newsfirstkannada.com

ಅಶ್ಲೀಲ ಮೂವಿ ಮಾಡ್ತಿದ್ದ ವ್ಯಕ್ತಿಯಿಂದ ಗನ್​ ಫೈರಿಂಗ್.. 22 ಜನ ಸ್ಥಳದಲ್ಲೇ ಸಾವು, 50ಕ್ಕೂ ಹೆಚ್ಚು ಮಂದಿ ಗಂಭೀರ -Video

Share :

26-10-2023

  ನಗರದ ಬಾರ್, ವಾಲ್‌ಮಾರ್ಟ್​ಗೆ ನುಗ್ಗಿದ ವ್ಯಕ್ತಿಯಿಂದ ನಿರಂತರ ಫೈರಿಂಗ್

  ಕ್ಷಣಾರ್ಧದಲ್ಲಿ 22 ಜನರನ್ನು ಕೊಂದ, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು

  ಆರೋಪಿ ಎಆರ್​ 15 ಎನ್ನುವ ಗನ್​ ತೆಗೆದುಕೊಂಡು ಜನರ ಮೇಲೆ ಫೈರಿಂಗ್

ವ್ಯಕ್ತಿಯೊಬ್ಬ ಸ್ಥಳೀಯ ಬಾರ್ ಹಾಗೂ ವಾಲ್‌ಮಾರ್ಟ್​ಗೆ ನುಗ್ಗಿ ಮನಬಂದಂತೆ ಗನ್​ ಫೈರಿಂಗ್​ ಮಾಡಿದ್ದರಿಂದ ಸುಮಾರು 22 ಜನರು ಸಾವನ್ನಪ್ಪಿದ್ದು 50ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೃತ್ಯ ಎಸಗಿದ ಆರೋಪಿಯು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಈ ಘಟನೆಯು ಅಮೆರಿಕದ ಲೆವಿಸ್ಟನ್ ರಾಜ್ಯದ ಮೈನೆ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಗನ್​ ಫೈರ್ ಮಾಡಿದ ಆರೋಪಿ ಶಂಕಿತ ರಾಬರ್ಟ್ ಕಾರ್ಡ್ ಎಂದು ಗುರುತಿಸಲಾಗಿದೆ. ಗನ್​ ಹಿಡಿದುಕೊಂಡು ಬಂದ ಈತ ಬೌಲಿಂಗ್ ಅಲ್ಲೆ ಬಳಿಯ ಸ್ಥಳೀಯ ಬಾರ್ ಮತ್ತು ವಾಲ್‌ಮಾರ್ಟ್ ವಿತರಣಾ ಕೇಂದ್ರಕ್ಕೆ ನುಗ್ಗಿ ಜನರ ಮೇಲೆ ಮನಬಂದಂತೆ ಗನ್​ನಿಂದ ಫೈರಿಂಗ್ ಮಾಡಿದ್ದಾನೆ. ಇದರಿಂದ ಸುಮಾರು 22 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು ಸುಮಾರು 50 ರಿಂದ 60 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಂಕಿತನು ಎಆರ್​ 15 ಎನ್ನುವ ಗನ್​ ಅನ್ನು ಕೃತ್ಯಕ್ಕೆ ಬಳಸಿದ್ದಾನೆ ಎಂದು ತಿಳಿದು ಬಂದಿದೆ.

ತಕ್ಷಣ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿ ರಾಬರ್ಟ್ ಕಾರ್ಡ್ ಅಶ್ಲೀಲ ವಿಡಿಯೋ ಮಾಡುವ ಅಪರಾಧಿಯಾಗಿದ್ದನು. ಸದ್ಯ ಗನ್​ ಸಮೇತ ಎಸ್ಕೇಪ್ ಆಗಿರುವ ಆರೋಪಿಯು ಮತ್ತೆ ಎಲ್ಲಿ ಕೃತ್ಯ ಎಸಗುತ್ತಾನೆ ಎಂಬ ಆತಂಕ ಕಾಡುತ್ತಿದೆ.

ಈ ಹಿಂದೆ ಮಕ್ಕಳ ಅಶ್ಲೀಲ ವಿಡಿಯೋಗಳನ್ನ ಮಾಡಿದ್ದಕ್ಕಾಗಿ ಅರೆಸ್ಟ್ ಆಗಿದ್ದನು. ಅಮೆರಿಕದಲ್ಲಿ ಇಂತಹ ಕೃತ್ಯದಲ್ಲಿ ಭಾಗಿಯಾದವರಿಗೆ ಗನ್ ಹೊಂದಲು ಅವಕಾಶವಿಲ್ಲ. ಆದರೆ, ಆರೋಪಿಗೆ ಹೇಗೆ ಗನ್ ಸಿಕ್ಕಿದೆ ಎಂದು ತಿಳಿದು ಬಂದಿಲ್ಲ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಶ್ಲೀಲ ಮೂವಿ ಮಾಡ್ತಿದ್ದ ವ್ಯಕ್ತಿಯಿಂದ ಗನ್​ ಫೈರಿಂಗ್.. 22 ಜನ ಸ್ಥಳದಲ್ಲೇ ಸಾವು, 50ಕ್ಕೂ ಹೆಚ್ಚು ಮಂದಿ ಗಂಭೀರ -Video

https://newsfirstlive.com/wp-content/uploads/2023/10/US_GUN_FIRING.jpg

Load More