ಉದ್ಯಮಿಯನ್ನ ಸಾರ್ವಜನಿಕ ರಸ್ತೆಯಲ್ಲಿ ಥಳಿಸಿ ಓಡಿಸಿದ ದುಷ್ಕರ್ಮಿಗಳು
ಕೋಲಿನಿಂದ ಹೊಡೆದು ಅವಮಾನಗೊಳಿಸಿ ರೋಡಿಗೆ ಬಿಟ್ಟರು..!
ಅಷ್ಟಕ್ಕೂ ಅಂಗಡಿಯಲ್ಲಿ ಉದ್ಯಮಿ-ವ್ಯಾಪಾರಸ್ಥರ ಮಧ್ಯೆ ನಡೆದಿದ್ದೇನು..?
ಲಕ್ನೋ: ಕೇವಲ 3 ಸಾವಿರ ರೂಪಾಯಿಗೆ ವ್ಯಾಪಾರಿಯೊಬ್ಬರನ್ನು ಬೆತ್ತಲೆಗೊಳಿಸಿ ಥಳಿಸಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ನೋಯ್ಡಾದ ಮಾರುಕಟ್ಟೆಯೊಂದರಲ್ಲಿ ನಡೆದಿದೆ.
ನೋಯ್ಡಾದ ಹಣ್ಣಿನ ಮಾರುಕಟ್ಟೆಯಲ್ಲಿ ವ್ಯಾಪಾರಿ ಅಮಿತ್ ಎನ್ನುವವರನ್ನು ಕೇವಲ ಮೂರು ಸಾವಿರ ರೂಪಾಯಿಗೆ ಬೆತ್ತಲೆಗೊಳಿಸಿ ಅಂಗಡಿಯಿಂದ ಹೊರಗಟ್ಟಲಾಗಿದೆ. ಈ ಕೃತ್ಯ ಎಸಗಿದ್ದು ಸುಂದರ್ ಎನ್ನುವ ಆರೋಪಿ ಎಂದು ತಿಳಿದು ಬಂದಿದೆ. ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸುಂದರ್ ಅವರ ಅಂಗಡಿ ಲೈಸನ್ಸ್ ಅನ್ನು ಕ್ಯಾನ್ಸಲ್ ಮಾಡಲಾಗಿದೆ. ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಅಮಿತ್ ಬೆಳ್ಳುಳ್ಳಿ ಮಾರುವ ವ್ಯಾಪಾರಿ ಆಗಿದ್ದು ಕಳೆದ ತಿಂಗಳು 5,600 ರೂಪಾಯಿಗೆ ಸುಂದರ್ ಬಳಿ ಬೆಳ್ಳುಳ್ಳಿ ಖರೀದಿ ಮಾಡಿದ್ದರು. ಇದರಲ್ಲಿ 2,500 ರೂಪಾಯಿಗಳನ್ನು ಕೊಟ್ಟು ಉಳಿದ ಹಣವನ್ನು ಮುಂದಿನ ದಿನಗಳಲ್ಲಿ ಕೊಡುವುದಾಗಿ ಹೇಳಿದ್ದರು. ಆದರೆ ಇನ್ನೂ ಏಕೆ ಹಣ ಕೊಟ್ಟಿಲ್ಲವೆಂದು ಸುಂದರ್ ಆತನನ್ನು ಬೆತ್ತಲೆಗೊಳಿಸಿ ಅಂಗಡಿಯಿಂದ ಹೊರ ಹಾಕಿದ್ದಾನೆ. ಹೊರ ಹೋಗುತ್ತಿದ್ದಂತೆ ಕೋಲಿನಿಂದ ಥಳಿಸಿ ಅವಾಚ್ಯ ಶಬ್ಧದಿಂದ ನಿಂದಿಸಿ ಸಾರ್ವಜನಿಕರ ರಸ್ತೆಯಲ್ಲಿ ಬೆದರಿಸಿ ಕಳುಹಿಸಿದ್ದಾನೆ. ಅಂಗಡಿಯಲ್ಲಿದ್ದವರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದು ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ