newsfirstkannada.com

ಸೋನಿಯಾ ಗಾಂಧಿ ಡಿನ್ನರ್​ ಪಾರ್ಟಿಗೆ ಹೋಗಿ ತಪ್ಪು ಮಾಡಿದ್ರಾ ಸಭಾಧ್ಯಕ್ಷ ಖಾದರ್‌? ಏನಿದು ವಿವಾದ?

Share :

19-07-2023

  ಸೋನಿಯಾ ಡಿನ್ನರ್​ ಪಾರ್ಟಿಗೆ ಸ್ಪೀಕರ್ ಭಾಗಿ ಬಗ್ಗೆ ಚರ್ಚೆ

  ನಾನು ಮನುಷ್ಯನಲ್ಲವೇ ಅಂತ ಸ್ಪೀಕರ್ ಖಾದರ್ ಉತ್ತರ

  ಡಿನ್ನರ್​ ಪಾರ್ಟಿಗೆ ಹೋಗಿ ಶಿಷ್ಟಾಚಾರ ಮರೆತ ಸಭಾಧ್ಯಕ್ಷ..!

ಬೆಂಗಳೂರು: ಸೋಮವಾರ ಸಚಿವರಿಲ್ಲದೇ ಬಿಕೋ ಎಂದಿದ್ದ ಸದನಕ್ಕೆ ಮಂಗಳವಾರ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್​ ಶಾಸಕರೇ ಗೈರಾಗಿದ್ದರು. ಹೀಗಿದ್ದರೂ ಸದನ ಹಲವು ಸಾರಸ್ಯಕರ ಸಂಗತಿಗಳಿಗೆ ಸಾಕ್ಷಿಯಾಯಿತು. ​ ಸೋನಿಯಾ ಗಾಂಧಿ ಡಿನ್ನರ್ ಮೀಟಿಂಗ್​​ಗೆ ಸ್ಪೀಕರ್ ಹೋಗಿದ್ದು ಸದನದಲ್ಲಿ​ ಪ್ರತಿಧ್ವನಿಸಿತು. ಜೆಡಿಎಸ್​ ಶಾಸಕರು ಎಣ್ಣೆ ಮೇಲೆ ತೆರಿಗೆ ಹೊರೆ ಹಾಕಿದ್ದಕ್ಕೆ ಮಾತಿನ ಸಮರ ನಡೆಸಿದರು.

ವಿಧಾನಸಭೆ ಅಧಿವೇಶನಕ್ಕೆ ಕೇವಲ ಮೂರು ದಿನ ಮಾತ್ರ ಬಾಕಿ ಇದೆ. ಬಜೆಟ್ ಮೇಲಿನ ಚರ್ಚೆ ವೇಳೆ ಎಣ್ಣೆ ಸೇರಿ ಹಲವು ವಿಚಾರಕ್ಕೆ ವಿಪಕ್ಷಗಳು ಹಾಗೂ ಆಡಳಿತ ಪಕ್ಷದ ಶಾಸಕರ ನಡುವೆ ಮಾತಿನ ಮಲ್ಲಯುದ್ಧ ನಡೆದಿದೆ.

ಸೋನಿಯಾ ಡಿನ್ನರ್​ ಪಾರ್ಟಿಗೆ ಸ್ಪೀಕರ್ ಹೋಗಿದ್ದು ತಪ್ಪಾ?

ಬೆಂಗಳೂರಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಮಹಾಘಟಬಂಧನ್ ಶಕ್ತಿಪ್ರದರ್ಶನ ನಡೆಯಿತು. ಇದರ ಭಾಗವಾಗಿ ಕರೆದ ಸೋನಿಯಾ ಗಾಂಧಿ ಡಿನ್ನರ್ ಪಾರ್ಟಿಗೆ ಸ್ಪೀಕರ್ ಯು.ಟಿ ಖಾದರ್​​ ಹೋಗಿದ್ದರು. ಕಲಾಪದಲ್ಲಿ ಬಜೆಟ್ ಮೇಲೆ ಚರ್ಚೆ ನಡೆಸುವಾಗ ಬಿಜೆಪಿ ನಾಯಕರು ನೀವು ಸೋನಿಯಾ ಗಾಂಧಿ ಮೀಟ್ ಮಾಡಿದ್ರಂತೆ, ಡಿನ್ನರ್ ಪಾರ್ಟಿಗೆ ಹೋಗಿದ್ರಂತೆ ಎಂದು ಸ್ಪೀಕರ್​​ಗೆ ಕೇಳಿದ್ರು. ಈ ಸ್ಥಾನದಲ್ಲಿದ್ದೂ ಡಿನ್ನರ್​ ಪಾರ್ಟಿಗೆ ಹೋಗೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇನ್ನು ಮಹಾಘಟಬಂಧನ್ ನಾಯಕರ ಡಿನ್ನರ್ ಪಾರ್ಟಿಗೆ ಹೋಗಿದ್ದ ಬಗ್ಗೆ ಶಾಸಕ ಆರಗ ಪ್ರಶ್ನೆಗೆ ಉತ್ತರಿಸಿದ ಸಭಾಧ್ಯಕ್ಷ ಯು.ಟಿ ಖಾದರ್​ ನಾನೂ ಕೂಡ ಮನುಷ್ಯ, ನೀವು ಕರೆದರೂ ಊಟಕ್ಕೆ ಬರುತ್ತೇನೆ ಎಂದರು.

ಸದನದಲ್ಲಿ ಸದ್ದು ಮಾಡಿದ ಎಣ್ಣೆ ಮೇಲಿನ ತೆರಿಗೆ ವಿಚಾರ!

ಇನ್ನು ಕಲಾಪದಲ್ಲಿ ಬಜೆಟ್​ ಮೇಲಿನ ಚರ್ಚೆ ವೇಳೆ ಜೆಡಿಎಸ್​ ಶಾಸಕ ಎಂ.ಟಿ ಕೃಷ್ಣಪ್ಪ ಮದ್ಯದ ಮೇಲೆ 20% ತೆರಿಗೆ ಹೆಚ್ಚಳ ವಿಚಾರ ಪ್ರಸ್ತಾಪಿಸಿ, ಹ್ಯಾಸ ಮಾಡಿದರು. ಸರ್ಕಾರ ಸ್ಲ್ಯಾಬ್​ ಅಂತ ಹೇಳಿ ಮದ್ಯದ ಮೇಲೆ 20% ತೆರಿಗೆ ಹೆಚ್ಚಿಸಿದ್ದಾರೆ. ಸ್ಲ್ಯಾಬ್ ಅಂದ್ರೇನು ಯಾರಿಗಾದರೂ ಗೊತ್ತಾ? ತೆರಿಗೆ ಹೆಚ್ಚಿಸಿರೋದು ಪೆಗ್​​ಗಾ? ಕ್ವಾಟರ್​ಗಾ? ಅಥವಾ ಬಾಟಲ್​ಗಾ? ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇನ್ನು ಟ್ಯಾಕ್ಸ್ ಹಾಕಿ ಜನರಿಗೆ ತೊಂದ್ರೆ ಕೊಡುತ್ತಿದ್ದಾರೆ. ಟೆಂಡರ್ ಆಗಿ ಕೆಲಸ ಆರಂಭ ಆಗಿದ್ರೂ ನಿಲ್ಲಿಸಿಬಿಟ್ಟಿದ್ದಾರೆ. ದಯವಿಟ್ಟು ಕಾಮಗಾರಿ ಮಾಡಲು ಆದೇಶ ನೀಡಿ ಎಂದು ಎಂ.ಟಿ ಕೃಷ್ಣಪ್ಪ ಆಗ್ರಹಿಸಿದರು.

ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಆಡಳಿತ ಪಕ್ಷದ ಪ್ರಮುಖ ನಾಯಕರು ಮಹಾಘಟಬಂಧನ್ ಸಭೆಯಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಪ್ರಮುಖ ನಾಯಕರಿಲ್ಲದೇ ಸದನ ನಡೆಯಿತು. ಜೆಡಿಎಸ್​, ಬಿಜೆಪಿ ಶಾಸಕರ ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಕಾಂಗ್ರೆಸ್ ಶಾಸಕರು ತಡವರಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋನಿಯಾ ಗಾಂಧಿ ಡಿನ್ನರ್​ ಪಾರ್ಟಿಗೆ ಹೋಗಿ ತಪ್ಪು ಮಾಡಿದ್ರಾ ಸಭಾಧ್ಯಕ್ಷ ಖಾದರ್‌? ಏನಿದು ವಿವಾದ?

https://newsfirstlive.com/wp-content/uploads/2023/07/UT-Khader.jpg

Load More