newsfirstkannada.com

Video: ಸೀಟು ಕೊಡೆ..ನಾ ಬಿಡೆ..ಬಸ್​ನಲ್ಲಿ ಯದ್ವಾತದ್ವಾ ಬಡಿದಾಡಿಕೊಂಡ ಮಹಿಳೆಯರು

Share :

01-07-2023

    ಸೀಟ್​ಗಾಗಿ ಬಡಿದಾಡಿಕೊಂಡ ಉತ್ತರ ಕರ್ನಾಟಕ ಮಹಿಳೆಯರು

    ಬಸ್​ನಲ್ಲೀ ಕೈ ಮಿಲಾಯಿಸಿದ ಮಹಿಳೆಯರ ದೃಶ್ಯ ವೈರಲ್​

    ಸೀಟ್​​ಗಾಗಿ ಜಗಳ ಮಹಿಳೆಯರು-ಮಹಿಳೆಯರು ನಡುವೆ ಫೈಟ್​​

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಉಚಿತ ಬಸ್ ಯೋಜನೆ ಬಿಟ್ಟಿದ್ದೇ ತಡ ಪುರುಷರಿಗಂತೂ ಸೀಟು ಸಿಗುತ್ತಿಲ್ಲ. ಮತ್ತೊಂದೆಡೆ ಬಸ್​ ಪೂರ್ತಿ ಮಹಿಳೆಯರೇ ತುಂಬಿ ತುಳುಕುತ್ತಿದ್ದಾರೆ. ಇಂತಹ ಸಮಯದಲ್ಲಿ ಮಹಿಳೆಯರು ಸೀಟಿಗಾಗಿ ಹೊಡೆದಾಡುತ್ತಿರುವ ದೃಶ್ಯ ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಅದರಂತೆಯೇ ಮತ್ತೊಂದು ಘಟನೆ ಎಂಬಂತೆ ಬಸ್​ನಲ್ಲೇ ಮಹಿಳೆಯರ ಸೀಟ್​ಗಾಗಿ ಮಾರಾಮಾರಿ ನಡೆಸಿದ ದೃಶ್ಯ ವೈರಲ್​ ಆಗಿದೆ.

ಉತ್ತರ ಕರ್ನಾಟಕ ಭಾಗದ ಮಹಿಳೆಯರು ಬಸ್​ನಲ್ಲಿ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಸೀಟ್​ಗಾಗಿ ಮಹಿಳೆ ಮಹಿಳೆಯರೇ ಅವಾಶ್ಚ ಶಬ್ದಗಳಿಂದ ಬೈದುಕೊಂಡು ಹೊಡೆದಾಡಿಕೊಂಡಿದ್ದಾರೆ. ಮಹಿಳೆಯರ ಹೊಡಿ-ಬಡಿ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್​ ಆಗಿದೆ.

ಒಂದೆಡೆ ಫ್ರೀ ಬಸ್ ಯೋಜನೆ ಜಾರಿಯಾದಾಗಿನಿಂದ ಮಹಿಳೆಯ ಬಸ್​ ಓಡಾಟ ಹೆಚ್ಚಾಗಿದೆ. ಉಚಿತ ಬಸ್​ ಯೋಜನೆಯನ್ನು ರಾಜ್ಯದ ಬಹುಪಾಲು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮತ್ತೊಂದಡೆ ಈ ಉಚಿತ ಯೋಜನೆಯಿಂದಾಗಿ ಗಂಡಸರ ಸ್ಥಿತಿ ಅದೋಗತಿಯಾಗಿದೆ. ಬಸ್​ನಲ್ಲಂತು ಸೀಟ್​ ಸಿಗದೆ ರೋಸಿಹೋಗಿದ್ದಾರೆ. ಮಾತ್ರವಲ್ಲದೆ, ಉಚಿತ ಬಸ್​ ಪ್ರಯಾಣದಿಂದ ಮನೆ ಬಿಟ್ಟ ಹೆಂಡತಿ ಇನ್ನು ಬಂದಿಲ್ಲ ಎಂಬ ಗಂಡಸರ ಕೂಗು ಕೂಡ ಮತ್ತೊಂದೆಡೆ ಕೇಳಿ ಬರುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಸೀಟು ಕೊಡೆ..ನಾ ಬಿಡೆ..ಬಸ್​ನಲ್ಲಿ ಯದ್ವಾತದ್ವಾ ಬಡಿದಾಡಿಕೊಂಡ ಮಹಿಳೆಯರು

https://newsfirstlive.com/wp-content/uploads/2023/07/Uttar-Kannada-Fight.jpg

Load More