‘ಸ್ನೇಹಿತರಿಗೆ ಆದ ಕಷ್ಟ ಬೇರೆಯವರಿಗೆ ಬಾರದಿರಲಿ’
2022 ಡಿಸೆಂಬರ್ನಿಂದ ಕ್ಯಾಂಪೇನ್ ಆರಂಭಿಸಿರುವ ಯುವಕ
ಒಟ್ಟು 21 ರಾಜ್ಯಗಳಲ್ಲಿ ಸಂಚರಿಸಿ ಜಾಗೃತಿ ಅಭಿಯಾನ
ಬೆಂಗಳೂರು: ‘ಕಾಡು ಬೆಳಸಿ, ಪರಿಸರ ಉಳಿಸಿ’ ಎಂಬ ಧ್ಯೇಯವಾಕ್ಯ ಆಗಾಗ ಎಲ್ಲೆಡೆ ಮುಳುಗುತ್ತಿರುತ್ತದೆ. ಎಷ್ಟೇ ಅಭಿಯಾನ, ಘೋಷಣೆಗಳನ್ನು ಮೊಳಗಿಸಿದ್ದರೂ ಜನರು ಮಾತ್ರ ಜಾಗೃತಗೊಳ್ಳಲ್ಲ. ಇದೀಗ ಉತ್ತರ ಪ್ರದೇಶದ ಯುವಕನೊಬ್ಬ ಪರಿಸರ ಉಳಿಸುವ ಜಾಗೃತಿ ಅಭಿಯಾನದ ಮೂಲಕ ದೇಶದಾದ್ಯಂತ ಸುದ್ದಿಯಾಗಿದ್ದಾನೆ.
ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಅಶುತೋಷ್ ಪಾಂಡೆ ಎಂಬಾತ ಪರಿಸರ ಉಳಿವಿಗಾಗಿ ಜಾಗೃತಿ ನಡಿಗೆ ಆರಂಭಿಸಿದ್ದಾರೆ. 2022 ಡಿಸೆಂಬರ್ ತಿಂಗಳಲ್ಲಿ ಆರಂಭಿಸಿರುವ ಈ ಕ್ಯಾಂಪೇನ್ ಇಂದಿನವರೆಗೂ ನಿರಂತವಾಗಿದೆ. ಅದರಂತೆ ಇವತ್ತು ಬೆಂಗಳೂರು ತಲುಪಿರುವ ಅಶುತೋಷ್ ಪಾಂಡೆ ಕರ್ನಾಟಕದ ಅರಣ್ಯ ಸಚಿವರನ್ನು ಭೇಟಿಯಾದರು.
ಈಗಾಗಲೇ ಉತ್ತರ ಪ್ರದೇಶ, ಒಡಿಸಾ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ತಮಿಳುನಾಡು ರಾಜ್ಯದಲ್ಲಿ ಸಂಚಾರ ಮುಗಿಸಿರುವ ಅಶುತೋಷ್ ಕರ್ನಾಟಕಕ್ಕೆ ಬಂದಿದ್ದಾರೆ. ಇಲ್ಲಿಂದ ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ತಮ್ಮ ಸಂಚಾರವನ್ನು ಮುಂದುವರಿಸಲಿದ್ದಾರೆ. ಒಟ್ಟು 21 ರಾಜ್ಯಗಳಲ್ಲಿ 16 ಸಾವಿರ ಕಿಲೋಮೀಟರ್ ದೂರ ನಡೆಯಲು ಪ್ಲಾನ್ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ವಾಯುಮಾಲಿನ್ಯದಿಂದ ಉಂಟಾದ ಸಮಸ್ಯೆ ಕಂಡು ಪರಿಸರ ಉಳಿಸಲು ಇವರು ಪಣತೊಟ್ಟಿದ್ದಾರೆ. ಅಶುತೋಷ್ ಸ್ನೇಹಿತರು ಸಹ ಪರಿಸರ ಮಾಲಿನ್ಯ ಸಮಸ್ಯೆಯ ತೊಂದರೆಗೆ ಒಳಗಾಗಿದ್ದರು. ಇದನ್ನು ಕಂಡು ಅಶುತೋಷ್ ದೇಶಾದ್ಯಂತ ನಡಿಗೆ ಮುಖಾಂತರ ‘ಪರಿಸರ ಜಾಗೃತಿ ಅಭಿಯಾ’ ಆರಂಭಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ