ಸಮೀಪದ ಲೋಕಲ್ ಮಾರ್ಕೆಟ್ನಲ್ಲಿ ಖರೀದಿ ಮಾಡಿದ್ದ ಮೀನುಗಳು
ಮನೆಯಲ್ಲಿ ರುಚಿಕರವಾಗಿ ಅಡುಗೆ ಮಾಡಿ ತಿಂದಿದ್ದ ಮಹಿಳೆ ಕೋಮಾಗೆ
ಮೀನು ತಿಂದ ಮೇಲೆ ಮಹಿಳೆಯ ಕೈ, ಕಾಲು, ತುಟಿ ಕಲರ್ ಎಲ್ಲ ಕಪ್ಪು
ಮೀನುಗಳನ್ನು ಹಿಡಿದು ತಿನ್ನುವುದು ಎಂದರೆ ಒಂದು ರೀತಿ ಸಖತ್ ಇಂಟ್ರೆಸ್ಟಿಂಗ್ ಕೆಲಸ. ಕೆಲವರು ಮೀನುಗಳನ್ನು ಹಿಡಿದು ತಿಂದರೆ ಇನ್ನು ಕೆಲವರು ಮಾರ್ಕೆಟ್ನಲ್ಲಿ ಖರೀದಿ ಮಾಡಿ ಮನೆಯಲ್ಲಿ ಅಡುಗೆ ಮಾಡಿಕೊಂಡು ತಿನ್ನುತ್ತಾರೆ. ಈಗ ಮೀನಿನ ವಿಷ್ಯ ಏಕೆಂದರೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಬರು ಮೀನು ತಿಂದು ತಿಂಗಳಿಂದ ಕೋಮಾದಲ್ಲಿದ್ದು ಇದೀಗ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ.
ಲಾರಾ ಬರಜಾಸ್ (40) ಮೀನು ತಿಂದು ಕೋಮಾಗೆ ಹೋಗಿರುವ ಮಹಿಳೆ. ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಲಾರಾ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ಬಳಿಯ ಲೋಕಲ್ ಮಾರ್ಕೆಟ್ಗೆ ಹೋಗಿ ಟಿಲಾಪಿಯಾ (tilapia fish) ಎನ್ನುವ ಮೀನುಗಳನ್ನು ಖರೀದಿ ಮಾಡಿ ಮನೆಗೆ ತಂದು ಬಳಿಕ ತಮಗಿಷ್ಟವಾದ ರುಚಿಕರವಾಗಿ ಅಡುಗೆ ಮಾಡಿಕೊಂಡು ತಿಂದಿದ್ದಾರೆ. ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಗೆ ದಾಖಲಾದ ಲಾರಾ ಸದ್ಯ ಕಿಡ್ನಿ ಸೇರಿದಂತೆ ದೇಹದ 4 ಅಂಗಗಳನ್ನು ಕಳೆದುಕೊಂಡಿದ್ದಾರೆ. ಅಡುಗೆ ಮಾಡುವಾಗ ಲಾರ ಅವರು ಮೀನನ್ನು ಕಡಿಮೆ ಬೇಯಿಸಿದ್ದರಿಂದ ಬ್ಯಾಕ್ಟೀರಿಯಾದ ಸೋಂಕಿಗೆ ಒಳಗಾಗಿ ಅವರು ಕೋಮಾಗೆ ಹೋಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಬೆರಳುಗಳು, ಕಾಲುಗಳು ಮತ್ತು ಕೆಳ ತುಟಿ ಎಲ್ಲಾ ಕಪ್ಪು ಕಲರ್ ಆಗಿವೆ. ಸಂಪೂರ್ಣ ಅನಾರೋಗ್ಯದಿಂದ ಬಳಲುತ್ತಿದ್ದು ಕಿಡ್ನಿಗಳನ್ನು ಕೂಡ ಕಳೆದುಕೊಂಡಿದ್ದಾಳೆ. ಮೀನು ತಿಂದಿದ್ದರಿಂದ ಹೀಗಾಗಿದೆ ಎಂದು ಸ್ನೇಹಿತೆ ಮೆಸ್ಸಿಯಾನ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ