newsfirstkannada.com

BJP ರಾಜ್ಯಾಧ್ಯಕ್ಷ ಪಟ್ಟಕ್ಕೆ ಮತ್ತೋರ್ವ ಪ್ರಭಾವಿ ಎಂಟ್ರಿ: ಬಿಎಸ್​ವೈ ರಿಟರ್ನ್​ಗೆ ಎದುರಾಳಿ ಪಡೆ ಹೊಸ ಅಸ್ತ್ರ

Share :

25-06-2023

  ಬಿಜೆಪಿಗೆ ಕಗ್ಗಂಟಾದ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತು

  ದಿಢೀರ್​​​​ ಬಲಿಪಶು ದಾಳ ಉರುಳಿಸಿದ್ದೇಕೆ ವಿ. ಸೋಮಣ್ಣ?

  ಬಿಜೆಪಿಯೊಳಗಿನ ತಿಕ್ಕಾಟಕ್ಕೆ ಟ್ವೀಟ್ ಮೂಲಕ ಕೈ ಚಾಟಿ

ಬಿಜೆಪಿಗೆ ವಿಪಕ್ಷ ಸ್ಥಾನ ಮತ್ತು ರಾಜ್ಯಾಧ್ಯಕ್ಷರ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಅರುಣ್​​ ಸಿಂಗ್​​ ಕಳೆದ 15 ದಿನಗಳ ಹಿಂದೆ ನಾಯಕರ ಅಭಿಪ್ರಾಯ ಪಡೆದು ಮರಳಿ ಆಗಿದೆ. ಆದ್ರೂ ಬಿಕ್ಕಟ್ಟು ಶಮನ ಆಗ್ತಿಲ್ಲ. ಒಂದು ವಾರ ಕಳೆದ್ರೆ ಬಜೆಟ್​ ಅಧಿವೇಶನ ಆರಂಭ ಆಗಲಿದೆ. ಇನ್ನೊಂದ್ಕಡೆ ಸಾಲು ಸಾಲು ಚುನಾವಣೆ ಸವಾಲು ಮೆಟ್ಟಿ ನಿಲ್ಲಲು ಕಮಲಕ್ಕೆ ಸಮರ್ಥ ಸೇನಾನಿ ಅಗತ್ಯವಿದೆ. ಇವತ್ತು ಸೋಮಣ್ಣ ಮತ್ತೆ ಬಾಯ್ಬಿಟ್ಟು ಮಾತನಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಕರ್ನಾಟಕ ಚುನಾವಣೆ ಸೋತ ಬಳಿಕ ಕೇಸರಿ ಸೇನೆಯಲ್ಲಿ ನಿರ್ವಾತ ಆವರಿಸಿದೆ. ಬಿಜೆಪಿಯಲ್ಲಿ ಸೃಷ್ಟಿ ಆಗಿರುವ ಈ ಅಸಂತೋಷದ ವಾತಾವರಣ, ರಾಜ್ಯ ಬಿಜೆಪಿಯಲ್ಲಿ ಬಣ ಕದನವನ್ನ ತೀವ್ರ ಸ್ವರೂಪಕ್ಕೆ ಕೊಂಡೊಯ್ದಿದೆ. ಇತ್ತ, ಬಿಜೆಪಿ ಹೈಕಮಾಂಡ್​​​ ನಕಾರಾತ್ಮಕ ಫಲಿತಾಂಶ ಕಂಡು 50 ದಿನಗಳೇ ಕಳೆದ್ರೂ ಕರ್ನಾಟಕದತ್ತ ಇಣುಕಿಯೂ ನೋಡಿಲ್ಲ. ರಾಜ್ಯದಲ್ಲಿ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷನ ಆಯ್ಕೆ ವಿಚಾರವೇ ಅದಕ್ಕೆ ಬೆಟ್ಟದ ಹೊರೆಯಂತೆ ಕಾಣಿಸ್ತಿದೆ.

ಬಿಜೆಪಿಗೆ ಕಗ್ಗಂಟಾದ ನೂತನ ರಾಜ್ಯಾಧ್ಯಕ್ಷರ ಆಯ್ಕೆ
ಕಟೀಲ್‌ ಬದಲಾವಣೆ ಬಗ್ಗೆ ಸ್ಪಷ್ಟವಾಗದ ನಿರ್ಧಾರ!

ಚುನಾವಣೆ ಸೋತ ಬಳಿಕ ಈ ಎರಡು ಸ್ಥಾನಗಳತ್ತ ಛೂಬಾಣ ಪ್ರಯೋಗ ಆಗ್ತಿದೆ. ಇದೇ ಹೊತ್ತಲ್ಲಿ ಕಟೀಲ್​ ಆಡಿದ ರಾಜೀನಾಮೆ ಆಟದ ಬಳಿಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಾಂಪಿಟೇಶನ್​​ ಶುರುವಾಗಿದೆ. ಪ್ರದೇಶವಾರು, ಜಾತಿ ಲೆಕ್ಕಾಚಾರ ಅಳೆಯುವ ಹೊತ್ತಿಗೆ ಎರಡು ಬಣಗಳಲ್ಲಿ ಸಮಾನ ನಾಯಕರನ್ನ ಫೀಲ್ಡ್​​​ಗೆ ಇಳಿಸಲಾಗ್ತಿದೆ. ಈ ಗೊಂದಲಗಳ ನಡುವೆ ಗ್ಯಾರಂಟಿಗಳಿಂದ ಸೊರಗಿದ್ದ ಕಮಲಕ್ಕೆ ಯಡಿಯೂರಪ್ಪ ನಾಟಿಸಿದ ಬಾಣ, ಡೆಲ್ಲಿ ಅಂಗಳದಲ್ಲೇ ಕಂಪನ ಸೃಷ್ಟಿಸಿದೆ.

ಬಿಎಸ್​ವೈ ರಿಟರ್ನ್​ಗೆ ಎದುರಾಳಿ ಪಡೆ ಹೊಸ ಅಸ್ತ್ರ!
ದಿಢೀರ್​​​​ ಬಲಿಪಶು ದಾಳ ಉರುಳಿಸಿದ್ದೇಕೆ ಸೋಮಣ್ಣ?

ವಿರೋಧಿಗಳನ್ನ ಆಟ ಆಡಲು ಬಿಟ್ಟು, ಊಹಿಸದ ರೀತಿ ಗುಹೆಗೆ ನುಗ್ಗಿ ಆಡುವ ರಣಬೇಟೆಯಲ್ಲಿ ಯಡಿಯೂರಪ್ಪ ನಿಸ್ಸೀಮರು. ಈಗಲೂ ಆಗಿದ್ದು ಅದೆ. ಬಿಎಸ್​ವೈ ರಿಟರ್ನ್​, ಸೋತ ಅಭ್ಯರ್ಥಿಗಳು-ಹತಾಶೆಯ ಕಾರ್ಯಕರ್ತರನ್ನ ಚುಂಬಕ ಶಕ್ತಿ ರೀತಿ ಸೆಳೆದಿದೆ. ಆದ್ರೆ, ಮತ್ತದೇ ಬಿಎಸ್​​ವೈ ನಾಯಕತ್ವ ಇಷ್ಟವಿಲ್ಲದ ಎದುರಾಳಿ ಪಡೆ, ಸೋಮಣ್ಣರನ್ನ ಅಖಾಡಕ್ಕೆ ನುಗ್ಗಿಸಿ ಪ್ರತ್ಯುತ್ತರ ಕಾಣಲು ಬಯಸಿದೆ ಅನ್ನೋ ಚರ್ಚೆ ಶುರುವಾಗಿದೆ. ಆ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಹಿರಂಗವಾಗೇ ಆಸೆ ವ್ಯಕ್ತಪಡಿಸಿದ ಲಿಂಗಾಯತ ಸಮುದಾಯದ ಮಾಜಿ ಸಚಿವ ವಿ. ಸೋಮಣ್ಣ, ಬಲಿಪಶು ದಾಳ ಉರುಳಿಸಿದ್ದಾರೆ. ಸೋತ ಸೋಮಣ್ಣ ತಮ್ಮನ್ನೇ ತಾವೇ ಅನ್​​ಎಂಪ್ಲಾಯಿ, ಅಂದ್ರೆ ನಿರುದ್ಯೋಗಿ ಅಂತ ಹೇಳ್ಕೊಂಡಿದ್ದಾರೆ.. ಬುದ್ಧಿವಂತಿಕೆ ಅಸ್ತ್ರ ತೇಲಿಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಕಳೆದುಕೊಂಡಿದ್ದನ್ನ ಮರಳಿಗಿಟ್ಟಿಸಿಕೊಡುವ ಮನದಿಂಗಿತ ಹೊರ ಹಾಕಿದ್ದಾರೆ.

ಕೇವಲ ಲಿಂಗಾಯತ, ಒಕ್ಕಲಿಗರ ಹಿಂದುಳಿದ ವರ್ಗದ ನಾಯಕರನ್ನ ಫ್ರಂಟ್​​​ ರನ್ನರ್​​​​ ಆಗಿ ನಿಲ್ಲಿಸಿದ್ದ ಈ ಬಣಗಳ ಮಧ್ಯೆ ದಲಿತಾಸ್ತ್ರವೊಂದು ತೂರಿ ಬಂದಿದೆ. ವಿ.ಸೋಮಣ್ಣ ಬೇಡಿಕೆ ಮಂಡಿಸಿದ ಬೆನ್ನಲ್ಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬ ಪ್ರಭಾವಿ ನಾಯಕನ ಎಂಟ್ರಿ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೇನು ಕಡಿಮೆನಾ ಅಂತ ಸಂಸದ ಜಿಗಜಿಣಗಿ ಅಂತಾ ಕೇಳಿದ್ದಾರೆ.. ಅವಕಾಶ ಕೊಟ್ಟರೆ ರಾಜ್ಯಾಧ್ಯಕ್ಷನಾಗುವೆ, ಯಾಕೆ ದಲಿತರು ಅಧ್ಯಕ್ಷರಾಗಬಾರದಾ ಅನ್ನೋದು ಜಿಗಜಿಣಗಿ ಪ್ರಶ್ನೆ ಎತ್ತಿದ್ದಾರೆ..
ಇತ್ತ, ಗೆದ್ದ ಹುರುಪಿನಲ್ಲಿರುವ ಕಾಂಗ್ರೆಸ್​ಗೆ ಬಿಜೆಪಿಯೊಳಗಿನ ತಿಕ್ಕಾಟವೇ ಗೇಲಿಯ ವಸ್ತುವಾಗಿದೆ.. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಟೀಲ್​​ ಗೇಮ್​​​ ಬಗ್ಗೆ ವ್ಯಂಗ್ಯದ ಟ್ವೀಟ್​​ ಮಾಡಿದ ಚಾಟಿ ಬೀಸಿದೆ.

ಬಿಜೆಪಿಗೆ ಕುಟುಕಿದ ಕೈಪಡೆ

‘ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದೇನೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷರು ಉಲ್ಟಾ ಹೊಡೆದಿದ್ದಾರಂತೆ! ನಾವು ಸರ್ಕಾರ ರಚಿಸಿದ್ದೂ ಆಯ್ತು, ನಮ್ಮ 5 ಗ್ಯಾರಂಟಿಗಳಲ್ಲಿ 2 ಗ್ಯಾರಂಟಿ ಜಾರಿಯಾಗಿದ್ದೂ ಆಯ್ತು. ಆದರೆ ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ಅಧ್ಯಕ್ಷ ಹುದ್ದೆಯ ಗ್ಯಾರಂಟಿ ಇಲ್ಲ! ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕ ಸಿಗುವ ಗ್ಯಾರಂಟಿಯೂ ಇಲ್ಲ! ಹೀಗಿರುವಾಗ ನಮ್ಮ ಗ್ಯಾರಂಟಿಗಳ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಅಲ್ಲವೇ’
– ಕರ್ನಾಟಕ ಕಾಂಗ್ರೆಸ್​​

ಒಟ್ಟಾರೆ, ಬಿಜೆಪಿಯಲ್ಲಿನ ಈ ಅಂತರ್ಯುದ್ಧಕ್ಕೆ ವಿರಾಮ ನೀಡಿ ಲೋಕ ಕದನಕ್ಕೆ ಸಜ್ಜಾಗಬೇಕಿದೆ.. ಆದಷ್ಟು ಬೇಗ ಎರಡು ಸ್ಥಾನಗಳ ಭರ್ತಿ ಕಾರ್ಯ ಆಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BJP ರಾಜ್ಯಾಧ್ಯಕ್ಷ ಪಟ್ಟಕ್ಕೆ ಮತ್ತೋರ್ವ ಪ್ರಭಾವಿ ಎಂಟ್ರಿ: ಬಿಎಸ್​ವೈ ರಿಟರ್ನ್​ಗೆ ಎದುರಾಳಿ ಪಡೆ ಹೊಸ ಅಸ್ತ್ರ

https://newsfirstlive.com/wp-content/uploads/2023/06/bjp-bs-yediyurappa.jpg

Load More