newsfirstkannada.com

ಸ್ಪೀಕರ್ ಸ್ಥಾನಕ್ಕೆ U.T ಖಾದರ್ ಆಯ್ಕೆ; ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅಲ್ಪಸಂಖ್ಯಾತ ನಾಯಕನಿಗೆ ಅವಕಾಶ

Share :

23-05-2023

    ನನಗೆ ಬೇಡ, ನನಗೆ ಬೇಡ ಎಂದ ನಾಯಕರು

    CM ಸಿದ್ದರಾಮಯ್ಯ ನಿವಾಸದಲ್ಲಿ ಮಹತ್ವದ ಸಭೆ

    ಕೊನೆಗೂ ಯು.ಟಿ ಖಾದರ್ ಒಪ್ಪಿಸುವಲ್ಲಿ ಯಶಸ್ವಿ

ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ವಿಧಾನಸಭಾಧ್ಯಕ್ಷರ ಹುದ್ದೆಗೆ UT ಖಾದರ್ ಅವರನ್ನ ಆಯ್ಕೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಿನ್ನೆ ರಾತ್ರಿ ಈ ಸಂಬಂಧ ಕಾಂಗ್ರೆಸ್ ನಾಯಕರ ಸಭೆ ನಡೆದಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅಲ್ಪಸಂಖ್ಯಾತ ನಾಯಕನಿಗೆ ಸ್ಪೀಕರ್ ಸ್ಥಾನ ನೀಡಲು ಕೈ ನಾಯಕರು ತೀರ್ಮಾನ ಕೈಗೊಂಡಿದ್ದಾರೆ.

ನಿನ್ನೆಯಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಆರ್‌.ವಿ ದೇಶಪಾಂಡೆ ಅವರು ಹಂಗಾಮಿ ಸ್ಪೀಕರ್ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಹಂಗಾಮಿಯಾಗಿ ಅಧಿಕಾರ ಸ್ವೀಕರಿಸೋ ಮುನ್ನ ಈ ಹುದ್ದೆ ಬಹಳ ದೊಡ್ಡದು ನನಗೆ ಬೇಡ. ನನಗೆ ಸಚಿವ ಸ್ಥಾನ ನೀಡಬೇಕೆಂದು ಆರ್‌.ವಿ ದೇಶಪಾಂಡೆ ಅವರು ಒತ್ತಾಯ ಮಾಡಿದ್ದರು ಎನ್ನಲಾಗಿದೆ. ದೇಶಪಾಂಡೆ ಅವರು ಸ್ಪೀಕರ್ ಹುದ್ದೆಗೆ ಒಪ್ಪದ ಹಿನ್ನೆಲೆಯಲ್ಲಿ ಕೈ ನಾಯಕರು UT ಖಾದರ್ ಅವರ ಮನವೊಲಿಸೋ ಪ್ರಯತ್ನ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಿನ್ನೆ ಮಧ್ಯರಾತ್ರಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಿದರು. ಈ ಸಭೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಯು.ಟಿ ಖಾದರ್ ಅವರನ್ನೇ ಆಯ್ಕೆ ಮಾಡಲಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಅಲ್ಪಸಂಖ್ಯಾತರೊಬ್ಬರು ಸ್ಪೀಕರ್ ಸ್ಥಾನ ಅಲಂಕರಿಸಿದ ಕೀರ್ತಿ ಯು.ಟಿ ಖಾದರ್ ಅವರಿಗೆ ಸಿಗಲಿದೆ. ಇಂದು ಖಾದರ್ ಅವರು ವಿಧಾನಸಭಾಧ್ಯಕ್ಷರ ಹುದ್ದೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಪೀಕರ್ ಸ್ಥಾನಕ್ಕೆ U.T ಖಾದರ್ ಆಯ್ಕೆ; ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅಲ್ಪಸಂಖ್ಯಾತ ನಾಯಕನಿಗೆ ಅವಕಾಶ

https://newsfirstlive.com/wp-content/uploads/2023/05/U-T-Khader.jpg

Load More