newsfirstkannada.com

ಮತ್ತಿಬ್ಬರನ್ನು ಬಲಿ ಪಡೆದ ಮಳೆ.. ಕಾಲು ಜಾರಿ ಗದ್ದೆಯಲ್ಲಿ ಬಿದ್ದಿದ್ದ ಇಬ್ಬರು ಶವವಾಗಿ ಪತ್ತೆ

Share :

07-07-2023

    ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ, ಜನರು ಆತಂಕ

    ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದವರ ಶವಗಳು ಪತ್ತೆ

    ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಉತ್ತರಕನ್ನಡ: ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದ ಇಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಕುಮಟಾ ಬಳಿಯ ಬೆಟ್ಕುಳಿಯಲ್ಲಿ ನಡೆದಿದೆ.

ಸತೀಶ್ ಪಾಂಡುರಂಗ ನಾಯ್ಕ (38), ಉಲ್ಲಾಸ ಗಾವಡಿ (50) ಮೃತ ದುರ್ದೈವಿಗಳು. ಬಾರೀ ಮಳೆಯಿಂದ ಗದ್ದೆಗಳೆಲ್ಲ ಜಲಾವೃತವಾಗಿದ್ದವು. ಈ ವೇಳೆ ಗದ್ದೆಯ ದಡದ ಮೇಲೆ ನಡೆದುಕೊಂಡು ಹೋಗುತ್ತಿದ್ದ ಈ ಇಬ್ಬರು ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದರು. ಮಳೆ ನೀರು ರಭಸವಾಗಿ ಹರಿಯುತ್ತಿದ್ದರಿಂದ ಕೊಚ್ಚಿಕೊಂಡು ಹೋಗಿದ್ದರು.

ಹೀಗಾಗಿ ಗ್ರಾಮಸ್ಥರು ಮಳೆ ನೀರಿನಲ್ಲಿ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಕೆಲವು ಗಂಟೆಗಳ ನಂತರ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತಿಬ್ಬರನ್ನು ಬಲಿ ಪಡೆದ ಮಳೆ.. ಕಾಲು ಜಾರಿ ಗದ್ದೆಯಲ್ಲಿ ಬಿದ್ದಿದ್ದ ಇಬ್ಬರು ಶವವಾಗಿ ಪತ್ತೆ

https://newsfirstlive.com/wp-content/uploads/2023/07/UK_TWO_MEN_DAI.jpg

Load More