ಉತ್ತರಕಾಶಿಯಲ್ಲಿ ಸುರಂಗ ಕುಸಿದ ಪ್ರಕರಣ
ಕಾರ್ಮಿಕರ ರಕ್ಷಣೆಗಾಗಿ ಮುಂದುವರಿದ ಕಾರ್ಯಾಚರಣೆ
ಕ್ಯಾಮೆರಾದಲ್ಲಿ ಸೆರೆಯಾಯ್ತು ಕಾರ್ಮಿಕರ ಚಲನ ವಲನ
ಉತ್ತರಾಖಂಡ: ನಿರ್ಮಾಣದ ಹಂತದ ಸುರಂಗ ಮಾರ್ಗದಲ್ಲಿ ಮಣ್ಣು ಕುಸಿದು ಸುಮಾರು 40ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಕಳೆದ 10 ದಿನಗಳಿಂದ ಅವರನ್ನು ಹೊರತರಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದೀಗ ಗುಡ್ಡದ ಮೇಲ್ಭಾಗದಿಂದ ರಂಧ್ರ ಕೊರೆಯಲು ಮುಂದಾಗಿದ್ದು, ಆ ಮೂಲಕ ಸಿಲುಕಿಕೊಂಡಿರುವ ಕಾರ್ಮಿಕರ ರಕ್ಷಣೆ ಮಾಡಲು ತಂಡಗಳು ಮುಂದಾಗಿದೆ. ಈ ಬಗ್ಗೆ ಅಂತರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಮಾತನಾಡಿದ್ದಾರೆ.
ಕಳೆದ ಕೆಲವು ಗಂಟೆಗಳಲ್ಲಿ ನಮಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ. ನಾವು ಕಾರ್ಮಿಕರ ಜೊತೆ ನಡೆಸಿದ ವಿಡಿಯೋ ಮಾತುಕತೆ ಸಂತಸತಂದಿದೆ. ನಾವು ಸಕ್ರೀಯವಾಗಿ ಹಲವಾರು ವಿಧಾನಗಳ ಮೂಲಕ ಪ್ರಕ್ರೀಯೆಲ್ಲಿದ್ದೇವೆ. ಸದ್ಯ ಮೇಲ್ಭಾಗದ ಸ್ಥಳ ಸಿದ್ಧಪಡಿಸಿದ ನಂತರ ಲಂಭ ಆಕಾರದಲ್ಲಿ ಕೊರೆಯುವಿಕೆ ಪ್ರಾರಂಭವಾಗುತ್ತದೆ ಎಂದು ಅಂತರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಮೇಲ್ಭಾಗದಿಂದ ಕೊರೆಯುವಿಕೆಗೆ ತುಂಬಾ ಮುಖ್ಯವಾಗಿದೆ. ಇಲ್ಲಿನ ತಂಡವು ಅದ್ಭುತವಾದ ಕೆಲಸವನ್ನು ಮಾಡುತ್ತಿವೆ. ಮೇಲ್ಭಾಗದಿಂದ ಎರಡು ಕೊರೆಯಲು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ. ಸದ್ಯ ಮೇಲ್ಭಾಗದಿಂದ ರಂಧ್ರ ಕೊರೆಯುವ ಯಂತ್ರ ಆಗಮಿಸಿದ್ದು, ಕಾರ್ಯ ಮುಂದುವರಿಸಿದೆ.
ಇನ್ನು ಈಗಾಗಲೇ 6 ಇಂಚಿನ ಪೈಪ್ ಮೂಲಕ ಕಾರ್ಮಿಕರಿಗೆ ಆಹಾರ, ಔಷಧಿ, ನೀರು ಕಳುಹಿಸಿಕೊಡಲಾಗುತ್ತಿದೆ. ಜೊತೆಗೆ ಕ್ಯಾಮೆರಾ ಕಳುಹಿಸಿ ಅವರ ಚಲನ ವಲನಗಳನ್ನು ಗಮನಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ