newsfirstkannada.com

US Open Tennis: ಫೈನಲ್​ ಮ್ಯಾಚ್​ ಕೈಚೆಲ್ಲಿದ ರೋಹನ್​ ಬೋಪಣ್ಣ ಜೋಡಿ.. ಏನಾಯಿತು?

Share :

09-09-2023

    ನ್ಯೂಯಾರ್ಕ್​ನಲ್ಲಿ ನಡೆದ ಯುಎಸ್​ ಓಪನ್​ ಫೈನಲ್​ ಪಂದ್ಯ

    ರೋಹನ್​ ಬೋಪಣ್ಣ ಜೋಡಿ ವಿರುದ್ಧ ಫೈನಲ್​ ಗೆದ್ದವಱರು?

    ಮೊದಲ ಸೆಟ್​ನಲ್ಲಿ ರೋಹನ್​ ಜೋಡಿ ಮುನ್ನಡೆ ಸಾಧಿಸಿತ್ತು

ಅಮೆರಿಕದ ನ್ಯೂಯಾರ್ಕ್​ನಲ್ಲಿ ನಡೆದ ಯುಎಸ್​ ಓಪನ್​ ಟೆನ್ನಿಸ್​ ಟೂರ್ನಿಯ ಫೈನಲ್​ ಪಂದ್ಯದ ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹನ್​ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಮುಗ್ಗರಿಸಿದೆ.

ಅಮೆರಿಕದ ರಾಜೀವ್​ ರಾಮ್ ಮತ್ತು ಲಂಡನ್​ ಜೋ ಸಾಲಿಸ್ಬರಿ ವಿರುದ್ಧ ಫೈನಲ್​ ಮ್ಯಾಚ್​ನಲ್ಲಿ ಸೆಣಸಾಟ ನಡೆಸಿದ ರೋಹನ್​ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ 6-2, 3-6, 4-6 ಸೆಟ್​ಗಳಲ್ಲಿ ಸೋತಿದ್ದಾರೆ. ಆಟದ ಮೊದಲ ಸೆಟ್​ನಲ್ಲಿ ರೋಹನ್​ ಬೋಪಣ್ಣ ಜೋಡಿ ಭರ್ಜರಿಯಾಗಿ ಮುನ್ನಡೆ ಪಡೆದಿತ್ತು. ಆದರೆ ನಂತರದ ಸೆಟ್​​ಗಳಲ್ಲಿ ಇಬ್ಬರ ಪ್ರದರ್ಶನ ಅಷ್ಟೇನೂ ಸುಧಾರಣೆ ಇಲ್ಲದ ಕಾರಣ ಫೈನಲ್​ ಮ್ಯಾಚ್ ಅನ್ನು ಕೈಚೆಲ್ಲಿದ್ದಾರೆ. ಇದರಿಂದ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ಐತಿಹಾಸಿಕ ಸಾಧನೆ ಮಾಡುವ ಹೊಸ್ತಿಲಿನಲ್ಲಿದ್ದ ರೋಹನ್​ ಜೋಡಿ ಫೈನಲ್​ನಲ್ಲಿ ಸೋತಿರುವುದಕ್ಕೆ ಅಭಿಮಾನಿಗಳು ಸಾಕಷ್ಟು ನಿರಾಸೆಗೊಂಡಿದ್ದಾರೆ. ಇನ್ನು ಅಮೆರಿಕದ ರಾಮ್ ಮತ್ತು ಲಂಡನ್​ ಜೋ ಅವರು ಇದೇ ಮೊದಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಯುಎಸ್ ಓಪನ್ ಗೆದ್ದ ಅಮೆರಿಕದ ರಾಜೀವ್​ ರಾಮ್ ಮತ್ತು ಲಂಡನ್​ ಜೋ ಸಾಲಿಸ್ಬರಿ

43 ವರ್ಷದ ರೋಹನ್​ ಬೋಪಣ್ಣ ಅವರು ಯುಎಸ್​ ಓಪನ್ ಆಡುತ್ತಿರುವ ಅತ್ಯಂತ ಹಿರಿಯ ಆಟಗಾರ ಎಂದು ಖ್ಯಾತಿ ಪಡೆದಿದ್ದರು. 2ನೇ ಬಾರಿಗೆ ಪುರುಷರ ಡಬಲ್ಸ್​ನಲ್ಲಿ ಬೋಪಣ್ಣ ಅವರು ಫೈನಲ್​ಗೆ ಬಂದಿದ್ದರು. ಹೀಗಾಗಿ ಫೈನಲ್​ನಲ್ಲಿ ಎದುರಾಳಿಗಳನ್ನು ಸೋಲಿಸಿ ಕಪ್ ಗೆದ್ದೇ ಗೆಲ್ಲುತ್ತಾರೆ ಎಂದು ಫ್ಯಾನ್ಸ್​ ಭಾರೀ ನೀರಿಕ್ಷೆಯಲ್ಲಿದ್ದರು. ಆದ್ರೆ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಬೋಪಣ್ಣ ಜೋಡಿ ಭಾರೀ ನಿರಾಸೆ ಮಾಡಿದೆ. ಇನ್ನು 2010ರಲ್ಲಿ ಫೈನಲ್​ ಪುರುಷರ ಡಬಲ್ಸ್​ನಲ್ಲಿ ಬೋಪಣ್ಣ ಹಾಗೂ ಪಾಕ್​ನ ಐಸಾಮ್-ಉಲ್-ಹಕ್ ಸೋತಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

US Open Tennis: ಫೈನಲ್​ ಮ್ಯಾಚ್​ ಕೈಚೆಲ್ಲಿದ ರೋಹನ್​ ಬೋಪಣ್ಣ ಜೋಡಿ.. ಏನಾಯಿತು?

https://newsfirstlive.com/wp-content/uploads/2023/09/US_Open_Rohan_Bopanna.jpg

Load More