newsfirstkannada.com

ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ; ಮುಜುಗರಕ್ಕೀಡಾದ ಮೇಲೆ ಸಿಎಂ ನಿತೀಶ್ ಹೇಳಿದ್ದೇನು?

Share :

08-11-2023

    ಮಹಿಳೆಯರ ಶಿಕ್ಷಣ ಹಾಗೂ ಲೈಂಗಿಕತೆ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ

    ದೇಶಾದ್ಯಂತ ಮಹಿಳೆಯರಿಗೆ ಕ್ಷಮೆಯಾಚಿಸಬೇಕು ಎಂದ ಮಹಿಳಾ ಆಯೋಗ

    ನನ್ನ ಹೇಳಿಕೆಯಿಂದ ತಪ್ಪು ಸಂದೇಶ ರವಾನೆಯಾಗಿದೆ ಎಂದ ನಿತೀಶ್ ಕುಮಾರ್

ನವದೆಹಲಿ: ವಿಧಾನಸಭೆಯಲ್ಲಿ ಮಹಿಳೆಯರ ಶಿಕ್ಷಣ ಹಾಗೂ ಲೈಂಗಿಕತೆ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನೀಡಿರುವ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿದೆ. ದೇಶಾದ್ಯಂತ ಟೀಕೆ ಹಾಗೂ ವ್ಯಾಪಕ ಖಂಡನೆ ವ್ಯಕ್ತವಾದ ಮೇಲೆ ಸಿಎಂ ನಿತೀಶ್ ಕುಮಾರ್ ಅವರೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ನನ್ನ ಹೇಳಿಕೆಯಿಂದ ತಪ್ಪು ಸಂದೇಶ ರವಾನೆಯಾಗಿದ್ರೆ ಅದಕ್ಕೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ನಿನ್ನೆ ಬಿಹಾರ ವಿಧಾನಸಭೆಯಲ್ಲಿ ಮಾತನಾಡಿದ್ದ ಸಿಎಂ ನಿತೀಶ್ ಕುಮಾರ್ ಅವರು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ರು. ವಿದ್ಯಾವಂತ ಮಹಿಳೆ ಲೈಂಗಿಕ ಸಂಭೋಗದ ಸಮಯದಲ್ಲಿ ತನ್ನ ಪತಿಯನ್ನು ಹೇಗೆ ತಡೆಯಬಹುದು ಎಂಬ ಸ್ಪಷ್ಟ ವಿವರಣೆಯನ್ನು ತಮ್ಮದೇ ಶೈಲಿನಲ್ಲಿ ವಿವರಣೆ ಮಾಡಿದ್ದರು. ಸಿಎಂ ನಿತೀಶ್ ಕುಮಾರ್ ಅವರ ಪದ ಬಳಕೆಗೆ ಜನರ ವಿರೋಧ ವ್ಯಕ್ತವಾಗಿತ್ತು. ತೀವ್ರ ವಿರೋಧದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು ಕ್ಷಮೆ ಕೇಳಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗ ಖಂಡನೆ

ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿಕೆಯನ್ನ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಹೇಳಿಕೆಗಳು ಮಹಿಳೆಯರಿಗೆ ಹಿಂಜರಿಕೆ ಮಾತ್ರವಲ್ಲದೆ ಅವರ ಹಕ್ಕುಗಳು ಮತ್ತು ಆಯ್ಕೆಗಳಿಗೆ ಮುಜುಗರವನ್ನುಂಟು ಮಾಡಿದೆ. ಈ ಆಕ್ಷೇಪಾರ್ಹ ಹೇಳಿಕೆಗಳಿಗೆ ಬಿಹಾರದ ಸಿಎಂ ದೇಶಾದ್ಯಂತ ಮಹಿಳೆಯರಿಗೆ ಕ್ಷಮೆಯಾಚಿಸಬೇಕು ಎಂದು ಎನ್‌ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಅವರು ಒತ್ತಾಯಿಸಿದ್ದಾರೆ.

ಲೈಂಗಿಕ ಶಿಕ್ಷಣದ ಬಗ್ಗೆ ನಿತೀಶ್ ಹೇಳಿದ್ದೇನು?

ನಮ್ಮ ದೇಶದ ದಾಂಪತ್ಯದಲ್ಲಿ ಗಂಡನಿಂದ ಹೆಚ್ಚು ಜನಸಂಖ್ಯೆಗೆ ಕಾರಣವಾಯಿತು. ಆದರೆ, ಶಿಕ್ಷಣದೊಂದಿಗೆ, ಮಹಿಳೆಗೆ ಅವನನ್ನು ಹೇಗೆ ತಡೆಯುವುದು ಎಂದು ತಿಳಿದಿಕೊಂಡಿದ್ದಾರೆ. ಈ ಕಾರಣದಿಂದಾಗಿ ಜನಸಂಖ್ಯೆ ಕಡಿಮೆಯಾಗುತ್ತಿವೆ ಎಂದು ಸಿಎಂ ನಿತೀಶ್ ಕುಮಾರ್ ಅವರು ಹಳ್ಳಿಗಾಡಿನ ಶೈಲಿಯಲ್ಲಿ ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ; ಮುಜುಗರಕ್ಕೀಡಾದ ಮೇಲೆ ಸಿಎಂ ನಿತೀಶ್ ಹೇಳಿದ್ದೇನು?

https://newsfirstlive.com/wp-content/uploads/2023/10/BIHAR_CM_NITISH_KUMAR.jpg

Load More