newsfirstkannada.com

ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ ಕಾರ್ಮಿಕರಿಗೆ ಆಹಾರ ರವಾನೆ; ರಕ್ಷಣೆ ಬಗ್ಗೆ ಸಚಿವ ಅನುರಾಗ್ ಜೈನ್ ಹೇಳಿದ್ದೇನು..?

Share :

20-11-2023

  8ನೇ ದಿನಕ್ಕೆ ಕಾಲಿಟ್ಟ 40 ಕಾರ್ಮಿಕರ ಹೊರ ತೆಗೆಯುವ ರಕ್ಷಣಾಕಾರ್ಯ

  ಸುರಂಗದಲ್ಲಿ ಸಿಲುಕಿದ ಕಾರ್ಮಿಕರಿಗೆ 4 ಇಂಚಿನ ಪೈಪ್ ಮೂಲಕ ಆಹಾರ

  ಸಾರಿಗೆ ಮತ್ತು ಹೆದ್ದಾರಿ ಕಾರ್ಯದರ್ಶಿ ಅನುರಾಗ್ ಜೈನ್ ಹೇಳಿದ್ದೇನು?

ಉತ್ತರಾಖಂಡ್​​ನ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದು ಅದರೊಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು 8 ದಿನಕ್ಕೆ ಕಾಲಿಟ್ಟಿದೆ. ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಣೆ ಮಾಡಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಇದರ ಮಧ್ಯೆ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರಿಗೆ 4 ಇಂಚಿನ ಪೈಪ್ ಮೂಲಕ ಆಹಾರವನ್ನು ಕಳುಹಿಸುತ್ತಿದ್ದಾರೆ. ಜೊತೆಗೆ ಮಲ್ಟಿ ವಿಟಮಿನ್‌ಗಳು ಮತ್ತು ಡ್ರೈ ಫ್ರೂಟ್ಸ್​​ಗಳನ್ನು ಸರ್ಕಾರ ಕಳುಹಿಸುತ್ತಿದೆ ಎಂದು ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಕಾರ್ಯದರ್ಶಿ ಅನುರಾಗ್ ಜೈನ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅನುರಾಗ್ ಜೈನ್, ಅದೃಷ್ಟವಶಾತ್‌ ವಿದ್ಯುತ್‌ ಆನ್‌ ಆಗಿರುವ ಕಾರಣ ಒಳಗೆ ಬೆಳಕಿದೆ. ಪೈಪ್‌ಲೈನ್‌ ಇದೆ, ಹೀಗಾಗಿ ನೀರು ಲಭ್ಯವಾಗಿದೆ. 4 ಇಂಚಿನ ಪೈಪ್‌ ಇದ್ದು, ಅದನ್ನು ಕಂಪ್ರೆಷನ್‌ಗೆ ಬಳಸಲಾಗಿದೆ. ಆ ಮೂಲಕ ನಾವು ದಿನ ಆಹಾರವನ್ನು ಕಳುಹಿಸುತ್ತಿದ್ದೇವೆ. ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗೆ ನಾವು ಮಲ್ಟಿವಿಟಮಿನ್‌ಗಳು, ಖಿನ್ನತೆ-ಶಮನಕಾರಿಗಳು ಮತ್ತು ಒಣ ಹಣ್ಣುಗಳನ್ನು ಕಳುಹಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ ಕಾರ್ಮಿಕರಿಗೆ ಆಹಾರ ರವಾನೆ; ರಕ್ಷಣೆ ಬಗ್ಗೆ ಸಚಿವ ಅನುರಾಗ್ ಜೈನ್ ಹೇಳಿದ್ದೇನು..?

https://newsfirstlive.com/wp-content/uploads/2023/11/suranga.jpg

Load More