newsfirstkannada.com

Video: ಎಡವಿ ನೆಲಕ್ಕೆ ಬಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​

Share :

02-06-2023

    ಜೋ ಬೈಡನ್​ ನೆಲಕ್ಕೆ ಬಿದ್ದ ದೃಶ್ಯ ವೈರಲ್​

    ಎಡವಿದ ಅಮೆರಿಕ ಅಧ್ಯಕ್ಷ ಜೋ ಬೈಡನ್​

    ಜೋ ಬೈಡನ್​ ಬೀಳೋದು ಇದೇ ಮೊದಲಲ್ಲ

ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೊಲೊರಾಡೋದ ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ನಡೆದ ಪದವಿ ಸಮಾರಂಭದಲ್ಲಿ ಕಾಲು ಜಾರಿ ನೆಲಕ್ಕೆ ಮುಗ್ಗರಿಸಿ ಬಿದ್ದಿದ್ದಾರೆ. ಇನ್ನೂ ಕೆಳಗೆ ಬಿದ್ದ ಬೈಡೆನ್​ ಅನ್ನು ಅಲ್ಲೇ ಇದ್ದವರು ಕೂಡಲೇ ಮೇಲೆತ್ತಿದ್ದು, ನಗುತ್ತಲೇ ಜೋ ಬೈಡನ್ ಮರಳಿ ತಮ್ಮ ಆಸನಕ್ಕೆ ಹೋಗಿ ಕುಳಿತಿದ್ದಾರೆ.

ಈ ಹಿಂದೆ ಜೋ ಬೈಡೆನ್ ತಮ್ಮ ಮುದ್ದಿನ ನಾಯಿ ಜೊತೆ ಆಟವಾಡುವಾಗಲೂ ಜಾರಿ ಬಿದ್ದು, ಕಾಲಿಗೆ ಫ್ರಾಕ್ಚರ್ ಆಗಿತ್ತು. ಅಂದಹಾಗೆಯೇ 80 ವರ್ಷದ ಜೋ ಬೈಡನ್​ ನೆಲಕ್ಕೆ ಬಿದ್ದಿರುವ ದೃಶ್ಯ ಕ್ಯಾಮೆರಾದಲ್ಲಿ ಚೆನ್ನಾಗಿ ಸೆರೆಯಾಗಿದೆ.

ಈ ಘಟನೆಯ ಬಳಿಕ ಶ್ವೇತಭವನಕ್ಕೆ ಜೋ ಬೈಡೆನ್​ ತೆರಳಿದರು. ಅಲ್ಲಿಂದ ನಂತರ ಹೆಲಿಕಾಪ್ಟರ್​ ಮೂಲಕ ತೆರಳುವ ಸಮಯದಲ್ಲಿ ತಮ್ಮ ತಲೆಯನ್ನು ಅದರ  ಡೋರ್​ಗೆ ಹೊಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ನಿನ್ನೆ ಜೋ ಬೈಡೆನ್​ಗೆ ಕೆಟ್ಟ ದಿನವಾಗಿರೋದು ಮಾತ್ರ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಎಡವಿ ನೆಲಕ್ಕೆ ಬಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​

https://newsfirstlive.com/wp-content/uploads/2023/06/Joe-biden.jpg

Load More