newsfirstkannada.com

Watch: ಪ್ರಧಾನಿ ಮೋದಿಯ ಕಾಲು ಮುಟ್ಟಿ ನಮಸ್ಕರಿಸಿದ ಅಮೆರಿಕನ್ ಸ್ಟಾರ್ ಸಿಂಗರ್​

Share :

24-06-2023

    ಯುಎಸ್​ನ ರೊನಾಲ್ಡ್ ರೇಗನ್ ಕಟ್ಟಡದಲ್ಲಿ ನಡೆದ ಕಾರ್ಯಕ್ರಮ

    ರಾಷ್ಟ್ರಗೀತೆ ಮುಗಿದ ತಕ್ಷಣ ಪ್ರಧಾನಿಗೆ ನಮಸ್ಕಾರ ಮಾಡಿದ ಸಿಂಗರ್..!

    ಸಿಂಗರ್​ಗೆ ಜನಗಣ ಮನ, ಓಂ ಜೈ ಜಗದೀಶ್ ಹರೇ ಸಾಂಗ್ಸ್​​ ಇಷ್ಟ

ವಾಷಿಂಗ್ಟನ್​ ಡಿ.ಸಿ: ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಗೀತೆ ಜನಗಣ ಮನವನ್ನು ಹಾಡಿದ ಬಳಿಕ ಯುಎಸ್​ನ ಸ್ಟಾರ್ ಸಿಂಗರ್​ ಮೇರಿ ಮಿಲ್ಬೆನ್ ಅವರು ಪ್ರಧಾನಿ ಮೋದಿಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು.

ವಾಷಿಂಗಟನ್​ ಡಿ.ಸಿ ಬಳಿಯ ರೊನಾಲ್ಡ್ ರೇಗನ್ ಬಿಲ್ಡಿಂಗ್​ನಲ್ಲಿ ನಡೆದ ಕಾರ್ಯಕ್ರಮಕ್ಕೆ ಯುನೈಟೆಡ್ ಸ್ಟೇಟ್ಸ್ ಇಂಡಿಯನ್ ಕಮ್ಯುನಿಟಿ ಫೌಂಡೇಶನ್​ (USICF)ನ ಸದಸ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇದೇ ವೇಳೆ ಯುಎಸ್​ನ ಸ್ಟಾರ್​ ಸಿಂಗರ್ ಮೇರಿ ಮಿಲ್ಬೆನ್ ಅವರಿಗೂ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಗೀತೆ ಜನಗಣ ಮನವನ್ನು ಮೇರಿ ಮಿಲ್ಬೆನ್ ಹಾಡಿದರು. ಹಾಡು ಮುಗಿಯುತ್ತಿದ್ದಂತೆ ಪ್ರಧಾನಿ ಬಳಿಗೆ ಬಂದ ಸಿಂಗರ್ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದರು. ಈ ವೇಳೆ ಪ್ರಧಾನಿ ಬೇಡ.. ಬೇಡ ಎನ್ನುವಂತೆ ತಡೆದರು ಸಿಂಗರ್ ನಮಸ್ಕಾರ ಮಾಡಿ ತೆರಳಿದರು.

ಇನ್ನು ಮೇರಿ ಮಿಲ್ಬೆನ್ ಅವರು ರಾಷ್ಟ್ರೀಯ ಗೀತೆ ಜನಗಣ ಮನ ಮತ್ತು ಓಂ ಜೈ ಜಗದೀಶ್ ಹರೇ ಎನ್ನುವ ಸಾಂಗ್ ಹಾಡುವುದರ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಬಳಿಕ ಮಾತನಾಡಿದ ಮಿಲ್ಬೆನ್​, ನಾನು ಭಾರತದ ರಾಷ್ಟ್ರಗೀತೆಯನ್ನು ಹಾಡುವುದಕ್ಕೆ ತುಂಬಾ ಉತ್ಸುಕಳಾಗಿದ್ದೆ. ನನ್ನನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಜೂನ್​ 21 ರಂದು ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಮೋದಿಯವರ ಜೊತೆ ಸಿಂಗರ್ ಮೇರಿ ಮಿಲ್ಬೆನ್ ಕೂಡ ಭಾಗವಹಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಪ್ರಧಾನಿ ಮೋದಿಯ ಕಾಲು ಮುಟ್ಟಿ ನಮಸ್ಕರಿಸಿದ ಅಮೆರಿಕನ್ ಸ್ಟಾರ್ ಸಿಂಗರ್​

https://newsfirstlive.com/wp-content/uploads/2023/06/MODI_SINGER.jpg

Load More