newsfirstkannada.com

ಇದೆಂಥಾ ವಿಚಿತ್ರ! 4 ಕೈ ಮತ್ತು ಕಾಲುಗಳಿರುವ ಮಗು ಜನನ.. ಆರೋಗ್ಯ ಸ್ಥಿತಿ ಗಂಭೀರ

Share :

11-11-2023

    ಇರ್ಫಾನ್​ ಮತ್ತು ರುಕ್ಸಾನಾ ದಂಪತಿಗಳಿಗೆ ಹುಟ್ಟಿದ ಮಗು

    ಜನಿಸಿದ ಬಳಿಕ ಮಗುವಿಗೆ ಕಾಣಿಸಿಕೊಂಡ ಉಸಿರಾಟದ ಸಮಸ್ಯೆ

    ನಿಷ್ಕ್ರಿಯವಾಗಿರುವ ಹೆಚ್ಚುವರಿ ಅಂಗವನ್ನು ತೆಗೆಯಲು ವೈದ್ಯರ ಚರ್ಚೆ

ಉತ್ತರ ಪ್ರದೇಶ: ಇಲ್ಲಿನ ಮುಜಾಫರ್‌ ನಗರದಲ್ಲಿ ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳಿರುವ ಮಗು ಜನಿಸಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಮೀರತ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಮೊಹಮ್ಮದ್​ ಇರ್ಫಾನ್​ (35) ರುಕ್ಸಾನಾ (30) ದಂಪತಿಗೆ ಈ ಅಪರೂಪದ ಮಗು ಜನಿಸಿದೆ. ಸೋಮವಾರ ಮಧ್ಯಾಹ್ನ 03:30ಕ್ಕೆ ಮುಜಾಫರ್‌ನಗರದಲ್ಲಿರುವ ಇರ್ಫಾನ್ ಅವರ ಮನೆಯಲ್ಲಿ ರುಕ್ಸಾನಾ ನವಜಾತ ಶಿಶು ಜನ್ಮ ನೀಡಿದ್ದಾರೆ. ಮಗುವಿಗೆ ಉಸಿರಾಟದ ಸಮಸ್ಯೆಯಾಗಿದ್ದರಿಂದ ಚಿಕಿತ್ಸೆ ಕೊಡಿಸಲಾಗ್ತಿದೆ.

ಡಾ. ನವರತನ್​ ಗುಪ್ತಾ ಈ ಬಗ್ಗೆ ಮಾತನಾಡಿ, ‘ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲು ಬಂದಾಗ ಉಸಿರಾಟದ ತೊಂದರೆ ಮತ್ತು ಆಮ್ಲಜನಕದ ಪೂರೈಕೆ ಅಗತ್ಯವಿತ್ತು. ಸದ್ಯ ಟ್ಯೂಬ್​ ಮೂಲಕ ಆಹಾರ ನೀಡಲಾಗುತ್ತಿದೆ. ಮಗುವಿನ ಸ್ಥಿತಿ ಕೊಂಚ ಸ್ಥಿರವಾಗಿದೆ’ ಎಂದು ಹೇಳಿದ್ದಾರೆ.

ದಂಪತಿಗಳಿಗೆ ಈಗಾಗಲೇ ಏಳು, ನಾಲ್ಕು ಮತ್ತು ಒಮದು ವರ್ಷದ ಮೂವರು ಹೆಣ್ಣು ಮಕ್ಕಳಿದ್ದಾರೆ. ಸಾಮಾನ್ಯ ಹೆರಿಯ ಮೂಲಕ ರುಕ್ಸಾನಾ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ನಾಲ್ಕನೇ ಮಗು ಮಾತ್ರ ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳಿಂದ ಜನಿಸಿದೆ. ಸದ್ಯ ವೈದ್ಯರ ತಂಡ ಮಗುವನ್ನು ಅನೇಕ ಪರೀಕ್ಷೆ ಒಳಪಡಿಸಿದ್ದಾರೆ. ನಿಷ್ಕ್ರಿಯವಾಗಿರುವ ಹೆಚ್ಚುವರಿ ಅಂಗವನ್ನು ತೆಗೆಯುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದೆಂಥಾ ವಿಚಿತ್ರ! 4 ಕೈ ಮತ್ತು ಕಾಲುಗಳಿರುವ ಮಗು ಜನನ.. ಆರೋಗ್ಯ ಸ್ಥಿತಿ ಗಂಭೀರ

https://newsfirstlive.com/wp-content/uploads/2023/11/baby.jpg

Load More