newsfirstkannada.com

ಹಿಂಡನ್ ನದಿಯ ಆರ್ಭಟ.. ಉತ್ತರ ಪ್ರದೇಶದಲ್ಲಿ ನೂರಾರು ಕಾರುಗಳು ನೀರು ಪಾಲು- Video

Share :

25-07-2023

  ಕಣ್ಣು ಹಾಯಿಸಿದಷ್ಟು ದೂರ ನದಿಯ ನೀರೋ ನೀರು..!

  ಕಾರುಗಳು ನೀರಲ್ಲಿ ಮುಳುಗಿರುವುದು ನೋಡಿದ್ರೆ ಶಾಕ್

  ನದಿ ನೀರು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು ಜನರಲ್ಲಿ ಭಯ

ಲಕ್ನೋ: ದೇಶದೆಲ್ಲೆಡೆ ವರುಣರಾಯ ಆರ್ಭಟಿಸುತ್ತಾ ಅವಾಂತರಗಳನ್ನು ಸೃಷ್ಟಿ ಮಾಡುತ್ತಿದ್ದಾನೆ. ಇದರಿಂದ ಜನರು ರೋಸಿ ಹೋಗಿದ್ದು ಸಾಕಪ್ಪಾ.. ಸಾಕು ಈ ಮಳೆ ಎನ್ನುತ್ತಿದ್ದಾರೆ. ಆದರೂ ಮಳೆರಾಯ ಮಾತ್ರ ತನ್ನ ನರ್ತನ ಮಾತ್ರ ಇನ್ನು ಹೆಚ್ಚು ಮಾಡಿದ್ದಾನೆ. ವರುಣನ ಕೃಪೆಯಿಂದ ಉತ್ತರ ಭಾಗದಲ್ಲಿರುವ ಹಿಂಡನ್ ನದಿಯ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದ್ದು ಹಲವೆಡೆ ಸಮಸ್ಯೆಯನ್ನು ತಂದೊಡ್ಡಿದೆ.

ಹಿಂಡನ್ ನದಿಯ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ನೋಯ್ಡಾದ ಇಕೋ ಟೆಕ್ ಪ್ರದೇಶಕ್ಕೆ ನದಿ ನೀರು ನುಗ್ಗಿದೆ. ಹೀಗಾಗಿ ಇಕೋ ಟೆಕ್-3 ಜಾಗದಲ್ಲಿ ಪಾರ್ಕ್​ ಮಾಡಲಾಗಿದ್ದ ನೂರಾರು ಕಾರುಗಳು ನೀರಿನಲ್ಲಿ ಮುಳುಗಿವೆ. ಯಾವ ಕಂಪನಿಯವರು ಅಲ್ಲಿ ಪಾರ್ಕ್​ ಮಾಡಿದೆ ಎಂದು ತಿಳಿದು ಬಂದಿಲ್ಲ. 200ಕ್ಕೂ ಅಧಿಕ ಇರುವ ಈ ಕಾರುಗಳೆಲ್ಲ ನೀರು ಕಡಿಮೆಯಾದ ಮೇಲೆ ರಿಪೇರಿ ಮಾಡಲು ಲಕ್ಷಾಂತರ ರೂಪಾಯಿ ಖರ್ಚು ಆಗಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಉತ್ತರ ಪ್ರದೇಶದ ನೋಯ್ಡಾದ ಇಕೋ ಟೆಕ್ ಪ್ರದೇಶವು ಸಾಕಷ್ಟು ಜನರು ವಾಸಿಸುವ ಸ್ಥಳವಾಗಿದೆ. ಕಮರ್ಷಿಯಲ್​ ಆಗಿಯು ಇದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇದರಿಂದ ಈ ಸ್ಥಳದಲ್ಲಿ ಬೈಕ್​, ಕಾರು ಉದ್ಯಮಗಳು ಸಾಕಷ್ಟು ಇವೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿಂಡನ್ ನದಿಯ ಆರ್ಭಟ.. ಉತ್ತರ ಪ್ರದೇಶದಲ್ಲಿ ನೂರಾರು ಕಾರುಗಳು ನೀರು ಪಾಲು- Video

https://newsfirstlive.com/wp-content/uploads/2023/07/CAR_IN_WATER.jpg

Load More