ಗರ್ಲ್ ಫ್ರೆಂಡ್ ಕೊಂದು ಜೈಲು ಸೇರಿದ್ದ ಭಯಾನಕ ಕೊಲೆಗಾರ
ಅತ್ಯಾಧುನಿಕ ತಂತ್ರಜ್ಞಾನದ ತನಿಖಾ ಸಂಸ್ಥೆ ಅಮೆರಿಕಾದ FBI
ಒಬ್ಬ ಕೊಲೆಗಾರನ ಹಿಡಿಯಲು 2 ವಾರ ಪರದಾಡಿದ ಪೊಲೀಸರು
ಫಿಲಡೆಲ್ಫಿಯಾ: ತನ್ನ ಗರ್ಲ್ ಫ್ರೆಂಡ್ ಅನ್ನೇ ಕೊಲೆ ಮಾಡಿ ಜೈಲು ಸೇರಿದ್ದ ಕೈದಿಯೊಬ್ಬ ಅಮೆರಿಕಾ ಪೊಲೀಸರ ಜೊತೆ ಜೂಟಾಟ ಆಟವಾಡಿದ್ದಾನೆ. ಜೈಲಿನಿಂದ ಪರಾರಿಯಾದ ಈ ಕೊಲೆಗಾರ 2 ವಾರ ಇಡೀ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಕೊನೆಗೆ ಈ ಕಿಲಾಡಿ ಖದೀಮನನ್ನ ಅರೆಸ್ಟ್ ಮಾಡಲು ಪೊಲೀಸರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿಶ್ವದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರೋ ತನಿಖಾ ಸಂಸ್ಥೆ FBIನಿಂದ ಹಿಡಿದು ಅಮೆರಿಕಾ ಪೊಲೀಸರು ಒಬ್ಬ ಕೊಲೆಗಾರನಿಗಾಗಿ ಇಷ್ಟು ಪರದಾಡಿರೋದು ಎಲ್ಲೆಡೆ ಬಹಳಷ್ಟು ಚರ್ಚೆಗೆ ಗುರಿಯಾಗಿದೆ.
ಇದನ್ನೂ ಓದಿ: VIDEO: ಭಾರತೀಯ ವಿದ್ಯಾರ್ಥಿನಿ ಜೀವಕ್ಕೆ ಬೆಲೆಯೇ ಇಲ್ಲ.. ಹತ್ಯೆ ಮಾಡಿದ ಅಮೆರಿಕ ಪೊಲೀಸರ ಮಾತು ವೈರಲ್
ಬ್ರೆಜಿಲಿಯನ್ ಮೂಲದ ಡೇನೆಲೊ ಕ್ಯಾವಲ್‌ಕಾಂಟೆ ಎಂಬಾತನೇ ಅಮೆರಿಕಾ ಪೊಲೀಸರನ್ನು ಕಾಡಿದ ಕಿಲಾಡಿ ಖದೀಮ. ಈತ ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ತನ್ನ ಗರ್ಲ್ ಫ್ರೆಂಡ್ ಅನ್ನು ಕೊಲೆ ಮಾಡಿದ್ದ. ಈತನಿಗೆ ಜೈಲು ಶಿಕ್ಷೆಯಾಗಿದ್ದು ಜೈಲಿನಿಂದಲೂ ಪರಾರಿಯಾಗಿದ್ದಾನೆ. ಡೇನೆಲೊ ಕ್ಯಾವಲ್‌ಕಾಂಟೆ ಜೈಲಿನಿಂದ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಸುಳಿವು ಹಿಡಿದು ಪೊಲೀಸರು ಈತನ ಹಿಂದೆ ಬಿದ್ದಿದ್ದಾರೆ. ಆದ್ರೆ ಒಂದು, ಎರಡು ದಿನವಲ್ಲ ಇವನನ್ನ ಸೆರೆ ಹಿಡಿಯಲು 2 ವಾರಗಳೇ ಬೇಕಾಗಿದೆ.
ಜೈಲಿನಿಂದ ಪರಾರಿಯಾದ ಕೈದಿಯನ್ನು ಹಿಡಿಯಲು ಅಮೆರಿಕಾ ಪೊಲೀಸರು ಅತ್ಯಾಧುನಿಕ ಡ್ರೋನ್, ಹೆಲಿಕಾಪ್ಟರ್ ಬಳಸಿ ಹುಡುಕಾಟ ನಡೆಸಿದ್ದಾರೆ. ಅಮೆರಿಕಾದ ತನಿಖಾ ಸಂಸ್ಥೆ ಎಫ್‌ಬಿಐ ನಿಂದ ಹಿಡಿದು ಇಡೀ ಪೊಲೀಸ್ ಪಡೆ ಇದರ ಕಾರ್ಯಾಚರಣೆಗೆ ಇಳಿದಿದೆ. ಈ ಕೊಲೆಗಾರನ ಸುಳಿವು ನೀಡಿದವರಿಗೆ 20 ರಿಂದ 25 ಸಾವಿರ ಡಾಲರ್ ಬಹುಮಾನವನ್ನು ಘೋಷಣೆ ಮಾಡಲಾಗಿತ್ತು. ಇಷ್ಟಾದರೂ ಕೊಲೆಗಾರ ಡೇನೆಲೊ ಕ್ಯಾವಲ್‌ಕಾಂಟೆ ಯಾರ ಕೈಗೂ ಸಿಗದೇ ಎರಡು ವಾರಗಳ ಕಾಲ ತಲೆಮರೆಸಿಕೊಂಡಿದ್ದ ಅನ್ನೋದು ಅಚ್ಚರಿಯ ಸಂಗತಿ.
ಡ್ರೋನ್‌ನಲ್ಲಿ ಹುಡುಕಿದ್ರೂ ಈತನ ಸುಳಿವೇ ಸಿಕ್ಕಿಲ್ಲ. ಹೆಲಿಕಾಪ್ಟರ್‌ನಲ್ಲಿ ತಡಕಾಡಿದ್ರೂ ಈ ಕೊಲೆಗಾರ ಅಮೆರಿಕ ಪೊಲೀಸರಿಗೆ ಪತ್ತೆಯೇ ಆಗಿರಲಿಲ್ಲ. ಕೊನೆಗೆ ಪೊಲೀಸ್ ಶ್ವಾನದ ಸಹಾಯದಿಂದ ಕೊಲೆಗಾರನನ್ನು ಬಂಧಿಸುವಲ್ಲಿ ಪೆನ್ಸಿಲ್ವೇನಿಯಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪೆನ್ಸಿಲ್ವೇನಿಯಾದ ಗ್ರಾಮೀಣಾ ಭಾಗದಲ್ಲಿ ಕೊಲೆಗಾರ ಡೇನಿಲೋ ಕವಲಕಂಟೆಯನ್ನು ಕೊನೆಗೂ ಬಂಧಿಸಲಾಗಿದೆ. 2 ವಾರ ಇಡೀ ಪೊಲೀಸರಿಗೆ ತಲೆನೋವಾಗಿದ್ದ ಕಿಲ್ಲರ್‌ನನ್ನು ಬಂಧಿಸಿರುವ ಪೊಲೀಸರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ