newsfirstkannada.com

ದೆಹಲಿಗೆ ಆಗಮಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್; ಭದ್ರತಾ ಕೋಟೆಯಲ್ಲಿ G-20ಗೆ ಭರ್ಜರಿ ಸ್ವಾಗತ

Share :

08-09-2023

    ಪ್ರಧಾನಿ ಮೋದಿ-ಬೈಡನ್​ ನಡುವೆ ಭಾರತ-ಯುಎಸ್​ ದ್ವಿಪಕ್ಷೀಯ ಚರ್ಚೆ

    ನಾಳೆ ದೆಹಲಿಯಲ್ಲಿ G-20 ಶೃಂಗಸಭೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ

    ಅಮೆರಿಕದಿಂದ ನೇರ ದೆಹಲಿಯ ಪಾಲಂ ಏರ್​ಪೋರ್ಟ್​ಗೆ ಆಗಮನ​

ನವದೆಹಲಿ: ನಾಳೆ G-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇದೀಗ ದೆಹಲಿಯಲ್ಲಿನ ಪಾಲಂ ಇಂಟರ್​ನ್ಯಾಷನಲ್ ಏರ್​ಪೋರ್ಟ್​ಗೆ ಯುಎಸ್​ನಿಂದ ವಿಶೇಷ ವಿಮಾನದ ಮೂಲಕ ಆಗಮಿಸಿದ್ದಾರೆ.​

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ವಿಮಾನದಿಂದ ಇಳಿಯುತ್ತಿದ್ದಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ ವಿ.ಕೆ ಸಿಂಗ್ ಅವರು ಸ್ವಾಗತ ಕೋರಿದರು. ಬಳಿಕ ಅಲ್ಲೇ ಆಯೋಜನೆ ಮಾಡಲಾಗಿದ್ದ ಭಾರತೀಯ ನೃತ್ಯವನ್ನು ಕಣ್ಣು ತಿಂಬಿಕೊಂಡರು. ಈ ನೃತ್ಯದ ಬಗ್ಗೆ ಸಚಿವ ವಿ.ಕೆ ಸಿಂಗ್ ಅವರು ಬೈಡನ್​ಗೆ ಮಾಹಿತಿ ನೀಡಿದರು.

ಬಳಿಕ ಪಾಲ್ಂ ವಿಮಾನ ನಿಲ್ದಾಣದಿಂದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ನೇರವಾಗಿ ಪ್ರಧಾನಿ ಮೋದಿ ನಿವಾಸಕ್ಕೆ ತೆರಳಿದರು. ಈ ವೇಳೆ ಅಮೆರಿಕ ಅಧ್ಯಕ್ಷರಿಗೆ ಸ್ಪೆಷಲ್ ಆಗಿ ಮೂರು ಸುತ್ತಿನ ಭದ್ರತೆಯನ್ನು ನೀಡಲಾಗಿತ್ತು. ಇದು ನೋಡಗರ ಗಮನ ಸೆಳೆಯಿತು. ಈಗಾಗಲೇ G-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ಅನೇಕ ಗಣ್ಯರು ದೆಹಲಿಗೆ ಆಗಮಸಿದ್ದು ನಾಳೆ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿಗೆ ಆಗಮಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್; ಭದ್ರತಾ ಕೋಟೆಯಲ್ಲಿ G-20ಗೆ ಭರ್ಜರಿ ಸ್ವಾಗತ

https://newsfirstlive.com/wp-content/uploads/2023/09/JEO_BIDEN.jpg

Load More