ಅಂಗಡಿ, ಡಾಬಾದಲ್ಲಿದ್ದವರ ಮೇಲೆ ಬಿತ್ತು ಬೆಟ್ಟದ ಕಲ್ಲು-ಮಣ್ಣು
ನೇಪಾಳದ 16 ಮಂದಿ ಕಣ್ಮರೆ, SDRF ತಂಡ ಕಾರ್ಯಾಚರಣೆ
ಕೆಲ ದಿನಗಳಿಂದ ನಿರಂತರ ಮಳೆಯೇ ಈ ಅವಘಡಕ್ಕೆ ಕಾರಣ
ಡೆಹ್ರಾಡೂನ್: ನಿರಂತರ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಮೂವರು ಸಾವನ್ನಪ್ಪಿದ್ದು 17 ಮಂದಿ ನಾಪತ್ತೆಯಾಗಿರುವ ಘಟನೆ ಉತ್ತರಾಖಂಡ್ನ ಕೇದಾರನಾಥ ಸಮೀಪದ ಗೌರಿಕುಂಡ್ನಲ್ಲಿ ನಡೆದಿದೆ.
ಬೆಟ್ಟದಿಂದ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿ ಅವಶೇಷಗಳು ಉರುಳಿ ಬಂದು ಅಂಗಡಿ ಮುಗ್ಗಟ್ಟುಗಳು, ಡಾಬಾ, ರೆಸ್ಟೋರೆಂಟ್ಗಳ ಮೇಲೆ ಬಿದ್ದಿವೆ. ಇವುಗಳ ಒಳಗಿದ್ದ ಜನರ ಪೈಕಿ ಕೆಲವರು ಓಡಿ ಹೋಗಿ ಪ್ರಾಣ ಉಳಿಸಿಕೊಂಡರೆ, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು 17 ಜನರು ಕಣ್ಮರೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಭೂಕುಸಿತದ ರಭಸಕ್ಕೆ ಅಂಗಡಿ ಮುಗ್ಗಟ್ಟುಗಳು ಮತ್ತು ಡಾಬಾಗಳು ಸಂಪೂರ್ಣ ನಾಶವಾಗಿವೆ. 17 ಜನ ನಾಪತ್ತೆಯಾದವರ ಪೈಕಿ ನಾಲ್ವರು ಸ್ಥಳೀಯರೇ ಆಗಿದ್ದು ಉಳಿದವರು ನೇಪಾಳ ಮೂಲದ ಪ್ರವಾಸಿಗರಾಗಿದ್ದಾರೆ. ಘಟನೆ ಸಂಬಂಧ ಸ್ಥಳದಲ್ಲಿ SDRF ತಂಡ ಕಾರ್ಯಾಚರಣೆ ನಡೆಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ