಲವಾದರೂ ಕಂಪನಿಯ ಅಧಿಕೃತ ವೆಬ್​ಸೈಟ್​ನಲ್ಲಿ ಬುಕ್​ ಮಾಡಬಹುದಾಗಿದೆ. ಬುಕ್ಕಿಂಗ್​ಗಳ ಆಧಾರದ ಮೇಲೆ 2025ಕ್ಕೆ ಕಂಪನಿಯು ಕಾರುಗಳ ತಯಾರಿಕೆಯನ್ನು ಆರಂಭ ಮಾಡಲಿದೆ. ಆದರೆ ಕಾರಿನ ಬೆಲೆಯು ಅತ್ಯಂತ ದುಬಾರಿ ಎನಿಸಿದೆ. ಅಲೆಫ್​ ಮಾಡೆಲ್- Aನ ಒಂದು ಕಾರಿನ ಬೆಲೆ 2 ಕೋಟಿ 46 ಸಾವಿರ ರೂಪಾಯಿ ಎಂದು ಕಂಪನಿ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೆಟ್ರೋಲ್​ ಬೇಡ​, ಡೀಸೆಲ್​​​​​ ಬೇಡ; ಆಕಾಶದಲ್ಲಿ ಹಾರಲಿದೆ ಈ ಕಾರ್​​; ಇದರ ಬೆಲೆ ಎಷ್ಟು?

https://newsfirstlive.com/wp-content/uploads/2023/06/US_ALEF_MADEL_A_CAR.jpg

Load More