newsfirstkannada.com

ಸತತ 2 ದಿನದಿಂದ 40 ಕಾರ್ಮಿಕರ ಜೀವ ಉಳಿಸಲು ಹರಸಾಹಸ; ರಕ್ಷಣಾ ಕಾರ್ಯದ ಮಾಹಿತಿ ಪಡೆದ ಮೋದಿ

Share :

14-11-2023

  ಪೈಪ್​​ಗಳ ಮೂಲಕ ಆಕ್ಸಿಜನ್, ಆಹಾರ, ನೀರು ಪೂರೈಕೆ

  ಉತ್ತರಾಖಂಡ್​ನ ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರು

  ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಪಡೆದ ಪ್ರಧಾನಿ ಮೋದಿ

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದ್ರೆ ಅತ್ತ ದೇವಭೂಮಿ ಉತ್ತರಾಖಂಡ್​​ನಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು 40 ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ಇನ್ನೂ ಎರಡು ದಿನ ನಡೆಯೋ ಸಾಧ್ಯತೆ ಇದೆ. ಎಲ್ಲೆಡೆ ಆತಂಕ. ರಕ್ಷಣಾ ಕಾರ್ಯಾಚರಣೆ ಬಲು ಜೋರು. ಅನು ಕ್ಷಣವೂ ಆತಂಕ. ಉತ್ತರಾಖಂಡ್ ಹಿಮವನ್ನು ಹೊದ್ದು ಮಲಗಿರುವ ಭೂಲೋಕದ ಸ್ವರ್ಗ. ಭಾರತ ಉಪಖಂಡವನ್ನು ಟಿಬೆಟ್ ಪ್ರಸ್ಥಭೂಮಿಯಿಂದ ಪ್ರತ್ಯೇಕಿಸುವ ಬೃಹತ್ ಪರ್ವತ ಶ್ರೇಣಿ. ಸದ್ಯ ಇದೇ ಹಿಮಾಲಯದ ತಪ್ಪಲಲ್ಲಿ ಅವಘಡವೊಂದು ಸಂಭವಿಸಿದೆ. ಹೆದ್ದಾರಿಗೆ ನಿರ್ಮಿಸಲಾಗುತ್ತಿದ್ದ ಸುರಂಗ ಕುಸಿದು ಕಾರ್ಮಿಕರು ಸಿಲುಕಿದ್ದಾರೆ.

ಉತ್ತರಾಖಂಡ್​ನ ಸುರಂಗದಲ್ಲಿ ಸಿಲುಕಿದ 40 ಕಾರ್ಮಿಕರು
ರಕ್ಷಣಾ ಕಾರ್ಯ ಬಿರುಸು.. ಆಹಾರ, ನೀರು ಪೂರೈಕೆ!

ಉತ್ತರಾಖಂಡ್​​ನ ಉತ್ತರಕಾಶಿ ಬಳಿ ನಿರ್ಮಿಸಲಾಗುತ್ತಿದ್ದ 4.5 ಕಿಲೋ ಮೀಟರ್ ಉದ್ದದ ಚಾರ್​ದಾಮ್ ಸುರಂಗ ಮಾರ್ಗದಲ್ಲಿ ಸುಮಾರು 200 ಮೀಟರ್​​ಗಳಷ್ಟು ಕುಸಿತ ಸಂಭವಿಸಿತ್ತು. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಅಲ್ಲಿ ಕೆಲಸ ಮಾಡ್ತಿದ್ದ ಸುಮಾರು 40 ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದಾರೆ. ಸದ್ಯ, ಸುರಂಗದೊಳಗೆ ಈ ಕಾರ್ಮಿಕರಿದ್ದು ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಟನಲ್​ನಲ್ಲಿ ಕಾರ್ಮಿಕರು ಸಿಲುಕಿ ಸುಮಾರು 50 ಗಂಟೆಗಳಾಗಿದ್ದು, ಅವರ ರಕ್ಷಣಾ ಕಾರ್ಯವೇ ಸವಾಲಾಗಿದೆ. ಸದ್ಯಕ್ಕೆ ಸಿಕ್ಕ ಮಾಹಿತಿಯ ಪ್ರಕಾರ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದು, ಅವರಿಗೆ ಆಹಾರ ಹಾಗೂ ನೀರು ಪೂರೈಕೆ ಮಾಡಲಾಗಿದೆ. ರಕ್ಷಣಾ ತಂಡಗಳಿಗೆ ಹಲವು ಸವಾಲುಗಳು ಎದುರಾಗ್ತಿದೆ. ಕುಸಿದಿರುವ ಸುರಂಗ ಹಾಗೂ ಸತತವಾಗಿ ಮಣ್ಣು ಕುಸಿದು ಬೀಳ್ತಿರೋದು ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದೆ.

ಇನ್ನೂ ಎರಡು ದಿನ ನಡೆಯಲಿದೆ ಕಾರ್ಯಾಚರಣೆ
ಅನುಕ್ಷಣವೂ ಸವಾಲು..ರಕ್ಷಣಾ ಕಾರ್ಯವೇ ಬಿರುಸು

ಇನ್ನು, ಸುರಂಗದೊಳಗೆ ಸಿಲುಕಿರುವ ಎಲ್ಲಾ 40 ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಕಾರ್ಮಿಕರು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮೂಲದವರಾಗಿದ್ದು, ಅವರಿಗೆ ಪೈಪ್ ಮೂಲಕ ಆಮ್ಲಜನಕ ಪೂರೈಕೆ ಮಾಡಲಾಗ್ತಿದೆ. ಕಾರ್ಮಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಅಂತ ರಕ್ಷಣಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಸ್ವಲ್ಪ ಸ್ವಲ್ವವೇ ಮಣ್ಣನ್ನು ತೆರವುಗೊಳಿಸುತ್ತಾ ಮುಂದೆ ಹೋಗುವ ಕಾರ್ಯವನ್ನು ರಕ್ಷಣಾ ತಂಡಗಳು ನಡೆಸುತ್ತಿವೆ. ಹೀಗಾಗಿ ಸಂಪೂರ್ಣ ಕಾರ್ಯಾಚರಣೆ ಆಗೋದಕ್ಕೆ ಇನ್ನೂ 48 ಗಂಟೆಗಳು ಬೇಕಾಗಬಹುದು ಅಂತಾ ರಕ್ಷಣಾ ತಂಡದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಮ್ಮ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಕುಸಿದಿರುವ ಸುರಂಗದೊಳಗೆ 10-15 ಮೀಟರ್‌ ಮುಂದೆ ಸಾಗಿದ್ದೇವೆ. ಇನ್ನೂ 35 ಮೀಟರ್‌ ಕೊರೆದು, ಒಳಗೆ ಹೋಗಿ ಕಾರ್ಮಿಕರನ್ನು ರಕ್ಷಿಸುತ್ತೇವೆ. ಸದ್ಯ ಸುರಂಗದೊಳಗಿರುವ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಅವರಿಗೆ ಆಹಾರ ಮತ್ತು ನೀರು ಪೂರೈಕೆ ನೀಡಲಾಗಿದೆ. ಎಲ್ಲರನ್ನೂ ಸುರಕ್ಷಿತವಾಗಿ ವಾಪಸ್ ಕರೆತರುವ ಪ್ರಯತ್ನ ನಡೆಸುತ್ತಿದ್ದೇವೆ.

ಸುರಂಗ ಕುಸಿತ ಜಾಗಕ್ಕೆ ಸಿಎಂ ಪುಷ್ಕರ್ ಸಿಂಗ್ ಭೇಟಿ
ಕಾರ್ಯಾಚರಣೆಯ ಮಾಹಿತಿ ಪಡೆದ ಪ್ರಧಾನಿ ಮೋದಿ

ಸ್ಥಳಕ್ಕೆ ನಿನ್ನೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದು 40 ಕಾರ್ಮಿಕರ ರಕ್ಷಣೆಗೆ ಬೇಕಾಗುವ ಎಲ್ಲಾ ಅಗತ್ಯ ನೆರವು ನೀಡಲಾಗುವುದು ಅಂತ ತಿಳಿಸಿದ್ದಾರೆ. ಸುರಂಗದೊಳಗೆ ಎಲ್ಲಾ ತಜ್ಞರು ಇದ್ದಾರೆ, ಒಳಗೆ ಮಣ್ಣು ಕುಸಿದು 200 ಮೀಟರ್ ಸುರಂಗ ಬಂದ್ ಆಗಿದೆ. ಒಳಗೆ ಸಿಲುಕಿರುವ 40 ಕಾರ್ಮಿಕರನ್ನು ಸಂಪರ್ಕಿಸಲು ಸಾಧ್ಯವಾಗಿದೆ. ಅವರಿಗೆ ಆಹಾರ, ನೀರು, ಆಕ್ಸಿಜನ್ ಒದಗಿಸಲಾಗಿದೆ. ಶೀಘ್ರದಲ್ಲೇ ಎಲ್ಲರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ. ಇನ್ನು, ಪ್ರಧಾನಿ ಮೋದಿ ಸಹ ಉತ್ತರಾಖಂಡ್​​ನಲ್ಲಿ ನಡೀತಿರೋ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಬಗ್ಗೆ ಮಾಹಿತಿ ಪಡೆದಿದ್ದು, ಕೇಂದ್ರ ಸರ್ಕಾರ ಅಗತ್ಯ ನೆರವು ನೀಡೋದಕ್ಕೆ ಸಿದ್ಧವಿದೆ ಅಂತಾ ತಿಳಿಸಿದ್ದಾರೆ. ಇನ್ನು, ಉತ್ತರಾಖಂಡ್​ನಲ್ಲಿ ಆಗಾಗ್ಗೆ ಭೂಕುಸಿತದಂತ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.

ಸಾಮಾನ್ಯವಾಗಿ ನೆಲದಡಿ ಮಣ್ಣಿನ ರಚನೆ ಬದಲಾಗುವುದರಿಂದ ಮಣ್ಣು ಅಸ್ಥಿರವಾಗುತ್ತೆ. ಇಂತಹ ಅಸ್ಥಿರವಾದ ನೆಲ ಯಾವುದೇ ಕಾಮಗಾರಿಗೆ ಯೋಗ್ಯವಾಗಿರಲ್ಲ. ಅದೇ ರೀತಿ ಹಿಮಾಲಯದ ನೆಲ, ಪರ್ವತಗಳಲ್ಲಿರುವ ಕಲ್ಲುಗಳು ಅತ್ಯಂತ ದುರ್ಬಲವಾಗಿವೆ. ಅಲ್ಲದೇ ಕಲ್ಲುಗಳ ಧಾರಣಾ ಸಾಮರ್ಥ್ಯ ಕಡಿಮೆ ಇದ್ದು, ಒಡೆದು ಹೋಗುವ ಅಪಾಯ ಹೆಚ್ಚಿದೆ. ಇನ್ನು, ಇಲ್ಲಿನ ಮಣ್ಣಿನಲ್ಲಿ ಒಡೆದ ಕಲ್ಲುಗಳು ಸಣ್ಣ ಹರಳುಗಳ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ಮಣ್ಣಿನ ಕಣಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆ. ಇನ್ನು, ನೆಲದಡಿ ನೀರು ಕಾಲುವೆಯಂತೆ ಹರಿಯುವುದರಿಂದ ಮಣ್ಣು ಸವಕಳಿಯೂ ಆಗ್ತಿರುತ್ತೆ. ಇದೆಲ್ಲಾ ಕಾರಣದಿಂದಲೇ ಇಲ್ಲಿ ಆಗಾಗ್ಗೆ ಭೂಕುಸಿತಗಳು ಸಂಭವಿಸುತ್ತೆ. ಉತ್ತರಾಖಂಡ್​ನಲ್ಲಿ ರಕ್ಷಣಾ ಕಾರ್ಯಾಚರಣೆ ಬಿರುಸಾಗಿ ನಡೀತಿದೆ. 40 ಕಾರ್ಮಿಕರನ್ನ ಹೊರಕರೆತರೋದಕ್ಕೆ ಸಕಲ ಪ್ರಯತ್ನವನ್ನೂ ಮಾಡಲಾಗ್ತಿದೆ. ಸದ್ಯ ಎಲ್ಲರೂ ಸುರಕ್ಷಿತವಾಗಿದ್ದಾರೆ ಅನ್ನೋದೇ ನಿರಾಳವಾಗೋ ಸಂಗತಿ. ಆದಷ್ಟೂ ಬೇಗ ಎಲ್ಲಾ ಕಾರ್ಮಿಕರು ಸೇಫಾಗಿ ಹೊರಗೆ ಬರಲಿ ಅನ್ನೋದೇ ಎಲ್ಲರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸತತ 2 ದಿನದಿಂದ 40 ಕಾರ್ಮಿಕರ ಜೀವ ಉಳಿಸಲು ಹರಸಾಹಸ; ರಕ್ಷಣಾ ಕಾರ್ಯದ ಮಾಹಿತಿ ಪಡೆದ ಮೋದಿ

https://newsfirstlive.com/wp-content/uploads/2023/11/uttarakhand-1.jpg

Load More