newsfirstkannada.com

ಉತ್ತರಾಖಂ​​ಡ್ ಸುರಂಗ ದುರಂತದಲ್ಲಿ ಸಿಲುಕಿದವರ ರಕ್ಷಣಾಕಾರ್ಯ ಮತ್ತಷ್ಟು ಪ್ರಗತಿ; ಆದರೆ

Share :

17-11-2023

  ಸುರಂಗ ದುರ್ಘಟನೆಯಲ್ಲಿ 40 ಕಾರ್ಮಿಕರು ಸಿಲುಕಿದ್ದಾರೆ

  6 ದಿನಗಳಿಂದ ಸತತವಾಗಿ ಮುಂದುವರಿದ ರಕ್ಷಣಾಕಾರ್ಯ

  ರಕ್ಷಣಾ ಕಾರ್ಯದಲ್ಲಿ ವಿದೇಶಿ ತಜ್ಞರೂ ಭಾಗಿ, ಸಲಹೆ

ಉತ್ತರಾಖಂಡ್​​ನ ಉತ್ತರಕಾಶಿಯ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದು ಇಂದಿಗೆ 6 ದಿನ ಕಳೆದಿದೆ. ಇನ್ನೂ ಕೂಡ ಒಳಗೆ ಸಿಲಕಿರುವ 40 ಕಾರ್ಮಿಕರನ್ನು ರಕ್ಷಣೆ ಮಾಡೋದಕ್ಕೆ ಸಾಧ್ಯವಾಗಿಲ್ಲ. ಆದರೆ ಕಾರ್ಯಾಚರಣೆಯು ರಾತ್ರೋರಾತ್ರಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ವರದಿಯಾಗಿದೆ.

ಇಂದು ಬೆಳಗ್ಗೆ ವೇಳೆಗೆ ಸುರಂಗದೊಳಗೆ ಬಿದ್ದಿರುವ ಅವಶೇಷಗಳನ್ನು ಆಚೆ ಹಾಕುವ ಕೆಲಸ ಆಗಿದೆ. ಡ್ರಿಲ್ಲಿಂಗ್ ಯಂತ್ರದ ಮೂಲಕ 21 ಮೀಟರ್‌ ದೂರ ಕೊರೆಯಲಾಗಿದೆ. ಕಾರ್ಯಾಚರಣೆ ವೇಳೆ ಕಲ್ಲು ಬಂಡೆಗಳು ಅಡ್ಡಿಯಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎನ್ನಲಾಗಿದೆ.

ಕಾರ್ಮಿಕರನ್ನು ರಕ್ಷಣೆ ಮಾಡಲು ಇನ್ನೂ 45 ರಿಂದ 60 ಮೀಟರ್‌ಗಳವರೆಗೆ ಸುರಂಗವನ್ನು ಕೊರೆಯಬೇಕಾಗುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ರಕ್ಷಣೆಗೆ ಬಳಸಲಾದ ನೂತನ ಯಂತ್ರವು ಗಂಟೆಗೆ 5 ಮೀಟರ್ ದೂರ ಮಾತ್ರ ನುಗ್ಗುತ್ತಿದೆ. ಈಗ ಬಳಸುತ್ತಿರುವ ಯಂತ್ರ ಹಿಂದಿನ ಮಷಿನ್​ಗಿಂತ ಹೆಚ್ಚು ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಸುರಂಗದಲ್ಲಿ ಸಿಲುಕಿರುವ 40 ಮಂದಿ ಕಾರ್ಮಿಕರನ್ನು ರಕ್ಷಿಸಲು ನಾರ್ವೆ ಮತ್ತು ಥೈಲ್ಯಾಂಡ್‌ನ ತಜ್ಞರ ಸಲಹೆಗಳನ್ನು ಪಡೆದುಕೊಂಡು ಕಾರ್ಯಚರಣೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ವಿ.ಕೆ ಸಿಂಗ್ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿ ಕಾರ್ಮಿಕರ ರಕ್ಷಣೆಗೆ ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ, ಕಾರ್ಮಿಕರ ಸುರಕ್ಷತೆಯು ಅತಿಮುಖ್ಯವಾಗಿದ್ದು, ನಾವು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಲಹೆ, ಸಹಕಾರ ತೆಗೆದುಕೊಳ್ಳುತ್ತಿದ್ದೇವೆ. ಇನ್ನು ಎರಡ್ಮೂರು ದಿನಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸುತ್ತೇವೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರಾಖಂ​​ಡ್ ಸುರಂಗ ದುರಂತದಲ್ಲಿ ಸಿಲುಕಿದವರ ರಕ್ಷಣಾಕಾರ್ಯ ಮತ್ತಷ್ಟು ಪ್ರಗತಿ; ಆದರೆ

https://newsfirstlive.com/wp-content/uploads/2023/11/Uttarkashi-tunnel.jpg

Load More