ಮದುವೆ ಮಂಟಪದಿಂದ ಕಾಲ್ಕಿತ್ತ ಮಧುಮಗ
20 ಕಿಲೋ ಮೀಟರ್ ಚೇಸ್ ಮಾಡಿದ ಹೆಣ್ಣು
ಕೊನೆಗೂ ಪತ್ತೆ ಹಚ್ಚಿ ಮದುವೆಯಾದ ವಧು
ಪ್ರೀತಿಸಿ ಮದುವೆ ಆದ ಜೋಡಿಗಳು ಓಡಿ ಹೋಗಿ ಮದುವೆ ಆಗಿರೋದನ್ನ ಕೇಳಿರಬಹುದು. ಆದರೆ ಇಲ್ಲೊಂದು ಸ್ಟೋರಿ ಮಾತ್ರ ತುಂಬಾ ವಿಚಿತ್ರವಾಗಿದೆ. ವಧು ತನ್ನನ್ನು ನಿರಾಕರಿಸಿದ ವರನನ್ನು 20 ಕಿಲೋ ಮೀಟರ್ ಚೇಸ್ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಅಷ್ಟು ಮಾತ್ರವಲ್ಲ, ಮದುಮಗಳು ಕೊನೆಗೂ ಆತನನ್ನು ಪತ್ತೆಹಚ್ಚಿ ವರಿಸಿದ್ದಾಳೆ.
ಹುಡುಗ ಮತ್ತು ಹುಡುಗಿ ಇಬ್ಬರು ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದು, ಕೊನೆಗೊಂದು ದಿನ ಮದುವೆ ಆಗಲು ನಿರ್ಧರಿಸುತ್ತಾರೆ. ಅದರಂತೆಯೇ ಯುವತಿ ಸಿಂಗರಿಸಿಕೊಂಡು ಬಂದು ವರನಿಗಾಗಿ ಮಂಟಪದಲ್ಲಿ ಕಾದು ಕುಳಿತುಕೊಂಡಿದ್ದಾಳೆ. ಆದರೆ ಆತ ಮಂಟಪಕ್ಕೆ ಬಾರದೇ ಇದ್ದದ್ದನ್ನು ಗಮನಿಸಿದ ವಧು ಮಂಟಪದಿಂದ ಕೆಳಗಿಳಿದು ತನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿದವನನ್ನು ಹುಡುಕಲು ಪ್ರಾರಂಭಿಸುತ್ತಾಳೆ. ಅದರಂತೆಯೇ ಸುಮಾರು 20 ಕಿಲೋ ಮೀಟರ್ ಚೇಸ್ ಮಾಡುತ್ತಾಳೆ.
ಹೀಗೇ ಚೇಸ್ ಮಾಡಿದ ಮದುಮಗಳಿಗೆ ಕೊನೆಗೂ ವರ ಸಿಗುತ್ತಾನೆ. ಬರೇಲಿ ನಗರದ ಪೊಲೀಸ್ ಠಾಣೆಯ ವ್ಯಾಪ್ತಿಯ ಬಳಿ ಇರುವ ಬಸ್ನಲ್ಲಿ ಆತ ಪತ್ತೆಯಾಗುತ್ತಾನೆ. ಬಳಿಕ ಇಬ್ಬರ ನಡುವೆ ಮಾತುಕತೆ ನಡೆಯುತ್ತದೆ. ವರ ನಾಟಕೀಯವಾಗಿ ಈ ವಿವಾಹದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. ಬಳಿಕ ವಧು ಮತ್ತು ಆಕೆಯ ಕುಟುಂಬ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ.
ಇಷ್ಟೆಲ್ಲಾ ಆದ ಬಳಿಕ ವರನ ಮನೆಯವರು ಅಲ್ಲಿಗೆ ಬರುತ್ತಾರೆ. ಕೊನೆಗೆ ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ ವಧು ಮತ್ತು ವರನಿಗೆ ಸಿಂಪಲ್ಲಾಗಿ ಮದುವೆ ಮಾಡಿಸುತ್ತಾರೆ. ಅಂದಹಾಗೆಯೇ ಇವರಿಬ್ಬರ ಸರಳ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ