newsfirstkannada.com

ಮಗುವಿನ ಕೈಗೆ ಬೈಕ್​ ಕೊಟ್ಟು ಡ್ಯಾನ್ಸ್ ಮಾಡಿದ.. ಸ್ಟಂಟ್​​ ಮಾಡಿ ಹುಚ್ಚಾಟ ಮೆರೆದವನಿಗೀಗ ಸಂಕಷ್ಟ

Share :

02-09-2023

    ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹ

    ವೇಗವಾಗಿ ಬೈಕ್​ ರೈಡಿಂಗ್, ಮಗುವಿನ ಕೈಗೆ ಹ್ಯಾಂಡಲ್

    ಬರುತ್ತಿದ್ದ ವಾಹನಕ್ಕೆ ಡಿಕ್ಕಿಯಾಗುವುದು ಜಸ್ಟ್​ ಮಿಸ್..!

ಲಕ್ನೋ: ಯುವಕನೊಬ್ಬ ಐದು ವರ್ಷದ ಮಗುವಿನ ಕೈಗೆ ಸ್ಪೀಡ್ ಆಗಿ ಹೋಗುತ್ತಿದ್ದ ಬೈಕ್​ ಹ್ಯಾಂಡಲ್ ಕೊಟ್ಟು ಹಿಂದೆ ಕುಳಿತು ಡ್ಯಾನ್ಸ್​ ಮಾಡಿರೋ ಘಟನೆ ಉತ್ತರಪ್ರದೇಶದ ಲಲಿತ್‌ಪುರ ರಾಷ್ಟ್ರೀಯ ಹೆದ್ದಾರಿ -44ರಲ್ಲಿ ನಡೆದಿದೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ಶೀಘ್ರ ಯುವಕನ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಯುವಕನೋರ್ವ ಹುಚ್ಚಾಟ ಮೆರೆದಿರುವ ಅಪಾಯಕಾರಿ ಬೈಕ್​ ರೈಡಿಂಗ್​ಗೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ವೇಗವಾಗಿ ಚಲಿಸುತ್ತಿರುವ ಬೈಕ್​ ಹಿಂದೆ ಕುಳಿತಿರುವ ಯುವಕ ಎರಡು ಕೈಗಳನ್ನು ಬಿಟ್ಟು ಡ್ಯಾನ್ಸ್ ಮತ್ತು ಸ್ಟಂಟ್ಸ್​ ಮಾಡುತ್ತಿದ್ದಾನೆ. ಮಗುವಿನ ಕೈಗೆ ಬೈಕ್​ ಹ್ಯಾಂಡಲ್ ಅನ್ನು ಕೊಟ್ಟಿದ್ದಾನೆ. ಈ ವೇಳೆ ರಸ್ತೆಯಲ್ಲಿ ಎದುರಿಗೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುತ್ತಿತ್ತು. ಆದ್ರೆ ಜಸ್ಟ್​ ಮಿಸ್ ಆಗಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗುವಿನ ಕೈಗೆ ಬೈಕ್​ ಕೊಟ್ಟು ಡ್ಯಾನ್ಸ್ ಮಾಡಿದ.. ಸ್ಟಂಟ್​​ ಮಾಡಿ ಹುಚ್ಚಾಟ ಮೆರೆದವನಿಗೀಗ ಸಂಕಷ್ಟ

https://newsfirstlive.com/wp-content/uploads/2023/09/UP_BIKE_RIDING.jpg

Load More