newsfirstkannada.com

ಜಸ್ಟ್ 300 ರೂ. ಆಭರಣ ಬರೋಬ್ಬರಿ 6 ಕೋಟಿಗೆ ಮಾರಾಟ; ಈ ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ!

Share :

Published June 12, 2024 at 9:59pm

Update June 12, 2024 at 11:17pm

  ಅಮೆರಿಕಾ ಮೂಲದ ಮಹಿಳೆ ಭಾರತದಲ್ಲಿ ಹೇಗೆ ವಂಚನೆಗೆ ಒಳಗಾದಳು ಗೊತ್ತಾ?

  ಅಂಗಡಿಯೊಂದರಲ್ಲಿ 6 ಕೋಟಿ ರೂಪಾಯಿ ಕೊಟ್ಟು ಚಿನ್ನದ ಆಭರಣ ಖರೀದಿ

  ಚಿನ್ನದ ಅಂಗಡಿ ಮಾಲೀಕ ರಾಜೇಂದ್ರ ಮತ್ತು ಮಗ ಗೌರವ್ ಸೋನಿ ಮಾಡಿದ್ದೇನು?

ಜೈಪುರ​: ಎಲ್ಲಿವರೆಗೂ ಮೋಸ ಹೋಗೋರು ಇರ್ತಾರೋ ಅಲ್ಲಿವರೆಗೂ ಮೋಸ ಮಾಡೋರು ಇರ್ತಾರೆ. ಈ​ ಬಗ್ಗೆ ಗೊತ್ತಿದ್ದರು ಕೂಡ ಜನ ಮೋಸ ಹೋಗುವುದು ಮಾತ್ರ ಕಮ್ಮಿ ಆಗ್ತಾನೆ ಇಲ್ಲ. ಅದೇ ರೀತಿ ಇಲ್ಲಿ ಜಸ್ಟ್​​ 300 ರೂಪಾಯಿಗೆ ಬೆಲೆ ಬಾಳುವ ಸರವನ್ನು ಬರೋಬ್ಬರಿ 6 ಕೋಟಿ ರೂಪಾಯಿಗೆ ಮಾರಾಟ ಮಾಡಿ ಮಹಿಳೆಗೆ ವಂಚನೆ ಮಾಡಲಾಗಿದೆ. ಆದರೆ ಈ ವಂಚನೆ ಹಿಂದೆ ಅಪ್ಪ-ಮಗ ಮಾಡಿರೋ ಖತರ್ನಾಕ್​ ಪ್ಲಾನ್​​ ರಿವೀಲ್ ಆಗಿದೆ.

ಇದನ್ನೂ ಓದಿ: ‘ಭಂಡ ಧೈರ್ಯ ಇರೋನಿಗೆ ಕಾಲ ಇಲ್ಲ’- ನಟ ದರ್ಶನ್​​​ ಬಗ್ಗೆ ಉಮಾಪತಿ ಗೌಡ ಆಡಿದ್ದ ಮಾತು ವೈರಲ್​​!

ಹಣ ಅಂದ್ರೆ ಹೆಣನು ಬಾಯಿ ಬಿಡುತ್ತೆ ಅಂತಾರೆ. ಅದೇ ರೀತಿ ಚಿನ್ನ, ಒಡವೆ ಅಂದ್ರೆ ಹೆಣ್ಮಕ್ಳು ಜೀವಾನೇ ಬಿಡ್ತಾರೆ. ಮನೆಯಲ್ಲಿ ಅದೇಷ್ಟೇ ಒಡವೆಗಳಿದ್ರೂ, ಅದರಲ್ಲೂ ನೋಡಿದ ಒಡವೆ ಇಷ್ಟವಾದರೆ ಎಷ್ಟೇ ಕಷ್ಟ ಆದ್ರೂ ಹಣ ಕೂಡಿಟ್ಟು ಅದನ್ನ ಖರೀದಿ ಮಾಡ್ತಾರೆ. ಅದೇ ರೀತಿ ಮಹಿಳೆಯೊಬ್ಬರು ತಮಗಿಷ್ಟವಾದ ಒಡವೆಯನ್ನ ಚಿನ್ನದ ಅಂಗಡಿಯೊಂದರಲ್ಲಿ ಬರೋಬ್ಬರಿ 6 ಕೋಟಿ ಹಣ ಕೊಟ್ಟು ಖರೀದಿ​ ಮಾಡಿರುತ್ತಾರೆ. ಬಳಿಕ ತಾನೂ ಖರೀದಿಸಿದ ಒಡವೆ ಅಸಲಿ ಅಲ್ಲ, ಬದಲಾಗಿ ಅದು ನಕಲಿ ಅಂತ ಗೊತ್ತಾಗಿದೆ. ಹೀಗೆ ವಂಚನೆಗೊಳಗಾಗಿರೋ ಅಮೆರಿಕಾದ ಮೂಲದ ಚೆರಿಶ್ ಎಂಬ ಮಹಿಳೆ ಜೈಪುರದಲ್ಲಿ ಚೆರಿಶ್ ಗೋಪಾಲ್‌ಜೀ ರಸ್ತೆಯ ರಾಮ ರೋಡಿಯಂ ಅಂಗಡಿಗೆ ಹೋಗಿದ್ದರು. ಈ ವೇಳೆ ಅವರಿಗೆ ಅಂಗಡಿಯವರು ಹಾಲ್‌ಮಾರ್ಕ್ ಒಡವೆ ಅಂತ ನಂಬಿಸಿ ಆಕೆ ಇಷ್ಟ ಪಟ್ಟಿದ್ದ ಪೆಂಡೆಂಟ್​ ಹಾಗೂ ಚೈನ್​ ಕೊಟ್ಟಿದ್ರು. ಇದಕ್ಕೆ ಸರ್ಟಿಫಿಕೇಟ್​ ಕೂಡ ಕೊಟ್ಟಿದ್ರಂತೆ.

ಆದ್ರೆ ಅದು ಅಸಲಿಗೆ ನಕಲಿಯಾಗಿರುತ್ತೆ. ಬೆಳ್ಳಿ ಚೈನ್​ಗೆ ಚಿನ್ನದ ಪಾಲಿಶ್​ ಹಾಕಿ ಮೋಸ ಮಾಡಿದ್ದಾರೆ. ಭಾರತದಲ್ಲಿ ಖರೀದಿ​ ಮಾಡಿದ್ದ ಚೈನ್​​​ ಅನ್ನ ಚೆರಿಶ್​ ಅಮೆರಿಕಾದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ವೇಳೆ ತಾನೂ ಖರೀದಿಸಿದ ಚೈನ್ ನಕಲಿ ಅನ್ನೋದು ಗೊತ್ತಾಗಿದೆ. ಯಾವಾಗ ಗೋಲ್ಡ್‌ ಚೈನ್ ಫೇಕ್​ ಅನ್ನೋದು ಗೊತ್ತಾಯ್ತೋ ಆಗ ಮಹಿಳೆ ಚೆರಿಶ್​ ಅಂಗಡಿ ಮಾಲೀಕ ರಾಜೇಂದ್ರ ಮತ್ತು ಮಗ ಗೌರವ್ ಸೋನಿ ವಿರುದ್ಧ ಅಮೆರಿಕ ರಾಯಭಾರ ಕಚೇರಿಗೆ ದೂರು ನೀಡಿದ್ದಾರೆ. ಸದ್ಯ ಅಂಗಡಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಸ್ಟ್ 300 ರೂ. ಆಭರಣ ಬರೋಬ್ಬರಿ 6 ಕೋಟಿಗೆ ಮಾರಾಟ; ಈ ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/06/fake-gold.jpg

Load More