newsfirstkannada.com

PHOTO: ಹೇಗಿದ್ದ ದೇಶ ಹೇಗಾಯ್ತು.. ನೋಡ ನೋಡುತ್ತಿದ್ದಂತೆ 90 ಮಂದಿ ಸಾವು; ಒಂದೊಂದು ದೃಶ್ಯವೂ ಭೀಕರ

Share :

13-08-2023

    ಪೆಸಿಫಿಕ್ ಮಹಾಸಾಗರದ ಹವಾಯಿ ದ್ವೀಪದಲ್ಲಿ ನೈಸರ್ಗಿಕ ವಿಕೋಪ

    ತಮ್ಮ ಜೀವ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿರುವ ಹವಾಯಿ ಜನ

    ಹವಾಯಿ ದ್ವೀಪದ ಲಹೈನಾ ನಗರದ ಸದ್ಯದ ಸ್ಥಿತಿ ನರಕಕ್ಕೂ ಮಿಗಿಲು

ಲಹೈನಾ: ಉತ್ತರ ಅಮೆರಿಕಾದ ಹವಾಯಿ ದ್ವೀಪ ಅಕ್ಷರಶಃ ಬೂದಿಯಾಗಿದೆ. ಕಾಡ್ಗಿಚ್ಚು ದ್ವೀಪ ರಾಷ್ಟ್ರವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದು ಕಾಡ್ಗಿಚ್ಚು ಸ್ಮಶಾನದ ವಾತಾವರಣವನ್ನು ಸೃಷ್ಟಿಸಿದೆ. ಮನೆ, ಕಾರುಗಳೆಲ್ಲಾ ಸುಟ್ಟು ಕರಕಲಾಗಿದ್ದು, ಜನ ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿ ತಮ್ಮ ಜೀವ ಉಳಿಸಿಕೊಳ್ಳುತ್ತಿದ್ದಾರೆ. ಹವಾಯಿ ದ್ವೀಪದ ಲಹೈನಾ ನಗರದ ಸದ್ಯದ ಸ್ಥಿತಿ ನರಕದ ವಾತಾವರಣವನ್ನೇ ಸೃಷ್ಟಿಸಿದೆ.

ಪ್ರಕೃತಿ ವಿಕೋಪವೇ ಹಾಗೆ.. ಮನುಷ್ಯನ ದುರಾಸೆ, ಅತಿಯಾದ ಆವಿಷ್ಕಾರ, ಪರಿಸರ ಮಾಲಿನ್ಯಕ್ಕೆ ಪದೆ ಪದೇ ಎಚ್ಚರಿಕೆಯ ಪಾಠ ಕಲಿಸುತ್ತೆ. ಹವಾಯಿ ದ್ವೀಪದಲ್ಲಿ ಆಗಿರೋದೋ ಅದೇ. ನೈಸರ್ಗಿಕ ವಿಕೋಪ ಸಂಭವಿಸಿದ್ದು, ಕಾಡ್ಗಿಚ್ಚು ಬರೋಬ್ಬರಿ 90ಕ್ಕೂ ಜನರನ್ನು ಬಲಿ ಪಡೆದಿದೆ. ಹಚ್ಚ ಹಸಿರಿನ ಸುಂದರ ತಾಣ ಸ್ಮಶಾನದ ವಾತಾವರಣವಾಗಿ ಬದಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹೇಗಿದ್ದ ಹವಾಯಿ ಹೇಗಾಯ್ತು ಅನ್ನೋ ಫೋಟೋಗಳು ವೈರಲ್ ಆಗಿದೆ.

ಈ ದೃಶ್ಯಗಳನ್ನ ನೋಡಿದ್ರೆ ಎಂಥವರ ಹೃದಯವೂ ಕರಗುವಂತಿದೆ. ಒಂದು ಕಡೆ ಸುಟ್ಟು ಕರಕಲಾದ ನಗರ ಪ್ರದೇಶ, ಮತ್ತೊಂದೆಡೆ ಜೀವ ಉಳಿಸಿಕೊಳ್ಳಲು ನೀರಿನಲ್ಲಿ ಈಜುತ್ತಿರುವ ಜನ. ಪ್ರಕೃತಿಯ ಸ್ವರ್ಗದಂತಿದ್ದ ಹವಾಯಿ ದ್ವೀಪ ರಾಷ್ಟ್ರ ಈಗ ನಿಜಕ್ಕೂ ನರಕದಂತಾಗಿದೆ. ಕಾಡ್ಗಿಚ್ಚು ಮತ್ತಷ್ಟು ವ್ಯಾಪಿಸಿದ್ದು, ಸಾವು, ನೋವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹವಾಯಿ ಸರ್ಕಾರಿ ಅಧಿಕಾರಿಗಳು ಸುಮಾರ್ 1000 ಮನೆಗಳಿಗೆ ಹಾನಿಯಾಗಿದ್ದು, ಈ ಹಾನಿಯನ್ನು ಸರಿಪಡಿಸಲು ನಮಗೆ ಹಲವು ವರ್ಷಗಳೇ ಬೇಕು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹವಾಯಿ ಅನ್ನೋ ಪ್ರದೇಶ ಪಶ್ಚಿಮ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಒಂದು ದ್ವೀಪ ರಾಷ್ಟ್ರವಾಗಿದೆ. ಅಮೆರಿಕಾದಿಂದ ಸುಮಾರು 2,000 ಮೈಲುಗಳಷ್ಟು ದೂರದಲ್ಲಿರುವ ಇದು ಪೆಸಿಫಿಕ್ ಮಹಾಸಾಗರದಲ್ಲಿ. ಇದು ಉತ್ತರ ಅಮೆರಿಕಾದ ಹೊರಗಿನ ಏಕೈಕ US ರಾಷ್ಟ್ರವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

PHOTO: ಹೇಗಿದ್ದ ದೇಶ ಹೇಗಾಯ್ತು.. ನೋಡ ನೋಡುತ್ತಿದ್ದಂತೆ 90 ಮಂದಿ ಸಾವು; ಒಂದೊಂದು ದೃಶ್ಯವೂ ಭೀಕರ

https://newsfirstlive.com/wp-content/uploads/2023/08/Hawaii-2.jpg

Load More