newsfirstkannada.com

ಪ್ರಧಾನಿ ಮೋದಿಗೆ ವಿಶೇಷ ಟಿ-ಶರ್ಟ್​ ಗಿಫ್ಟ್​ ಕೊಟ್ಟ ಅಮೆರಿಕ ಅಧ್ಯಕ್ಷ -ಅದರಲ್ಲಿ ಏನೆಂದು ಬರೆದಿದೆ ಗೊತ್ತಾ..?

Share :

24-06-2023

    ಟಿ-ಶರ್ಟ್​​ನಲ್ಲಿ ಮೋದಿ ‘AI’ ಕೋಟ್ ಉಲ್ಲೇಖ

    ಪ್ರಧಾನಿ ಮೋದಿ ಪ್ರಕಾರ AI ಎಂದರೇನು ಗೊತ್ತಾ?

    US ಪ್ರವಾಸ ಬೆನ್ನಲ್ಲೇ ಮತ್ತೆಲ್ಲಿಗೆ ಹೋಗ್ತಿದ್ದಾರೆ ಮೋದಿ?

ಪ್ರಧಾನಿ ಮೋದಿ ಅವರ ಅಮೆರಿಕ ಪ್ರವಾಸ ಮುಕ್ತಾಯವಾಗಿದ್ದು ಈಜಿಪ್ಟ್​ನತ್ತ ಪ್ರಯಾಣ ಬೆಳೆಸಿದ್ದಾರೆ. ಅಮೆರಿಕ ಪ್ರವಾಸದ ವೇಳೆ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಜೊತೆಗೆ ಯುಎಸ್ ಅಧ್ಯಕ್ಷ ಜೋ ಬೈಡನ್ ಶ್ವೇತಭವನದಲ್ಲಿ ‘ಸ್ಟೇಟ್ ಡಿನ್ನರ್’ ಆಯೋಜನೆ ಮಾಡಿದ್ದು ವಿಶೇಷವಾಗಿತ್ತು. ಇನ್ನು ಕೊನೆಯ ದಿನ ಬೈಡನ್ ಮೋದಿಗೆ ಸ್ಪೆಷಲ್ ಗಿಫ್ಟ್​ ಒಂದನ್ನು ನೀಡಿದರು.

ಮೋದಿ ಮತ್ತು ಜೋ ಬೈಡನ್ ಅಮೆರಿಕ ಮತ್ತು ಭಾರತೀಯ ಸಿಇಓಗಳ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ಬೈಡನ್ ಅವರು ಮೋದಿಗೆ AI ಎಂದು ಬರೆಯಲಾಗಿರುವ ವಿಶೇಷ ಟೀ ಶರ್ಟ್ ಅನ್ನು ಉಡುಗೊರೆಯಾಗಿ ನೀಡಿದರು. ಟಿ-ಶರ್ಟ್​ ಮೇಲೆ ‘ದಿ ಫ್ಯೂಚರ್ ಈಸ್ ಅಮೆರಿಕ ಌಂಡ್ ಇಂಡಿಯಾ’ ಎಂದು ಬರೆಯಲಾಗಿದೆ.

ಮೋದಿ ಅವರು ಮೊನ್ನೆ ವೈಟ್​ಹೌಸ್​ನಲ್ಲಿ US ಕಾಂಗ್ರೆಸ್​ ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಮೋದಿ ‘AI’ ಎಂಬ ಹೊಸ ಹೆಸರನ್ನು ಪ್ರಸ್ತಾಪಿಸಿದ್ದರು. AI ಅಂದರೆ ಕೇವಲ ಕೃತಕ ಬುದ್ಧಿಮತ್ತೆ ಮಾತ್ರವಲ್ಲ (Artificial intelligence), ಬೆಳೆಯುತ್ತಿರುವ ಭಾರತ-ಯುಎಸ್ ಸಂಬಂಧವನ್ನೂ ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದ್ದರು.

ಎರಡನೇ ಬಾರಿಗೆ ಮೋದಿ ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದರು. ನಾನು ಇಲ್ಲಿಗೆ ಬಂದ ನಂತರ ಬಹಳಷ್ಟು ಬದಲಾಗಿದೆ. ಆದರೆ, ಒಂದು ವಿಷಯ ಮಾತ್ರ ಯಾವತ್ತೂ ಬದಲಾಗಲ್ಲ. ಅದು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸ್ನೇಹ ಮತ್ತು ಬದ್ಧತೆ. ಕೆಲವು ವರ್ಷಗಳಲ್ಲಿ AI- ಕೃತಕ ಬುದ್ಧಿಮತ್ತೆಯಲ್ಲಿ ಸಾಕಷ್ಟು ಪ್ರಗತಿಗಳಾಗಿವೆ. ಮತ್ತೊಂದು AI ಅಂದರೆ ಅದು ಅಮೆರಿಕ-ಭಾರತ ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿಗೆ ವಿಶೇಷ ಟಿ-ಶರ್ಟ್​ ಗಿಫ್ಟ್​ ಕೊಟ್ಟ ಅಮೆರಿಕ ಅಧ್ಯಕ್ಷ -ಅದರಲ್ಲಿ ಏನೆಂದು ಬರೆದಿದೆ ಗೊತ್ತಾ..?

https://newsfirstlive.com/wp-content/uploads/2023/06/MODI_BIDEN.jpg

Load More