newsfirstkannada.com

ಚಾಕೊಲೇಟ್ ಎಂದು ಜೀನ್ಸ್​ ಪ್ಯಾಂಟ್​ ಬಟನ್​ ನುಂಗಿದ 2 ತಿಂಗಳ ಮಗು; ಆಮೇಲೆ ಏನಾಯ್ತು?

Share :

16-08-2023

    ಪುಟ್ಟ ಮಗುವಿನ ಅಕ್ಕನೇ ಮಾಡಿದ್ದು ಈ ದೊಡ್ಡ ಯಡವಟ್ಟು!

    ಪುಟಾಣಿ ಪ್ಯಾಂಟ್​ ಬಟನ್​ ನುಂಗಿದ ಮೇಲೆ ಪ್ರಾಣಕ್ಕೆ ಕುತ್ತು

    ಮಗುವಿಗೆ ಆರೋಗ್ಯ ನೋಡಿ ಸರ್ಕಾರಿ ವೈದ್ಯರು ಹೇಳಿದ್ದೇನು?

ಉತ್ತರ ಕನ್ನಡ: ಜೀನ್ಸ್​ ಪ್ಯಾಂಟ್​ ಬಟನ್​ ನುಂಗಿದ್ದ 2 ತಿಂಗಳ ಮಗು ಅನಾರೋಗ್ಯಕ್ಕೆ ತುತ್ತಾದ ಘಟನೆ ಭಟ್ಕಳ ನಗರದಲ್ಲಿ ನಡೆದಿದೆ. ಅದೃಷ್ಟವಶಾತ್ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಈ ಪುಟಾಣಿಯ ಜೀವ ಉಳಿಸಿದ್ದಾರೆ.

ಭಟ್ಕಳ ನಗರದ ರಂಗೀಕಟ್ಟೆ ಗ್ರಾಮದ ಪಾಲಿಷ್ ಕಮಲ ಮತ್ತು ಕಿಶೋರ ದಂಪತಿಯ ಪುತ್ರಿ ಅಮೃತ (2 ತಿಂಗಳು) ಪ್ಯಾಂಟ್​ ಬಟನ್ ನುಂಗಿದ್ದ ಮಗು. ಮಗುವಿನ ಸಹೋದರಿ ನರ್ಮತಾ (2 ವರ್ಷ) ಆಟವಾಡುತ್ತಾ ತನಗೆ ಸಿಕ್ಕಿದ್ದ ಬಟನ್​ ಅನ್ನು ಚಾಕೋಲೇಟ್ ಎಂದು ನೀಡಿದ್ದಳು. ಹೀಗಾಗಿ ಮಗು ಅದನ್ನು ನುಂಗಿದ್ದರಿಂದ ಉಸಿರಾಡಲು ತೊಂದರೆ ಆಗಿ ಒದ್ದಾಡುತ್ತಿತ್ತು.

ಇದರಿಂದ ಗಾಬರಿಗೊಂಡ ಪೋಷಕರು ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಿದ್ದಾರೆ. ಇಎನ್‌ಟಿ ತಜ್ಞ ಡಾ. ಸತೀಶ್​ ನೇತೃತ್ವದ ವೈದ್ಯರ ತಂಡ ಮಗುವಿನ ದೇಹದಲ್ಲಿದ್ದ ಪ್ಯಾಂಟ್ ಬಟನ್ ಅನ್ನು ಕೊಳವೆ ಮೂಲಕ ಹೊರ ತೆಗೆದು ಮಗುವಿಗೆ ಮರುಜೀವ ಜೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಾಕೊಲೇಟ್ ಎಂದು ಜೀನ್ಸ್​ ಪ್ಯಾಂಟ್​ ಬಟನ್​ ನುಂಗಿದ 2 ತಿಂಗಳ ಮಗು; ಆಮೇಲೆ ಏನಾಯ್ತು?

https://newsfirstlive.com/wp-content/uploads/2023/08/UK_BABY.jpg

Load More